Chardham Yatra 2021: 11 ಕ್ವಿಂಟಲ್ ಹೂವುಗಳಿಂದ ಶೃಂಗಾರಗೊಂಡ ಕೇದಾರನಾಥ ದೇವಸ್ಥಾನ; ಬಾಗಿಲು ತೆಗೆದರೂ ಭಕ್ತರಿಗೆ ಇಲ್ಲ ಪ್ರವೇಶ
Kedarnath Temple: ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಚಾರ್ಧಾಮ್ ಯಾತ್ರೆಯನ್ನು ರದ್ದುಗೊಳಿಸಲಾಗಿದ್ದು, ವರ್ಚ್ಯುವಲ್ ಮೂಲಕ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಪ್ರತಿವರ್ಷವೂ ಭಕ್ತರು ಈ ಸಮಯದಲ್ಲಿ ಬದ್ರಿನಾಥ, ಕೇದಾರನಾಥ, ಯಮುನೋತ್ರಿ ಮತ್ತು ಗಂಗೋತ್ರಿ ಪುಣ್ಯಕ್ಷೇತ್ರಗಳಿಗೆ ತೆರಳಿ ದರ್ಶನ ಪಡೆಯುತ್ತಿದ್ದರು.
ಉತ್ತರಾಖಂಡ್: ಕೊರೊನಾ ಸೋಂಕಿನ ಭಯದ ಮಧ್ಯೆಯೂ ಇಲ್ಲಿನ ಐತಿಹಾಸಿಕ ಪುಣ್ಯಕ್ಷೇತ್ರ ಕೇದಾರನಾಥ್ ದೇವಾಲದಯ ಬಾಗಿಲು ನಾಳೆ ಮುಂಜಾನೆ 5ಗಂಟೆಗೆ ತೆರೆಯಲಿದೆ. ಕೇದಾರನಾಥ್ ದೇವಾಲಯದ ಬಾಗಿಲು ತೆರೆಯಲಿದ್ದರೂ ಭಕ್ತರ ಪ್ರವೇಶಕ್ಕೆ ಅನುಮತಿ ನೀಡಲಾಗಿಲ್ಲ. ಇನ್ನು ನಾಳೆ ಮುಂಜಾನೆ ಬಾಗಿಲು ತೆರೆಯುವ ಹಿನ್ನೆಲೆಯಲ್ಲಿ ಈಗಾಗಲೇ ಸುಮಾರು 11 ಕ್ವಿಂಟಾಲ್ ಹೂವುಗಳಿಂದ ಇಡೀ ದೇವಸ್ಥಾನವನ್ನು ಶೃಂಗರಿಸಲಾಗಿದೆ.
ಇನ್ನು ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಚಾರ್ಧಾಮ್ ಯಾತ್ರೆಯನ್ನು ರದ್ದುಗೊಳಿಸಲಾಗಿದ್ದು, ವರ್ಚ್ಯುವಲ್ ಮೂಲಕ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಪ್ರತಿವರ್ಷವೂ ಭಕ್ತರು ಈ ಸಮಯದಲ್ಲಿ ಬದ್ರಿನಾಥ, ಕೇದಾರನಾಥ, ಯಮುನೋತ್ರಿ ಮತ್ತು ಗಂಗೋತ್ರಿ ಪುಣ್ಯಕ್ಷೇತ್ರಗಳಿಗೆ ತೆರಳಿ ದರ್ಶನ ಪಡೆಯುತ್ತಿದ್ದರು. ಈ ನಾಲ್ಕೂ ಪುಣ್ಯಕ್ಷೇತ್ರಗಳು ಸೇರಿ ಚಾರ್ಧಾಮ್ ಯಾತ್ರೆ ಎಂಬ ಹೆಸರು ಬಂದಿದೆ. ಆದರೆ ಈ ಬಾರಿ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಇಡೀ ಯಾತ್ರೆಯನ್ನು ರದ್ದುಗೊಳಿಸಲಾಗಿದೆ.
ಈ ನಾಲ್ಕೂ ಪುಣ್ಯಕ್ಷೇತ್ರಗಳಿಗೆ ಹೊರಗಿನ ಭಕ್ತರಿಗೆ ಮಾತ್ರವಲ್ಲ, ಸ್ಥಳೀಯರಿಗೆ ಪ್ರವೇಶ ನೀಡುತ್ತಿಲ್ಲ. ಸದ್ಯಕ್ಕಂತೂ ನಾಲ್ಕೂ ಧಾಮಗಳಲ್ಲಿ ಭಕ್ತರಿಗೆ ಪ್ರವೇಶ ಇರುವುದಿಲ್ಲ. ಹಾಗಾಗಿ ಆನ್ಲೈನ್ ಮೂಲಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು ಭಕ್ತರು ಸದುಪಯೋಗ ಪಡೆಯಬಹುದು ಎಂದು ಉತ್ತರಾಖಂಡ ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ದಿಲೀಪ್ ಜಾವಲ್ಕರ್ ತಿಳಿಸಿದ್ದಾರೆ. ಹೀಗೆ ಆನ್ಲೈನ್ ಮೂಲಕ ದರ್ಶನ ಪಡೆಯಲು ಅಗತ್ಯವಿರುವ ಲಿಂಕ್, ಮತ್ತಿತರ ವಿಚಾರಗಳನ್ನು ದೇಗುಲದ ವೆಬ್ಸೈಟ್ನಲ್ಲಿ ಪ್ರಕಟಪಡಿಸಿದ್ದಾಗ್ಯೂ ಹೇಳಿದ್ದಾರೆ.
ಇದನ್ನೂ ಓದಿ: Cyclone Tauktae in Karnataka: ರಾಜ್ಯದಲ್ಲಿ ತೌಕ್ತೆ ಚಂಡಮಾರುತದ ಅಬ್ಬರ; ನಾಳೆಯೂ ಮುಂದುವರಿಯಲಿದೆ ಮಳೆ
ಕೊವಿಡ್ ಭಯ; ಕೊರೊನಾ ಸೋಂಕಿತ ಶಿಕ್ಷಕ ಕಾವೇರಿ ನದಿಗೆ ಹಾರಿ ಆತ್ಮಹತ್ಯೆ
Kedarnath Temple decorated with 11 quintals flowers for opening
Published On - 9:58 pm, Sun, 16 May 21