ಕೊರೊನಾ ಸಂಕಷ್ಟ, 3 ತಿಂಗಳ ಶಾಲಾ ಶುಲ್ಕ ಮನ್ನಾ ಮಾಡಿ ಮಾದರಿಯಾದ ಖಾಸಗಿ ಶಾಲೆ!

ಕೊರೊನಾ ಸಂಕಷ್ಟ, 3 ತಿಂಗಳ ಶಾಲಾ ಶುಲ್ಕ ಮನ್ನಾ ಮಾಡಿ ಮಾದರಿಯಾದ ಖಾಸಗಿ ಶಾಲೆ!

ಕೊರೊನಾ ಸಂಕಷ್ಟ ಜಗತ್ತಿನಲ್ಲಿ ಯಾರನ್ನೂ ಬಿಟ್ಟಿಲ್ಲ. ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಸಂತ್ರಸ್ತರೇ ಆಗಿದ್ದಾರೆ. ಶಾಲಾ ಕಾಲೇಜುಗಳು ಸಹ ಸಂಕಷ್ಟ ಎದುರಿಸುತ್ತಿವೆ. ಒದು ಕಡೆ ಮಕ್ಕಳ ಆರೋಗ್ಯ ಕಾಪಾಡಬೇಕಿದೆ, ಮತ್ತೊಂದು ಕಡೆ ಪೋಷಕರ ಹಣಕಾಸು ಆರೋಗ್ಯದ ಬಗ್ಗೆಯೂ ಚಿಂತಿಸಬೇಕಿದೆ. ಈ ಮಧ್ಯೆ ಸ್ವತಃ ಶಾಲೆಗಳ ಆಡಳಿತ ಮಂಡಳಿಗಳ ಸ್ಥಿತಿಗತಿಗಳನ್ನೂ ಪರಿಗಣಿಸಬೇಕಾಗುತ್ತದೆ. ಅಂತಹುದರಲ್ಲಿ ಉತ್ತರಪ್ರದೇಶದ ಖಾಸಗಿ ಶಾಲೆಯೊಂದು ತ್ರೈಮಾಸಿಕ ಶಾಲಾ ಫೀ ಅನ್ನು ಕಟ್ಟಬೇಡಿ ಎಂದು ಪೋಷಕರಿಗೆ ಸಮಾಧಾನಕರ ಸಂದೇಶ ನೀಡಿದೆ.

ಹೌದು, ಪ್ರಯಾಗ್​ರಾಜ್​ನಲ್ಲಿರುವ ಖಾಸಗಿ ಶಾಲೆಯೊಂದು ಮೂರು ತಿಂಗಳ ಶಾಲಾ ಶುಲ್ಕ ಮನ್ನಾ ಮಾಡಿ ಮಾದರಿಯಾಗಿದೆ. ಏಪ್ರಿಲ್, ಮೇ ಮತ್ತು ಜೂನ್ ತಿಂಗಳ ಶಾಲಾ ಶುಲ್ಕವನ್ನು ಕಟ್ಟುವುದು ಬೇಡ ಎಂದು ಪೋಷಕರಿಗೆ ಸೂಚಿಸಿದೆ.

ಸಿಬ್ಬಂದಿಗೆ ಸಂಬಳ ನೀಡುವುದನ್ನು ನಿಲ್ಲಿಸುವುದಿಲ್ಲ
ಸಮಾಜದ ನಾನಾ ಸ್ತರಗಳ ಪೋಷಕರು ತಮ್ಮ ಮಕ್ಕಳನ್ನು ನಮ್ಮ ಶಾಲೆಗೆ ಕಳುಹಿಸುತ್ತಾರೆ. ಆದ್ರೆ ಈಗ ಕೊರೊನಾ ಲಾಕ್​ಡೌನ್​ನಿಂದಾಗಿ ಪೋಷಕರಿಗೆ ಹಣ ಕಟ್ಟುವುದು ಕಷ್ಟವಾಗುತ್ತದೆ. ಹಾಗಾಗಿ ಮೂರು ತಿಂಗಳ ಶಾಲಾ ಶುಲ್ಕವನ್ನು ನಾವು ಮಾಫಿ ಮಾಡಿದ್ದೇವೆ. ಆದ್ರೆ ನಾವು ನಮ್ಮ ಸಿಬ್ಬಂದಿಗೆ ಸಂಬಳ ನೀಡುವುದನ್ನು ನಿಲ್ಲಿಸುವುದಿಲ್ಲ ಎಂದು ಮಮತಾಮಯಿಯಾದ ಶಾಲಾ ಪ್ರಿನ್ಸಿಪಾಲ್ ಮಮತಾ ಮಿಶ್ರಾ ತಿಳಿಸಿದ್ದಾರೆ.

Click on your DTH Provider to Add TV9 Kannada