ದೆಹಲಿ: ವೈದ್ಯರೊಬ್ಬರು ಹಸುವಿನ ಸಗಣಿ (cow dung)ತಿನ್ನುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಗಣಿಯ ಮಹತ್ವವನ್ನು ವಿವರಿಸುವ ಈ ವೈದ್ಯರ ಹೆಸರು ಮನೋಜ್ ಮಿತ್ತಲ್ (Manoj Mittal). ಇವರು ಕರ್ನಾಲ್ ನಿವಾಸಿ. ಎಂಬಿಬಿಎಸ್ (MBBS) ಪದವಿ ಪಡೆದಿರುವ ಮನೋಜ್ ಕಳೆದ ಹಲವು ವರ್ಷಗಳಿಂದ ಗೋಮೂತ್ರ (cow urine), ಸಗಣಿ ಸೇವಿಸುತ್ತಿದ್ದಾರೆ. ಹಸುವಿನ ಸಗಣಿಯಲ್ಲಿ ಬಿ ಜೀವಸತ್ವಗಳು ಅಧಿಕವಾಗಿವೆ. ಇದು ವಿಕಿರಣದಿಂದ ರಕ್ಷಿಸುತ್ತದೆ ಎಂದು ಮಿತ್ತಲ್ ಹೇಳುತ್ತಾರೆ. ಮೊಬೈಲ್, ಎಸಿ, ಫ್ರಿಡ್ಜ್ ಮತ್ತಿತರ ವಿದ್ಯುತ್ ಉಪಕರಣಗಳಿಂದ ವಿಕಿರಣ ಹೊರಸೂಸುತ್ತದೆ. ಇದು ಕ್ಯಾನ್ಸರ್‌ನಂತಹ ರೋಗಗಳಿಗೆ ಕಾರಣವಾಗುತ್ತದೆ. ಆದರೆ, ಹಸುವಿನ ಸಗಣಿ ತಿನ್ನುವುದರಿಂದ ವಿಕಿರಣದ ಪರಿಣಾಮವನ್ನು ಕಡಿಮೆ ಮಾಡಬಹುದು ಎಂದು ಮಿತ್ತಲ್ ಹೇಳಿದ್ದಾರೆ. ಗರ್ಭಿಣಿ ಮಹಿಳೆ ಹೆರಿಗೆಯ ಸಮಯದಲ್ಲಿ ಹಸುವಿನ ಸಗಣಿ ತಿಂದರೆ, ಹೆರಿಗೆಯ ಸಮಯದಲ್ಲಿ ಹೆಚ್ಚಿನ ಅಸ್ವಸ್ಥತೆ ಇರುವುದಿಲ್ಲ. ಸಗಣಿ ತಿನ್ನುವುದರಿಂದ ಅನೇಕ ಕಾಯಿಲೆಗಳು ಗುಣವಾಗುತ್ತವೆ ಎಂದು ಮಿತ್ತಲ್ ಹೇಳಿದ್ದಾರೆ. ಮನೋಜ್ ಮಿತ್ತಲ್ ಅವರು ಮಕ್ಕಳ ವೈದ್ಯರಾಗಿದ್ದಾರೆ ಮತ್ತು ಕರ್ನಾಲ್‌ನಲ್ಲಿ ದೊಡ್ಡ ಆಸ್ಪತ್ರೆಯನ್ನು ಹೊಂದಿದ್ದಾರೆ. ಅವರು ಯಾವಾಗಲೂ ನೆಲದ ಮೇಲೆ ಮಲಗುತ್ತಾರೆ ಮತ್ತು ಎಸಿ ಬಳಸುವುದಿಲ್ಲ ಎಂದು ಮಿತ್ತಲ್ ಹೇಳುತ್ತಾರೆ.
Dr. Manoj Mittal MBBS MD’s prescription. Via @ColdCigar pic.twitter.com/SW2oz5ao0v https://t.co/Gzww80KiSs
— Rofl Gandhi 2.0 ?? (@RoflGandhi_) November 16, 2021
ಹಸುವಿನ ಸಗಣಿ ಶೇ28ರಷ್ಟು ಆಮ್ಲಜನಕವನ್ನು ಹೊಂದಿರುತ್ತದೆ. ಹೀಗಾಗಿ ನಾನು ಆರೋಗ್ಯವಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಮನೋಜ್ ಮಿತ್ತಲ್ ಅವರ ವಿಡಿಯೊ ವೈರಲ್ ಆದ ತಕ್ಷಣ, ವಿವಿಧ ಪ್ರತಿಕ್ರಿಯೆಗಳು ಕಂಡುಬರುತ್ತಿವೆ. ಮನೋಜ್ ಅವರ ಮಾತು ನಿಜ ಎಂದು ಕೆಲವರು ಹೇಳುತ್ತಿದ್ದು ಇನ್ನ ಕೆಲವರು ಮನೋಜ್ ಪದವಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸರ್ಕಾರವನ್ನು ಟೀಕಿಸುವವರು ಮತ್ತು ಹೋರಾಟಗಾರರ ಟ್ವಿಟರ್ ಖಾತೆ ಮೇಲೆ ತ್ರಿಪುರಾ ಪೊಲೀಸ್ ನಿಗಾ