ಜ. 6ರಿಂದ ದೇಶಾದ್ಯಂತ “ಒಂದು ವಾರ, ಒಂದು ಲ್ಯಾಬ್” ಅಭಿಯಾನ ಆರಂಭ: ಸಚಿವ ಡಾ. ಜಿತೇಂದ್ರ ಸಿಂಗ್

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 17, 2022 | 8:08 PM

2023 ಜನವರಿ 6 ರಿಂದ ದೇಶಾದ್ಯಂತ ಒಂದು ವಾರಗಳ ಕಾಲ "ಒಂದು ವಾರ ಒಂದು ಲ್ಯಾಬ್" ಎಂಬ ಅಭಿಯಾನವನ್ನು ಪ್ರಾರಂಭಿಸುವುದಾಗಿ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಜಿತೇಂದ್ರ ಸಿಂಗ್ ಘೋಷಿಸಿದ್ದಾರೆ.

ಜ. 6ರಿಂದ ದೇಶಾದ್ಯಂತ ಒಂದು ವಾರ, ಒಂದು ಲ್ಯಾಬ್ ಅಭಿಯಾನ ಆರಂಭ: ಸಚಿವ ಡಾ. ಜಿತೇಂದ್ರ ಸಿಂಗ್
ಸಚಿವ ಡಾ. ಜಿತೇಂದ್ರ ಸಿಂಗ್ ದೆಹಲಿಯ ವಿಜ್ಞಾನ ಕೇಂದ್ರದಲ್ಲಿ ಸಿಎಸ್‌ಐಆರ್‌ನ 200ನೇ ಆಡಳಿತ ಮಂಡಳಿ ಸಭೆ
Image Credit source: Press Information Bureau
Follow us on

ದೆಹಲಿ: ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಜಿತೇಂದ್ರ ಸಿಂಗ್ (Dr Jitendra Singh) ಅವರು ಸಿಎಸ್‌ಐಆರ್‌ನ (ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ) ಉಪಾಧ್ಯಕ್ಷರೂ ಆಗಿದ್ದು, 2023 ಜನವರಿ 6 ರಿಂದ ದೇಶಾದ್ಯಂತ ಒಂದು ವಾರಗಳ “ಒಂದು ವಾರ ಒಂದು ಲ್ಯಾಬ್” (One Week, One Lab) ಎಂಬ ಅಭಿಯಾನವನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ. ಈ ಬಗ್ಗೆ ದೇಶದಾದ್ಯಂತ ಪ್ರಚಾರ ಮಾಡುವಂತೆ ಕಾರ್ಯತಂತ್ರವನ್ನು ರಚಿಸಿಲಾಗಿದೆ. ಜೊತೆಗೆ CSIR ನ 37 ಪ್ರಧಾನ ಪ್ರಯೋಗಾಲಯಗಳು/ಸಂಸ್ಥೆಗಳು ವಾರದಲ್ಲಿ ಒಂದರಂತೆ ಭಾರತದ ಜನರಿಗೆ ವಿಶೇಷ ಆವಿಷ್ಕಾರಗಳು ಮತ್ತು ತಾಂತ್ರಿಕ ಪ್ರಗತಿಯನ್ನು ಪ್ರದರ್ಶಿಸುತ್ತವೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಜಿತೇಂದ್ರ ಸಿಂಗ್ ದೆಹಲಿಯ ವಿಜ್ಞಾನ ಕೇಂದ್ರದಲ್ಲಿ ಸಿಎಸ್‌ಐಆರ್‌ನ 200ನೇ ಆಡಳಿತ ಮಂಡಳಿ ಸಭೆಯನ್ನು ಉದ್ದೇಶಿಸಿ ಹೇಳಿದರು.

ಒಂದು ವಾರ ಒಂದು ಲ್ಯಾಬ್ ಥೀಮ್​ನ ಅಡಿಯಲ್ಲಿ ಈ ಅಭಿಯಾನವನ್ನು ಮಾಡಲಾಗುವುದು, ಇದು ಯುವ ನವೋದ್ಯಮಿಗಳು, ವಿದ್ಯಾರ್ಥಿಗಳು, ಸ್ಟಾರ್ಟ್‌ಅಪ್‌ಗಳು, ಅಕಾಡೆಮಿಕ್‌ಗಳ ಮನಸ್ಸನ್ನು ಆಕರ್ಷಿಸುವಂತೆ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ. ಉದ್ಯಮ ಬೆಳವಣಿಗೆ, ಇದರ ಜತೆಗೆ ಆಳವಾದ ತಂತ್ರಜ್ಞಾನದ ಉದ್ಯಮಗಳ ಮೂಲಕ ಅವಕಾಶಗಳನ್ನು ನೀಡುವುದಾಗಿ ಹೇಳಿದರು. ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (CSIR) ಅಧ್ಯಕ್ಷರಾಗಿರುವ ಪ್ರಧಾನಿ ನರೇಂದ್ರ ಮೋದಿ 2022 ರ ಅಕ್ಟೋಬರ್ 15 ರಂದು CSIR ಸೊಸೈಟಿಯ ಸಭೆಯ ಅಧ್ಯಕ್ಷತೆ ವಹಿಸಿದ್ದರು ಮತ್ತು ಕಳೆದ 80 ವರ್ಷಗಳಲ್ಲಿ CSIR ನ ಪ್ರಯತ್ನಗಳನ್ನು ಶ್ಲಾಘಿಸಿದರು ಎಂದು ಡಾ ಜಿತೇಂದ್ರ ಸಿಂಗ್ ಈ ಸಭೆಯಲ್ಲಿ ಹೇಳಿದರು.

ಇದನ್ನು ಓದಿ; ಸ್ಯಾನಿಟರಿ ಪ್ಯಾಡ್ ವಿಲೇವಾರಿ ಕಾರ್ಯವಿಧಾನದ ಕೊರತೆ ಬಗ್ಗೆ ಕೇಂದ್ರ ಸಚಿವರಲ್ಲಿ ಪ್ರಶ್ನಿಸಿದ ವಿದ್ಯಾರ್ಥಿ;ಸಚಿವರ ಉತ್ತರ ಹೀಗಿತ್ತು

ಸಿಎಸ್‌ಐಆರ್‌ಗೆ 100 ವರ್ಷ ತುಂಬಿದಾಗ ಅಂದರೆ 2042ರ ದೃಷ್ಟಿಕೋನದಲ್ಲಿ ಈ ಎಲ್ಲವನ್ನು ಅಭಿವೃದ್ಧಿಪಡಿಸುವಂತೆ ಸೊಸೈಟಿ ಸಭೆಯಲ್ಲಿ ಪ್ರಧಾನಮಂತ್ರಿ ಅವರು ಸಿಎಸ್‌ಐಆರ್‌ಗೆ ಒತ್ತಾಯಿಸಿದರು ಮತ್ತು ಕಳೆದ 80 ವರ್ಷಗಳಲ್ಲಿ ಮಹತ್ವದ ವಿಚಾರಗಳನ್ನು ಸಿಎಸ್‌ಐಆರ್‌ ದಾಖಲಿಸಿಕೊಂಡಿದೆ ಎಂದು ಹೇಳಿದರು. ಇದು ಸಿಎಸ್‌ಐಆರ್‌ ಸಾಧಿಸಿದ ಪ್ರಗತಿಯನ್ನು ಗುರುತಿಸಲು ಸಹಾಯ ಮಾಡುತ್ತದೆ. ಅನೇಕ ವಿಚಾರಗಳ ಕೊರತೆಯನ್ನು ಪರಿಹರಿಸಬಹುದಾದ ವ್ಯವಸ್ಥೆಗಳು ಈಗಾಗಲೇ ಮಾಡಿಕೊಂಡಿದೆ. ಎಲ್ಲಾ ಲ್ಯಾಬ್‌ಗಳ ವರ್ಚುವಲ್ ಶೃಂಗಸಭೆಯನ್ನು ನಿಯಮಿತವಾಗಿ ನಡೆಸಬಹುದು, ಇದರಲ್ಲಿ ಅವರು ಪರಸ್ಪರರ ಹೊಸ ವಿಷಯಗಳನ್ನು ಕಲಿಯಬಹುದು ಎಂದು ಅವರು ಸಲಹೆ ನೀಡಿದರು.

CSIR ನ 200 ನೇ ಆಡಳಿತ ಮಂಡಳಿ ಸಭೆಯಲ್ಲಿ, ಡಾ ಜಿತೇಂದ್ರ ಸಿಂಗ್ ಅವರು ಮಹಿಳಾ ವಿಜ್ಞಾನಿಗಳಿಗೆ ಸಂಶೋಧನಾ ಅನುದಾನದ ಬಗ್ಗೆ ಘೋಷಿಸಿದರು. ಸಂಶೋಧನಾ ಅನುದಾನದ ಪ್ರಸ್ತಾವನೆಯು ಮಹಿಳಾ ವಿಜ್ಞಾನಿಗಳು ಸೇರಿದಂತೆ ವೃತ್ತಿ ವಿರಾಮವನ್ನು ತೆಗೆದುಕೊಂಡವರು ಮತ್ತು ಸಂಶೋಧನೆಗೆ ಮಾಡಲು ಇಚ್ಛಿಸುವವರಿಗೆ ತಮ್ಮ ವೃತ್ತಿಜೀವನವನ್ನು ಮತ್ತೆ ಬರಲು ಆಸಕ್ತಿ ಹೊಂದಿರುವವರು ಸೇರಿದಂತೆ ಎಲ್ಲರಿಗೂ ಈ ಅನುದಾನದ ಪ್ರಯೋಜನ ಪಡೆದುಕೊಳ್ಳಬಹುದು.

CSIR ನಲ್ಲಿ ಆಗುತ್ತಿರುವ ಹೊಸ ರೂಪಾಂತರಗಳಿಗೆ ಅನುಗುಣವಾಗಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು CSIR-ದಿ ಇನ್ನೋವೇಶನ್ ಎಂಜಿನ್ ಆಫ್ ಇಂಡಿಯಾ ಎಂಬ ಹೊಸ ಅಡಿಬರಹವನ್ನು ಸಹ ಬಿಡುಗಡೆ ಮಾಡಿದರು .ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ಸಿಎಸ್‌ಐಆರ್ ತಾಂತ್ರಿಕ ಪ್ರಗತಿಗಳ ಕಾರ್ಯವಿಧಾನವನ್ನು ರೂಪಿಸಲು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಶೀಘ್ರದಲ್ಲೇ ಪತ್ರ ಬರೆಯುವುದಾಗಿ ಡಾ ಜಿತೇಂದ್ರ ಸಿಂಗ್ ಆಡಳಿತ ಮಂಡಳಿಯ ಸದಸ್ಯರಿಗೆ ತಿಳಿಸಿದರು.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:06 pm, Sat, 17 December 22