ದೆಹಲಿ: ಬಿಜೆಪಿ ಶಾಸಕ ಅಭಯ್ ವರ್ಮಾ(Abhay Verma) ದೆಹಲಿಯಲ್ಲಿ ಪೌರ ಕಾರ್ಮಿಕರೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ಆಮ್ ಆದ್ಮಿ ಪಕ್ಷ (AAP) ಗುರುವಾರ ಆರೋಪಿಸಿದೆ, ಆದರೆ ಶಾಸಕರು ಈ ಆರೋಪ ನಿರಾಕರಿಸಿದ್ದು ಸಾರ್ವಜನಿಕ ಶೌಚಾಲಯಕ್ಕೆ ಏಕೆ ಬೀಗ ಹಾಕಿದ್ದೀರಿ ಎಂದು ಮಾತ್ರ ಕೇಳಿದ್ದೇನೆ ಎಂದಿದ್ದಾರೆ. ಎಎಪಿ ಶಾಸಕ ಕುಲದೀಪ್ ಕುಮಾರ್ (Kuldeep Kumar) ವಿಡಿಯೊವನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ ಬಿಜೆಪಿ ಮತ್ತು ಎಎಪಿ ಪರಸ್ಪರ ಜಗಳವಾಡಿದೆ. ಶಾಸಕರು ಕೆಲಸಗಾರನನ್ನು ನಿಂದಿಸಿದ್ದಾರೆ ಮತ್ತು ಕಪಾಳಮೋಕ್ಷ ಮಾಡಿದ್ದಾರೆ ಎಂದು ಎಎಪಿ ಆರೋಪಿಸಿದೆ. ಪೌರ ಕಾರ್ಮಿಕರನ್ನು ಕೆಲವರು ತಳ್ಳಿ ಕಪಾಳಮೋಕ್ಷ ಮಾಡಿರುವುದು ವಿಡಿಯೊದಲ್ಲಿದೆ. ನೈರ್ಮಲ್ಯದ ವಿಷಯವಾಗಿ ಇತ್ತೀಚೆಗೆ ನಡೆದ ಪೌರ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಸೋತಿರುವ ತನ್ನ ಹತಾಶೆಯನ್ನು ಹೊರಹಾಕುತ್ತಿದೆ ಎಂದು ಎಎಪಿ ಹೇಳಿದೆ. ಎಎಪಿಯ ಹಿರಿಯ ನಾಯಕಿ ರಾಖಿ ಬಿರ್ಲಾ ಮಾತನಾಡಿ, ಕಾರ್ಮಿಕರ ಸುರಕ್ಷತೆಗೆ ಆಗ್ರಹಿಸಿ ದೆಹಲಿ ಪೊಲೀಸ್ ಆಯುಕ್ತರಿಗೆ ಪತ್ರ ಬರೆಯಲಾಗುವುದು. ದಲಿತ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಬಿಜೆಪಿ ಶಾಸಕರ ವಿರುದ್ಧ ಪ್ರಕರಣ ದಾಖಲಿಸುವಂತೆ ಕೋರುವುದಾಗಿ ಹೇಳಿದ್ದಾರೆ.
ಬಿಜೆಪಿಯ ಕ್ರಮಗಳು ಅವರ ಮನಸ್ಥಿತಿಯನ್ನು ಬಿಂಬಿಸುತ್ತವೆ. ಇದು ಯಾವಾಗಲೂ ದಲಿತ ವಿರೋಧಿಯಾಗಿದೆ. ಅವರನ್ನು ಕೇವಲ ‘ವೋಟ್ ಬ್ಯಾಂಕ್’ ಎಂದು ನೋಡುತ್ತದೆ” ಎಂದು ರಾಖಿ ಬಿರ್ಲಾ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದರು.
BJP ने राजनीति को घृणा की राजनीति में परिवर्तित कर दिया है। लक्ष्मी नगर के विधायक @abhayvermabjp ने MCD के एक ऑन ड्यूटी कर्मचारी से बदतमीजी और हाथापाई की। BJP की इस गुंडागर्दी के खिलाफ अब हमें मिलकर कदम उठाना होगा।@AAPDelhi @AamAadmiParty pic.twitter.com/EHb40gHpGF
— MLA Kuldeep Kumar (@KuldeepKumarAAP) December 29, 2022
ಆದರೆ ಬಿಜೆಪಿ ಶಾಸಕ ಅಭಯ್ ವರ್ಮಾ ಅವರು ಪ್ರತ್ಯಾರೋಪಗಳೊಂದಿಗೆ ಪ್ರತಿಕ್ರಿಯಿಸಿದ್ದು, ನನ್ನ ಸಮ್ಮುಖದಲ್ಲಿ ಜಗಳ ನಡೆದಿಲ್ಲ ಎಂದಿದ್ದಾರೆ.
ನಾನು ಈ ಪ್ರದೇಶಕ್ಕೆ ಭೇಟಿ ನೀಡಿದಾಗ ಸ್ಲಂ ನಿವಾಸಿಗಳಿಗೆ ಮೀಸಲಾದ ಶೌಚಾಲಯಕ್ಕೆ ಬೀಗ ಹಾಕಲಾಗಿದೆ ಎಂಬ ದೂರು ಬಂದಿದ್ದು, ನಾನು ಕೆಲಸಗಾರನನ್ನು ಕೇಳಿದಾಗ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಆರೋಪಕ್ಕೆ ಕಾರ್ಮಿಕರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
”ಮೊದಲು ತನ್ನ ಬಳಿ ಕೀ ಇಲ್ಲ ಎಂದಿದ್ದರು. ಆದರೆ ನಾನು ಮತ್ತು ಸ್ಥಳೀಯರು ಒತ್ತಡ ಹೇರಿದಾಗ ಕೀ ತಂದು ಶೌಚಾಲಯ ತೆರೆದರು. ಇಲ್ಲಿ ಮದ್ಯವನ್ನೂ ಸಂಗ್ರಹಿಸಲಾಗಿದೆ’ ಎಂದು ಸ್ಥಳೀಯರು ಹೇಳಿದ್ದರು ಎಂದು ಶಾಸಕರು ಹೇಳಿದ್ದಾರೆ. ‘ಇಂತಹ ಸಾರ್ವಜನಿಕ ಸೌಲಭ್ಯವನ್ನು ಏಕೆ ಮುಚ್ಚಿಟ್ಟಿದ್ದೀರಿ ಎಂದು ಕೇಳುವುದು ಒಬ್ಬ ಜನಪ್ರತಿನಿಧಿಯಾಗಿ ನನ್ನ ಹಕ್ಕು, ಮುಂದೆಯೂ ಶೌಚಾಲಯಕ್ಕೆ ಬೀಗ ಹಾಕಿದರೆ ಖಂಡಿತ ಮತ್ತೊಮ್ಮೆ ಅಲ್ಲಿಗೆ ಹೋಗುತ್ತೇನೆ’ ಎಂದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ