ಭಾರತದಲ್ಲಿ ಪುರುಷರೂ ಸುರಕ್ಷಿತರಲ್ಲ! ನಾಲ್ವರು ಯುವತಿಯರು ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದರೆಂದು ಪಂಜಾಬ್ ಕಾರ್ಮಿಕನ ಅರೋಪ!

ಕೇವಲ ಕಾಮತೃಷೆ ತೀರಿಸಿಕೊಳ್ಳುವ ಉದ್ದೇಶದಿಂದ ತನ್ನನ್ನು ಅಪಹರಿಸಲಾಗಿತ್ತು ಎಂದು ಕಾರ್ಮಿಕ ಹೇಳಿದ್ದಾನೆ. ಚರ್ಮದ ಫ್ಯಾಕ್ಟರಿಯೊಂದರಲ್ಲಿ ತಾನು ಕಾರ್ಮಿಕನಾಗಿ ಕೆಲಸ ಮಾಡುತ್ತಿರುವೆನೆಂದು ಅವನು ಮಾಧ್ಯಮಕ್ಕೆ ತಿಳಿಸಿದ್ದಾನೆ.

ಭಾರತದಲ್ಲಿ ಪುರುಷರೂ ಸುರಕ್ಷಿತರಲ್ಲ! ನಾಲ್ವರು ಯುವತಿಯರು ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದರೆಂದು ಪಂಜಾಬ್ ಕಾರ್ಮಿಕನ ಅರೋಪ!
ಸಾಂದರ್ಭಿಕ ಚಿತ್ರ
TV9kannada Web Team

| Edited By: Arun Belly

Nov 23, 2022 | 11:55 AM

ಜಲಂಧರ್: ಹೀಗೂ ಉಂಟೇ? ಹೌದು ಮಾರಾಯ್ರೇ ಹೀಗೂ ಉಂಟು. ಭಾರತದಲ್ಲಿ ಇದು ಕೇಳರಿಯದ ಸುದ್ದಿ ಅಂದರೆ ಅತಿಶಯೋಕ್ತಿ ಎನಿಸದು. ವಿಷಯ ಏನು ಗೊತ್ತಾ? ಜಲಂಧರ್ ನ (Jallandhar) ಕೂಲಿ ಕಾರ್ಮಿಕನೊಬ್ಬ (Labourer) ನಾಲ್ವರು ಮಹಿಳೆಯರು ತನ್ನನ್ನು ಬಿಳಿ ಕಾರೊಂದರಲ್ಲಿ ಅಪಹರಿಸಿದ ಬಳಿಕ ಕಣ್ಣುಗಳಿಗೆ ಯಾವುದೋ ಕೆಮಿಕಲ್ ಸಿಂಪಡಿಸಿ, ಬಲವಂತದಿಂದ ಡ್ರಗ್ಸ್ ಸೇವಿಸುವಂತೆ ಮಾಡಿ ಅರಣ್ಯ ಪ್ರದೇಶವೊಂದಕ್ಕೆ ಕರೆದೊಯ್ದ್ದು ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪ ಮಾಡಿದ್ದಾನೆ. ಸಾಮೂಹಿಕ ಅತ್ಯಾಚಾರ (gang rape) ನಡೆಸಿದ ನಂತರ ರಾತ್ರಿ ಸಮಯದಲ್ಲಿ ತನ್ನನ್ನು ನಿರ್ಜನ ಪ್ರದೇಶವೊಂದರಲ್ಲಿ ಕಾರಿನಿಂದ ಇಳಿಸಿ ಹೋದರೆಂದು ಅವನು ಹೇಳಿದ್ದಾನೆ. ಗಮನಿಸಬೇಕಾದ ಅಂಶವೇನೆಂದರೆ ಅವನು ಪೊಲೀಸರಿಗೆ ದೂರು ಸಲ್ಲಿಸದೆ, ಸ್ಥಳೀಯ ಮಾಧ್ಯಮವೊಂದರ ಮುಂದೆ ಗೋಳು ತೋಡಿಕೊಂಡಿದ್ದಾನೆ. ಅವನಿಗೆ ಮದುವೆಯಾಗಿದ್ದು ಮಕ್ಕಳೂ ಇದ್ದಾರೆ.

ಮಾಧ್ಯಮದ ವರದಿಯ ಪ್ರಕಾರ ‘ಸಂತ್ರಸ್ತ’ ನ ಪತ್ನಿಯೇ ದೂರು ಸಲ್ಲಿಸುವಂತೆ ಒತ್ತಾಯಸಿದ್ದಾಳೆ. ಅವನ ಜೀವಕ್ಕೇನಾದರೂ ಅಪಾಯವಾಗಿದ್ದರೆ ಕುಟುಂಬದ ಗತಿ ಏನಾಗುತಿತ್ತು ಅಂತ ಯೋಚಿಸು ಆಕೆ ಗಂಡನಿಗೆ ಹೇಳಿದ್ದಾಳೆ.

ಕೇವಲ ಕಾಮತೃಷೆ ತೀರಿಸಿಕೊಳ್ಳಲು ಅಪಹರಣ!

ಕೇವಲ ಕಾಮತೃಷೆ ತೀರಿಸಿಕೊಳ್ಳುವ ಉದ್ದೇಶದಿಂದ ತನ್ನನ್ನು ಅಪಹರಿಸಲಾಗಿತ್ತು ಎಂದು ಕಾರ್ಮಿಕ ಹೇಳಿದ್ದಾನೆ. ಚರ್ಮದ ಫ್ಯಾಕ್ಟರಿಯೊಂದರಲ್ಲಿ ತಾನು ಕಾರ್ಮಿಕನಾಗಿ ಕೆಲಸ ಮಾಡುತ್ತಿರುವೆನೆಂದು ಅವನು ಮಾಧ್ಯಮಕ್ಕೆ ತಿಳಿಸಿದ್ದಾನೆ.

ಸೋಮವಾರ ಸಾಯಂಕಾಲದ ಅವನು ಕೆಲಸ ಮುಗಿಸಿಕೊಂಡು ಕಪೂರ್ತಲ ರಸ್ತೆಯ ಮುಖಾಂತರ ಮನೆಗೆ ಹೋಗುವಾಗ ನಾಲ್ವರು ಯುವತಿಯರು (ಎಲ್ಲ 20-25ರ ಪ್ರಾಯದವರು ಅಂತ ಅವನು ಹೇಳಿದ್ದಾನೆ) ಬಿಳಿ ಕಾರಲ್ಲಿ ಅವನನ್ನು ಸಮೀಪಿಸಿದ್ದಾರೆ. ಕಾರು ಓಡಿಸುತ್ತಿದ್ದ ಯುವತಿ ಅಡ್ರೆಸ್ ಬರೆದಿದ್ದ ಚೀಟಿಯೊಂದನ್ನು ಅವನಿಗೆ ತೋರಿಸಿ ಆ ಸ್ಥಳ ಎಲ್ಲಿ ಬರುತ್ತೆ ಅಂತ ಕೇಳಿದ್ದಾಳೆ. ಅವನು ಚೀಟಿಯಲ್ಲಿ ಬರೆದಿರುವುದನ್ನು ನೋಡುತ್ತಿರುವಾಲೇ ಆ ಯುವತಿ ಅವನ ಕಣ್ಣಿಗೆ ಕೆಮಿಕಲ್ಲೊಂದನ್ನು ಎರಚಿದ್ದಾಳೆ. ಅವನಿಗೆ ಕಣ್ಣು ಕಾಣದಂತಾಗಿ ಪ್ರಜ್ಞೆ ತಪ್ಪಿದ್ದಾನೆ.

ಯುವತಿಯರು ಮದ್ಯ ಸೇವಿಸುತ್ತಿದ್ದರು!

ಪ್ರಜ್ಞೆ ಮರುಕಳಿಸಿದಾಗ ಅವನು ಅದೇ ಯುವತಿಯರ ಜೊತೆ ಕಾರಿನಲ್ಲಿ ಕುಳಿತ್ತಿದ್ದ. ಅವನ ಕಣ್ಣಿಗೆ ಬಟ್ಟೆ ಕಟ್ಟಲಾಗಿತ್ತು ಮತ್ತು ಎರಡೂ ಕೈಗಳನ್ನು ಬೆನ್ನ ಹಿಂದೆ ಕಟ್ಟಲಾಗಿತ್ತು. ಆದಾದ ಮೇಲೆ ಯುವತಿಯರು ಅವನನ್ನು ಅಜ್ಞಾತ ಪ್ರದೇಶವೊಂದಕ್ಕೆ ಒಯ್ದು ಬಲವಂತದಿಂದ ಡ್ರಗ್ಸ್ ನೀಡಿದ್ದಾರೆ. ಅವರೆಲ್ಲ ಮದ್ಯ ಸೇವಿಸುತ್ತಿದ್ದರು ಮತ್ತು ತನಗೂ ಬಲವಂತದಿಂದ ಕುಡಿಸಿದರು ಅಂತ ಅವನು ಮಾಧ್ಯಮದವರಿಗೆ ಹೇಳಿದ್ದಾನೆ.

ನಂತರ ಅವರ ಸರದಿಯ ಮೇಲೆ ತನ್ನ ಮೇಲೆ ಅತ್ಯಾಚಾರ ನಡೆಸಿದರು ಎಂದು ‘ಸಂತ್ರಸ್ತ’ ಹೇಳಿದ್ದಾನೆ.

ಬೆಳಗಿನ ಜಾವ ಸುಮಾರು ಮೂರು ಗಂಟೆಗೆ ಯುವತಿಯರು ಪುನಃ ಅವನ ಕೈ ಮತ್ತು ಕಣ್ಣುಗಳನ್ನು ಕಟ್ಟಿ ಅವನೊಂದಿಗೆ ಅಲ್ಲಿಂದ ಹೊರಟಿದ್ದಾರೆ.

ಯುವತಿಯರೆಲ್ಲ ಕುಲೀನ ಮನೆತನದವರು ಮತ್ತು ಇಂಗ್ಲಿಷ್ ಭಾಷೆಯಲ್ಲೇ ಮಾತಾಡುತ್ತಿದ್ದರು, ಆದರೆ ತನ್ನೊಂದಿಗೆ ಮಾತ್ರ ಪಂಜಾಬಿ ಭಾಷೆಯಲ್ಲಿ ಮಾತಾಡಿದರು ಎಂದು ಅವನು ಮಾಧ್ಯಮಕ್ಕೆ ಹೇಳಿದ್ದಾನೆ. ಕಾರ್ಮಿಕ ಯುವತಿಯರಿಂದ ಅತ್ಯಾಚಾರಕ್ಕೊಳಗಾದ ಸುದ್ದಿ ಹರಡುತ್ತಿದ್ದಂತೆಯೇ ಪಂಜಾಬ್ ಗುಪ್ತಚರ ಇಲಾಖೆ ಸುವೊ ಮೋಟು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ.

ಮತ್ತಷ್ಟು ದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್  ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada