ಪ್ರಧಾನಿ ನರೇಂದ್ರ ಮೋದಿ ಟೀಕಿಸಿ ಪೋಸ್ಟರ್ ಅಂಟಿಸಲು 9 ಸಾವಿರ ಪಾವತಿಸಿದ್ದ ಆಮ್​ಆದ್ಮಿ ಪಕ್ಷದ ಸದಸ್ಯ

|

Updated on: May 16, 2021 | 9:01 PM

ಕೊವಿಡ್ ನಿರ್ವಹಣೆಯ ಕುರಿತು ಪ್ರಧಾನಿ ಮೋದಿಯನ್ನು ಟೀಕಿಸಿ ಪೋಸ್ಟರ್ ಪ್ರಕಟಿಸಲು ಮತ್ತು ವಿವಿಧ ಸಾರ್ವಜನಿಕ ಪ್ರದೇಶಗಳಲ್ಲಿ ಅಂಟಿಸಲು 9 ಸಾವಿರ ಹಣವನ್ನು ನೀಡಿದ್ದಾಗಿ ಈಗಾಗಲೇ ಬಂಧನಕ್ಕೊಳಪಟ್ಟ ವ್ಯಕ್ತಿಯೋರ್ವ ಮಾಹಿತಿ ನೀಡಿದ್ದಾನೆ.

ಪ್ರಧಾನಿ ನರೇಂದ್ರ ಮೋದಿ ಟೀಕಿಸಿ ಪೋಸ್ಟರ್ ಅಂಟಿಸಲು 9 ಸಾವಿರ ಪಾವತಿಸಿದ್ದ ಆಮ್​ಆದ್ಮಿ ಪಕ್ಷದ ಸದಸ್ಯ
ಪ್ರಧಾನಿ ನರೇಂದ್ರ ಮೋದಿ
Follow us on

ದೆಹಲಿ: ಕೊವಿಡ್​ 19 ಬಿಕ್ಕಟ್ಟಿನ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಿಲ್ಲ ಎಂದು ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಟೀಕಿಸಿ, ಪೋಸ್ಟರ್​ ಅಂಟಿಸಿದ್ದ ಸುಮಾರು 17 ಮಂದಿಯನ್ನು ದೆಹಲಿ ಪೊಲೀಸರು ನಿನ್ನೆಯಷ್ಟೇ ಬಂಧಿಸಿದ್ದರು.  ಆದರೆ  ಪೋಸ್ಟರ್ ಪ್ರಕಟಣೆಯ ಹಿಂದೆ ಇರುವ ಅಸಲಿ ವ್ಯಕ್ತಿಯ ತಲಾಶೆಯಲ್ಲಿದ್ದ ಪೊಲೀಸರಿಗೆ ಆಮ್​ಆದ್ಮಿ ಪಕ್ಷದ ಸದಸ್ಯ ಅರವಿಂದ್ ಗೌತಮ್ ಎಂಬ ವ್ಯಕ್ತಿ ಇರುವುದು ಪತ್ತೆಯಾಗಿದೆ. ಅರವಿಂದ್  ಗೌತಮ್ ಪ್ರಧಾನಿ ಮೋದಿಯನ್ನು ಟೀಕಿಸಿ ಪೋಸ್ಟರ್ ಪ್ರಕಟಿಸಲು ಮತ್ತು ವಿವಿಧ ಸಾರ್ವಜನಿಕ ಪ್ರದೇಶಗಳಲ್ಲಿ ಅಂಟಿಸಲು 9 ಸಾವಿರ ಹಣವನ್ನು ನೀಡಿದ್ದಾಗಿ ಈಗಾಗಲೇ ಬಂಧನಕ್ಕೊಳಪಟ್ಟ ವ್ಯಕ್ತಿಯೋರ್ವ ಮಾಹಿತಿ ನೀಡಿದ್ದಾನೆ.

ಪೋಸ್ಟರ್​ನಲ್ಲಿ ಯಾವ ಪ್ರಿಂಟಿಂಗ್ ಪ್ರೆಸ್​ನಲ್ಲಿ ಪ್ರಕಟಿಸಿದ್ದು ಎಂಬ ಮಾಹಿತಿಯಾಗಲೀ, ಪ್ರಕಾಶಕರ ಮಾಹಿತಿಯಾಗಲಿ ಇರಲಿಲ್ಲ. ಮೇ 12ರಂದು ಸಾರ್ವಜನಿಕ ಆಸ್ತಿಯ ರಕ್ಷಣೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿದ್ದ ದೆಹಲಿ ಪೊಲೀಸರು, ಈವರೆಗೆ 17 ಜನರನ್ನು ಬಂಧಿಸಿದ್ದರು. ಸದ್ಯ ಆಮ್ಆದ್ಮಿ ಪಕ್ಷದ ಸದಸ್ಯ ಅರವಿಂದ್ ಗೌತಮ್​​ರ ಪತ್ತೆಗಾಗಿ ಹುಡುಕಾಟ ನಡೆಸಿದ್ದಾರೆ.

ಇದೇ ವಿಚಾರಕ್ಕೆ ಈಗ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಸೇರಿ ಎಲ್ಲರೂ ಕೇಂದ್ರ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದರು. ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯ ಟ್ವೀಟ್ ಮಾಡಿ.. ನಮ್ಮನ್ನೂ ಬಂಧಿಸಿ (Arrest Me Too..)ಎಂದು ಹಿಂದಿ ಮತ್ತು ಇಂಗ್ಲಿಷ್​ ಎರಡೂ ಭಾಷೆಯಲ್ಲಿ ಬರೆದುಕೊಂಡಿದ್ದರು. ಅಷ್ಟೇ ಅಲ್ಲ, ಮೋದಿ ಜೀ, ನಮ್ಮ ದೇಶದ ಮಕ್ಕಳ ಪಾಲಿನ ಲಸಿಕೆಯನ್ನು ನೀವೇಕೆ ವಿದೇಶಗಳಿಗೆ ಕೊಟ್ಟಿರಿ? ಎಂದು ಪ್ರಶ್ನೆ ಮಾಡಿದ್ದಾರೆ. ಈ ಪ್ರಶ್ನೆಯಿರುವ ಫೋಟೋವನ್ನೇ ತಮ್ಮ ಟ್ವಿಟರ್​ನ ಪ್ರೊಫೈಲ್​ ಫೋಟೊವನ್ನಾಗಿ ಕೂಡ ಮಾಡಿಕೊಂಡಿದ್ದರು

ದೆಹಲಿ ಪೊಲೀಸರು ನೇರವಾಗಿ ಕೇಂದ್ರ ಗೃಹ ಇಲಾಖೆಯಡಿ ಬರುತ್ತಾರೆ. ಏನೇ ಇದ್ದರೂ ಅವರು ಗೃಹ ಇಲಾಖೆಗೆ ರಿಪೋರ್ಟ್ ಮಾಡಿಕೊಳ್ಳಬೇಕಾಗುತ್ತದೆ. ನಿನ್ನೆ 17 ಮಂದಿಯನ್ನು ಬಂಧಿಸಿದ್ದ ಪೊಲೀಸರು, ಪೋಸ್ಟರ್​ಗೆ ಸಂಬಂಧಪಟ್ಟಂತೆ, ಸಾರ್ವಜನಿಕ ಆಸ್ತಿ ವಿರೂಪಗೊಳಿಸಿದ ಕಾಯ್ದೆ ಮತ್ತು ಸೆಕ್ಷನ್​ 188ರಡಿ ಒಟ್ಟು 21 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾಗಿ ವರದಿ ನೀಡಿದ್ದಾರೆ.

17 ಜನರ ಬಂಧನವಾಗುತ್ತಿದ್ದಂತೆ ಕಾಂಗ್ರೆಸ ಸಂಸದ ರಾಹುಲ್ ಗಾಂಧಿ, ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್​, ವಕ್ತಾರರಾದ ಡಾ. ಶಮಾ ಮೊಹಮ್ಮದ್​, ಹೋರಾಟಗಾರ ಸಾಕೇತ್ ಗೋಖಲೆ ಮತ್ತಿತರರೂ ಕೂಡ ಕೇಂದ್ರದ ವಿರುದ್ಧ ಹರಿಹಾಯ್ದಿದ್ದರು.  ಜೈರಾಮ್ ರಮೇಶ್​ ಅವರು ಟ್ವೀಟ್​ ಮಾಡಿ, ನಾನು ನನ್ನ ಮನೆಯ ಕಾಂಪೌಂಡ್ ಮೇಲೆಲ್ಲ ಪೋಸ್ಟರ್​ ಅಂಟಿಸುತ್ತೇನೆ. ನನ್ನನ್ನೂ ಬಂಧಿಸಿ ಎಂದು ದೆಹಲಿ ಪೊಲೀಸರು, ಗೃಹ ಸಚಿವ ಅಮಿತ್​ ಶಾ ಅವರಿಗೆ ಸವಾಲು ಹಾಕಿದ್ದರು.

ಇದನ್ನೂ ಓದಿ: Covid-19 Karnataka Update: ಕಳೆದ 24 ಗಂಟೆಗಳಲ್ಲಿ ಬೆಂಗಳೂರಲ್ಲಿ 8,344, ಇತರ ಜಿಲ್ಲೆಗಳಲ್ಲಿ 23,197 ಕೊವಿಡ್ ಸೋಂಕಿತರು ಪತ್ತೆ

ಮನೆಯಲ್ಲಿ ಜಾಗವಿಲ್ಲದೆ, ಮರದ ಮೇಲೆ 11 ದಿನ ಐಸೋಲೇಟ್ ಆದ ಕೊವಿಡ್​ 19 ಸೋಂಕಿತ ಯುವಕ..

(AAM AADMI member behind Delhi poster against PM Narendra Modi)

Published On - 8:54 pm, Sun, 16 May 21