‘ಮೇಕ್‌ ಇನ್ ಇಂಡಿಯಾ’ ಜೊತೆ ‘ಮೇಕ್‌ ಫಾರ್ ವರ್ಲ್ಡ್’ -ಪ್ರಧಾನಿ ಮೋದಿ ಘೋಷವಾಕ್ಯ

ದೆಹಲಿ: ದೇಶಾದ್ಯಂತ ಇಂದು 74ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ. ಭಾರತದ ಸ್ವಾತಂತ್ರ್ಯಕ್ಕಾಗಿ ಮಣಿದ ಹೋರಾಟಗಾರರ ತ್ಯಾಗ ಮತ್ತು ಬಲಿದಾನವನ್ನ ನೆನೆಯುವ ಸುವರ್ಣ ದಿನ. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಸಮಾಧಿ ರಾಜ್‌ ಘಾಟ್​ಗೆ ತೆರಳಿ ಪುಷ್ಪನಮನ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ ಬಳಿಕ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದರು. ನಂತರ ದೇಶವನ್ನ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ದೇಶದ ಜನರಿಗೆ ಸ್ವಾತಂತ್ರ್ಯೋತ್ಸವದ ಶುಭಕೋರಿದರು. ಇಂದು ನಾವು ಸ್ವತಂತ್ರ ಭಾರತದಲ್ಲಿ ಉಸಿರಾಡುತ್ತಿದ್ದೇವೆ. ಇದರ ಹಿಂದೆ ದೇಶದ ಲಕ್ಷಾಂತರ ಜನರ ತ್ಯಾಗ ಬಲಿದಾನವಿದೆ. […]

‘ಮೇಕ್‌ ಇನ್ ಇಂಡಿಯಾ’ ಜೊತೆ ‘ಮೇಕ್‌ ಫಾರ್ ವರ್ಲ್ಡ್’ -ಪ್ರಧಾನಿ ಮೋದಿ ಘೋಷವಾಕ್ಯ
KUSHAL V

|

Aug 15, 2020 | 8:41 AM

ದೆಹಲಿ: ದೇಶಾದ್ಯಂತ ಇಂದು 74ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ. ಭಾರತದ ಸ್ವಾತಂತ್ರ್ಯಕ್ಕಾಗಿ ಮಣಿದ ಹೋರಾಟಗಾರರ ತ್ಯಾಗ ಮತ್ತು ಬಲಿದಾನವನ್ನ ನೆನೆಯುವ ಸುವರ್ಣ ದಿನ.

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಸಮಾಧಿ ರಾಜ್‌ ಘಾಟ್​ಗೆ ತೆರಳಿ ಪುಷ್ಪನಮನ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ ಬಳಿಕ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದರು.

ನಂತರ ದೇಶವನ್ನ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ದೇಶದ ಜನರಿಗೆ ಸ್ವಾತಂತ್ರ್ಯೋತ್ಸವದ ಶುಭಕೋರಿದರು. ಇಂದು ನಾವು ಸ್ವತಂತ್ರ ಭಾರತದಲ್ಲಿ ಉಸಿರಾಡುತ್ತಿದ್ದೇವೆ. ಇದರ ಹಿಂದೆ ದೇಶದ ಲಕ್ಷಾಂತರ ಜನರ ತ್ಯಾಗ ಬಲಿದಾನವಿದೆ. ಎಲ್ಲ ಸ್ವಾತಂತ್ರ್ಯ ಸೇನಾನಿಗಳು, ಹುತಾತ್ಮರಿಗೆ ನನ್ನ ನಮನ ಎಂದು ಗೌರವ ಸೂಚಿಸಿದರು. ಜೊತೆಗೆ, ಕೊರೊನಾ ವಾರಿಯರ್ಸ್‌ಗೆ ಸಹ ಪ್ರಧಾನಿ ಮೋದಿ ನಮನ ಸಲ್ಲಿಸಿದರು.

ನಾವು ಹಲವು ಸಂಕಲ್ಪಗಳೊಂದಿಗೆ ಮುನ್ನಡೆಯಬೇಕಿದೆ. ನಾವು ನಮ್ಮವರ ಹೋರಾಟವನ್ನು ಎಂದೂ ಮರೆಯಬಾರದು. ಮುಂದಿನ ವರ್ಷ 75ನೇ ಸ್ವಾತಂತ್ರ್ಯೋತ್ಸವ ಆಚರಿಸಲಿದ್ದೇವೆ. 75ನೇ ಸ್ವಾತಂತ್ರ್ಯದಿನ ವೇಳೆಗೆ ನಮ್ಮ ಸಂಕಲ್ಪ ಈಡೇರಬೇಕು. ಕೊರೊನಾ ಸೋಂಕು ಎಲ್ಲವನ್ನೂ ನಿಯಂತ್ರಿಸಿದೆ. ವಿಸ್ತಾರವಾದದ ಯೋಚನೆಯಿಂದ ವಿಸ್ತರಿಸಲು ಹಲವು ಯತ್ನ ನಡೆಯುತ್ತಿದೆ. ಆದ್ರೆ ಭಾರತ ವಿಸ್ತಾರವಾದದ ಯೋಚನೆಗೆ ಸವಾಲಾಗಿ ನಿಂತಿದೆ ಎಂದು ಹೇಳಿದರು. ಭಾರತ ಜನಾಂದೋಲನದ ಮೂಲಕ ಸ್ವಾತಂತ್ರ್ಯ ಪಡೆದಿದೆ. ಇಡೀ ವಿಶ್ವಕ್ಕೆ ಭಾರತ ತನ್ನ ಏಕತೆಯ ಶಕ್ತಿಯನ್ನು ತೋರಿಸಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಜೊತೆಗೆ, ಭಾರತದಲ್ಲಿ FDI ಹೆಚ್ಚಳವಾಗಿದ. ವಿಶ್ವದ ದೊಡ್ಡ ದೊಡ್ಡ ಕಂಪನಿಗಳು ಇದೀಗ ಭಾರತದತ್ತ ಮುಖಮಾಡಿದೆ. ಕೊರೊನಾ ಸಂಕಷ್ಟದಲ್ಲೂ ವಿಶ್ವ ಭಾರತದ ಮೇಲೆ ವಿಶ್ವಾಸವಿರಿಸಿದೆ. ಇಡೀ ವಿಶ್ವಕ್ಕೆ ಭಾರತದಿಂದ ಹಲವು ಅಪೇಕ್ಷೆಗಳಿದೆ. ಹಾಗಾಗಿ, ನಾವು ‘ಮೇಕ್‌ ಇನ್ ಇಂಡಿಯಾ’ ಜೊತೆ ‘ಮೇಕ್‌ ಫಾರ್ ವರ್ಲ್ಡ್’ ಎಂಬ ಗುರಿಯನ್ನು ಇಟ್ಟುಕೊಳ್ಳಬೇಕು ಎಂದು ತಮ್ಮ ಭಾಷಣದಲ್ಲಿ ಹೇಳಿದರು.

ನಾವು ಆತ್ಮನಿರ್ಭರ ಭಾರತ ಎಂಬ ಸಂಕಲ್ಪವನ್ನು ಕೈಗೊಂಡಿದ್ದೇವೆ. ಆತ್ಮನಿರ್ಭರದ ಕನಸು ಈಗ ಸಂಕಲ್ಪವಾಗಿ ಬದಲಾಗಿದೆ. ಭಾರತ ಈ ಸಂಕಲ್ಪವನ್ನು ಪೂರ್ಣಗೊಳಿಸಿ ತೋರಿಸಲಿದೆ ಎಂದು ತಮ್ಮ ಆತ್ಮವಿಶ್ವಾಸದ ಮಾತುಗಳನ್ನು ಆಡಿದರು. ಭಾರತ ಏನನ್ನು ನಿರ್ಧರಿಸುತ್ತೋ ಅದನ್ನು ಮಾಡಿ ತೋರಿಸುತ್ತೆ. ನಾವು ಇಡೀ ವಿಶ್ವಕ್ಕೆ ಇದನ್ನು ತೋರಿಸಬೇಕು. ಭಾರತದ ಸಾಮರ್ಥ್ಯದ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ ಎಂದು ಹೇಳಿದರು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada