ವೈದ್ಯಕೀಯ ಲೋಕವೇ ಅಚ್ಚರಿಪಡುವಂತಹ ಪವಾಡಗಳು ಅದೆಷ್ಟೋ ನಡೆದುಹೋಗಿವೆ. ಹಾಗೇ ಈಗೊಂದು ಘಟನೆ ನಡೆದಿದ್ದು ಜೈಪುರದ ನಾರಾಯಣ ಆಸ್ಪತ್ರೆಯಲ್ಲಿ. ಇಲ್ಲಿ ನಿವೃತ್ತ ಪೊಲೀಸ್ ಕಾನ್ಸ್ಟೆಬಲ್ ಒಬ್ಬರಿಗೆ ಮಿದುಳು ಸರ್ಜರಿ (Brain Surgery) ನಡೆದಿತ್ತು. ಮಿದುಳಿನಲ್ಲಿ ಗಡ್ಡೆಯಾಗಿ ತುಂಬ ಸಂಕಷ್ಟದಲ್ಲಿದ್ದ ಇವರಿಗೆ ಸರ್ಜರಿ ಮಾಡುವುದಾಗಿ ನಿಶ್ಚಯವೇನೋ ಆಗಿತ್ತು. ಆದರೆ ಆ ಶಸ್ತ್ರಚಿಕಿತ್ಸೆಯಲ್ಲಿ ಸ್ವಲ್ಪ ಏರುಪೇರಾದರೂ ಆ ರೋಗಿಯ ಆರೋಗ್ಯ (Health) ಇನ್ನಷ್ಟು ಹದಗೆಡುವ ಸಾಧ್ಯತೆ ಇತ್ತು. ಅದೆಲ್ಲಕ್ಕಿಂತ ಮಿಗಿಲಾಗಿ, ವೈದ್ಯರುಗಳಿಗೇ ಪೂರ್ತಿಯಾಗಿ ನಂಬಿಕೆ ಇರಲಿಲ್ಲ, ಸರ್ಜರಿ ಯಶಸ್ವಿಯಾಗಬಹುದು ಎಂದು.
ಆದರೆ ಪವಾಡವೆಂಬಂತೆ ರೋಗಿಗೆ ಮಾಡಲಾದ ಸರ್ಜರಿ ಯಶಸ್ವಿಯಾಗಿದೆ. ಅದಕ್ಕೆ ಕಾರಣ ಆ ಪೊಲೀಸ್ ಕಾನ್ಸ್ಟೆಬಲ್ ತಮ್ಮ ಸರ್ಜರಿ ವೇಳೆ ಪಠಿಸುತ್ತಿದ್ದ ಗಾಯತ್ರಿ ಮಂತ್ರ ಎಂದೇ ಹೇಳಲಾಗುತ್ತಿದೆ. ಪೊಲೀಸ್ ಕಾನ್ಸ್ಟೆಬಲ್ ಹೆಸರು ರಿದಂಲಾಲ್ ರಾಮ್. 57ವರ್ಷದ ಇವರಿಗೆ ತೀವ್ರವಾಗಿ ಅಪಸ್ಮಾರ ಕಾಣಿಸಿಕೊಂಡಿತ್ತು. ರೋಗ ವಿಕಾರದಿಂದ ಮಾತಾಡಲೂ ಸಾಧ್ಯವಾಗುತ್ತಿರಲಿಲ್ಲ. ತಪಾಸಣೆ ಮಾಡಿದಾಗ ಅವರ ಮಿದುಳಿನಲ್ಲಿ ಗಡ್ಡೆ ಇರುವುದು ಗೊತ್ತಾಗಿತ್ತು. ಸರ್ಜರಿ ಮಾಡುವಾಗ ಚೂರೇಚೂರು ಹೆಚ್ಚು ಕಡಿಮೆಯಾದರೂ ಪೂರ್ತಿಯಾಗಿ ಮಾತು ನಿಲ್ಲುತ್ತಿತ್ತು ಅಥವಾ ಪ್ಯಾರಾಲಿಸಿಸ್ ಉಂಟಾಗುತ್ತಿತ್ತು. ಮಿದುಳಿನ ತುಂಬ ಸೂಕ್ಷ್ಮವಾದ ಜಾಗದಲ್ಲಿ ಈ ಗಡ್ಡೆ ಇದ್ದಿದ್ದರಿಂದ ಅಪಾಯ ಜಾಸ್ತಿಯಾಗಿಯೇ ಇತ್ತು. ಆದರೂ ಆಸ್ಪತ್ರೆಯ ಡಾ.ಕೆ.ಕೆ.ಬನ್ಸಾಲ್ ನೇತೃತ್ವದ ತಂಡ ಈ ಸಂಕೀರ್ಣ ಸರ್ಜರಿಯನ್ನು ನಡೆಸಿತ್ತು. ಸುಮಾರು ನಾಲ್ಕು ತಾಸುಗಳ ಕಾಲ ನಡೆದ ಶಸ್ತ್ರಚಿಕಿತ್ಸೆ ವೇಳೆ ಪೊಲೀಸ್ ಕಾನ್ಸ್ಟೆಬಲ್ ಒಂದೇ ಸಮನೆ ಗಾಯತ್ರಿ ಮಂತ್ರ ಪಠಣ ಮಾಡುತ್ತಲೇ ಇದ್ದರು.
ಈ ಗಡ್ಡೆ ತುಂಬ ಸೂಕ್ಷ್ಮ ಪ್ರದೇಶದಲ್ಲಿ ಆಗಿತ್ತು. ಅದರ ನಿಖರ ಸ್ಥಳದ ಮೇಲೆ ಗಮನ ಕೇಂದ್ರೀಕರಿಸಲು ಹೆಚ್ಚಿನ ಸಾಮರ್ಥ್ಯವಿರುವ ಮೈಕ್ರೋಸ್ಕೋಪ್ ಬಳಸಬೇಕಾಯಿತು ಎಂದು ಆಸ್ಪತ್ರೆ ನಿರ್ದೇಶಕರಾದ ಡಾ. ಮಾಲಾ ಅರೋನ್ ತಿಳಿಸಿದ್ದಾರೆ. ಇನ್ನು ಸರ್ಜರಿ ವೇಳೆ ರಾಮ್ ಅವರು ಎಚ್ಚರವಾಗಿರುವಂತೆಯೇ ನೋಡಿಕೊಳ್ಳಲಾಗಿತ್ತು. ತಲೆಭಾಗಕ್ಕೆ ಅನಸ್ತೇಶಿಯಾ ಕೊಡಲಾಗಿತ್ತು. ರಾಮ್ ತಮ್ಮ ಮನಸಿನ ಭಯ ಹೋಗಲಾಡಿಸಿಕೊಳ್ಳಲು ಗಾಯತ್ರಿ ಮಂತ್ರ ಪಠಣೆ ಮಾಡುತ್ತಿದ್ದರೂ ಎಂದೂ ಮಾಲಾ ಹೇಳಿದ್ದಾರೆ. 2018ರಲ್ಲೂ ಇಂಥದ್ದೇ ಒಂದು ಪ್ರಕರಣ ನಡೆದಿತ್ತು. 30 ವರ್ಷದ ಅಕೌಂಟಂಟ್ ಒಬ್ಬರು ತಮ್ಮ ಮಿದುಳು ಸರ್ಜರಿ ವೇಳೆ ಹನುಮಾನ್ ಚಾಲೀಸಾ ಪಠಿಸುತ್ತಿದ್ದರು.
ಭಾರತದ ಹೊರಗೆ ಕೊವಿಡ್ ಲಸಿಕೆ ಪಡೆದವರಿಗೆ ಶೀಘ್ರದಲ್ಲೇ ಪ್ರಮಾಣಪತ್ರ ನೀಡಲಿದೆ ಕೇಂದ್ರ ಸರ್ಕಾರ