ಕುಲ್ಗಾಂವ್ನಲ್ಲಿ ಭದ್ರತಾ ಪಡೆಗಳು-ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ; ಪೊಲೀಸ್ ಹುತಾತ್ಮ, ಉಗ್ರ ಸಾವು
ಸೋಮವಾರ ಕುಲಗಾಂವ್ ಜಿಲ್ಲೆಯ ಹುಸ್ಸೇನಿಪೋರಾದಲ್ಲಿ ಇಬ್ಬರು ಉಗ್ರರ ಹತ್ಯೆಯಾಗಿತ್ತು. ಅವರಿಬ್ಬರೂ ಸ್ಥಳೀಯ ಉಗ್ರರೇ ಆಗಿದ್ದರು. ಅಲ್-ಬದ್ರ್ ಎಂಬ ಸಂಘಟನೆಗೆ ಸೇರಿದವರಾಗಿದ್ದರು.
ಜಮ್ಮು-ಕಾಶ್ಮೀರದ ಕುಲಗಾಂವ್ (Kulgam District In Jammu-Kashmir) ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಜೈಷ್ ಇ ಮೊಹಮ್ಮದ್ AJaish-e-Mohammad) ಸಂಘಟನೆಯ ಉಗ್ರ ಮತ್ತು ಓರ್ವ ಪೊಲೀಸ್ ಸಿಬ್ಬಂದಿ ಮೃತರಾಗಿದ್ದಾರೆ. ಹಾಗೇ, ಮೂವರು ಯೋಧರು ಸೇರಿ ಒಟ್ಟು ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.
ಕುಲಗಾಂವ್ನ ಪರಿವಾನ್ ಪ್ರದೇಶದಲ್ಲಿ ಉಗ್ರರು ಅಡಗಿದ್ದಾರೆ ಎಂದ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಕಾರ್ಯಾಚರಣೆ ಶುರು ಮಾಡಿದ್ದವು. ತಾವಿದ್ದ ಪ್ರದೇಶವನ್ನು ಪೊಲೀಸರು ಸುತ್ತುವರಿದಿದ್ದಾರೆ ಎಂದು ತಿಳಿಯುತ್ತಿದ್ದಂತೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ.ಅದಕ್ಕೆ ಪ್ರತಿಯಾಗಿ ಭದ್ರತಾ ತಂಡವೂ ಕೂಡ ಫೈರಿಂಗ್ ನಡೆಸಿದೆ. ಉಗ್ರರ ಗುಂಡಿಗೆ ಪೊಲೀಸ್ವೊಬ್ಬ ಮೃತಪಟ್ಟಿದ್ದಾರೆ. ಹಾಗೇ, ಭದ್ರತಾ ಪಡೆಗಳ ಗುಂಡೇಟಿಗೆ ಭಯೋತ್ಪಾದಕನೂ ಒಬ್ಬ ಸತ್ತಿದ್ದಾನೆ ಎಂದು ಕಾಶ್ಮೀರ ವಲಯದ ಐಜಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ.
#KulgamEncounterUpdate: One police personnel SgCt Rohit Chhib attained #martyrdom, 03 Army soldiers got injured. 02 civilians also got minor injuries. 01 #terrorist of #terror outfit JeM killed. #Operation continues: IGP Kashmir@JmuKmrPolice https://t.co/7VWKkqTnbQ
— Kashmir Zone Police (@KashmirPolice) January 12, 2022
ಸೋಮವಾರ ಕುಲಗಾಂವ್ ಜಿಲ್ಲೆಯ ಹುಸ್ಸೇನಿಪೋರಾದಲ್ಲಿ ಇಬ್ಬರು ಉಗ್ರರ ಹತ್ಯೆಯಾಗಿತ್ತು. ಅವರಿಬ್ಬರೂ ಸ್ಥಳೀಯ ಉಗ್ರರೇ ಆಗಿದ್ದರು. ಅಲ್-ಬದ್ರ್ ಎಂಬ ಸಂಘಟನೆಗೆ ಸೇರಿದವರಾಗಿದ್ದರು. ಕಳೆದ 9 ದಿನಗಳಲ್ಲಿ ಏಳು ಎನ್ಕೌಂಟರ್ಗಳು ನಡೆದಿದ್ದು, ಒಟ್ಟು 13 ಭಯೋತ್ಪಾದಕರು ಮೃತಪಟ್ಟಿದ್ದಾರೆ ಎಂದೂ ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ಇದನ್ನೂ ಓದಿ: ಶೀತ, ಕೆಮ್ಮಿನಿಂದ ಬಳುತ್ತಿದ್ದರೆ ಸ್ಟೀಮ್ ಮೊರೆ ಹೋಗಿ; ಕಡಿಮೆ ಸಮಯದಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ