ಸಿಗರೇಟ್ ಕೊಡಲಿಲ್ಲ ಎಂದು ಕುಡಿದ ಮತ್ತಿನಲ್ಲಿ ಅಂಗಡಿ ಮಾಲೀಕರ ಸಂಬಂಧಿಗೆ ಬೆಂಕಿ ಹಚ್ಚಿದ ವ್ಯಕ್ತಿ

ಮುಂಬೈನಲ್ಲಿ ಸಿಗರೇಟ್ ನಿರಾಕರಿಸಿದ್ದಕ್ಕೆ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ಅಂಗಡಿ ಮಾಲೀಕರ ಸಂಬಂಧಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆರೋಪಿ ನಾಗೇಂದ್ರ ಯಾದವ್‌ನನ್ನು ಬಂಧಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ರಾಜೇಂದ್ರ ಯಾದವ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾಕಿ ಹಣ ನೀಡಲು ಹೇಳಿದಾಗ ಈ ಕೃತ್ಯ ನಡೆದಿದೆ.

ಸಿಗರೇಟ್ ಕೊಡಲಿಲ್ಲ ಎಂದು ಕುಡಿದ ಮತ್ತಿನಲ್ಲಿ ಅಂಗಡಿ ಮಾಲೀಕರ ಸಂಬಂಧಿಗೆ ಬೆಂಕಿ ಹಚ್ಚಿದ ವ್ಯಕ್ತಿ
ಬೆಂಕಿ-ಸಾಂದರ್ಭಿಕ ಚಿತ್ರ
Image Credit source: ThoughtCo

Updated on: Jan 13, 2026 | 10:23 AM

ಮುಂಬೈ, ಜನವರಿ 13: ಸಿಗರೇಟ್ ಕೊಡಲಿಲ್ಲ ಎಂದು ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಅಂಗಡಿ ಮಾಲೀಕರ ಸಂಬಂಧಿಗೆ ಬೆಂಕಿ(Fire) ಹಚ್ಚಿದ ಘಟನೆ ಮುಂಬೈನಲ್ಲಿ ನಡೆದಿದೆ. ಈ ಆರೋಪದ ಮೇಲೆ ಜೋಗೇಶ್ವರಿ ನಿವಾಸಿ ನಾಗೇಂದ್ರ ಯಾದವ್ (22) ಎಂಬಾತನನ್ನು ಅಂಬೋಲಿ ಪೊಲೀಸರು ಬಂಧಿಸಿದ್ದಾರೆ. ರಾಜೇಂದ್ರ ಯಾದವ್ (44) ಗಂಭೀರ ಸ್ಥಿತಿಯಲ್ಲಿದ್ದಾರೆ. ಅವರ ದೇಹದ ಶೇ.25ರಷ್ಟು ಭಾಗ ಸುಟ್ಟು ಹೋಗಿದೆ. ಈ ಇಡೀ ಘಟನೆ ಆ ಪ್ರದೇಶದಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.

ರಾಜೇಂದ್ರ ಜೋಗೇಶ್ವರಿ ಪಶ್ಚಿಮದ ಯಾದವ್ ನಗರದ ಬಂಡಿವ್ಲಿ ಹಿಲ್ ರಸ್ತೆಯಲ್ಲಿರುವ ಫೇಕು ಪೆಹಲ್ವಾನ್ ಚಾಲ್ ನಿವಾಸಿ. ಆರೋಪಿ ನಾಗೇಂದ್ರ ಅದೇ ಪ್ರದೇಶದಲ್ಲಿ ವಾಸಿಸುತ್ತಿದ್ದು, ರಾಜೇಂದ್ರ ಅವರ ಸೋದರಳಿಯ ಪಂಕಜ್ ನಡೆಸುತ್ತಿದ್ದ ಪಾನ್ ಅಂಗಡಿಯಿಂದ ಸಿಗರೇಟ್ ಖರೀದಿಸುತ್ತಿದ್ದ.

ಜನವರಿ 10 ರಂದು ರಾತ್ರಿ 10.30 ರ ಸುಮಾರಿಗೆ ಪಾನ್ ಅಂಗಡಿಗೆ ಭೇಟಿ ನೀಡುವ ಮೊದಲು ನಾಗೇಂದ್ರ ಸ್ನೇಹಿತನೊಂದಿಗೆ ಮದ್ಯ ಸೇವಿಸಿದ್ದ. ಬಾಕಿ ಇರುವ ಹಣ ಕೊಟ್ಟರೆ ಸಿಗರೇಟ್ ಕೊಡುತ್ತೇನೆ ಎಂದಿದ್ದಕ್ಕೆ ನಾಗೇಂದ್ರ ಅಂಗಡಿ ಮಾಲೀಕನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಮೊದಲು ವಾಗ್ವಾದ ನಡೆಯಿತು ಅಷ್ಟರಲ್ಲಿ, ರಾಜೇಂದ್ರ ಮಧ್ಯಪ್ರವೇಶಿಸಿ ನಾಗೇಂದ್ರ ಅವರನ್ನು ತಕ್ಷಣ ಸ್ಥಳದಿಂದ ಹೊರಹೋಗುವಂತೆ ಸೂಚಿಸಿದ್ದರು.

ಸುಮಾರು 20 ನಿಮಿಷಗಳಲ್ಲಿ ಪೆಟ್ರೋಲ್ ಮತ್ತು ಬೆಂಕಿಕಡ್ಡಿಯೊಂದಿಗೆ ಸ್ಥಳಕ್ಕೆ ಹಿಂತಿರುಗಿದ್ದ, ರಾಜೇಂದ್ರನೊಂದಿಗೆ ವಾಗ್ವಾದ ಮಾಡಲು ಪ್ರಾರಂಭಿಸಿದ್ದ,ರಾಜೇಂದ್ರ ಹಿಂದೆ ಸರಿದಾಗ, ಆರೋಪಿ ಅವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಇದರ ನಂತರ, ಆರೋಪಿ ಪರಾರಿಯಾಗಿದ್ದಾನೆ, ಆದರೆ ರಾಜೇಂದ್ರನನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಜೋಗೇಶ್ವರಿಯ ಮಲ್ಲಿಕಾ ಆಸ್ಪತ್ರೆಯಲ್ಲಿ ಪಾನ್ ಅಂಗಡಿಯಲ್ಲಿ ಬೆಂಕಿ ಹಚ್ಚಲಾದ ರಾಜೇಂದ್ರ ಯಾದವ್.

ಮತ್ತಷ್ಟು ಓದಿ: 20 ದಿನ ಸಾವು ಬದುಕಿನ ನಡುವೆ ಹೋರಾಡಿದರೂ ಉಳಿಯಲಿಲ್ಲ ಜೀವ! ಚಿಕಿತ್ಸೆ ಫಲಿಸದೆ ಸಾವು

ನಾನು ಈ ಪಾನ್ ಅಂಗಡಿಯನ್ನು ಹಲವು ವರ್ಷಗಳಿಂದ ನಡೆಸುತ್ತಿದ್ದೇನೆ. ನಾಗೇಂದ್ರ ಯಾವಾಗಲೂ ಬರುತ್ತಿದ್ದ. ಬಾಕಿ ಹಣ ಪಾವತಿಸದ ಹೊರತು ನಾನು ಅವನಿಗೆ ಸಿಗರೇಟ್ ನೀಡಲು ನಿರಾಕರಿಸಿದಾಗ ಆತ ಕುಡಿದಿದ್ದ. ನಮ್ಮ ಜಗಳದ ಸಮಯದಲ್ಲಿ ನನ್ನ ಚಿಕ್ಕಪ್ಪ ನನಗೆ ಸಹಾಯ ಮಾಡಲು ಪ್ರಯತ್ನಿಸಿದರು. ಇದರಿಂದಾಗಿ, ನಾಗೇಂದ್ರ ಅವನ ಮೇಲೆ ಸೇಡು ತೀರಿಸಿಕೊಂಡರು ಎಂದು ಪಂಕಜ್ ಹೇಳಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ