AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ್​​ ಜೋಡೋ ಯಾತ್ರೆಗೆ ಆಮಂತ್ರಣ ಸಿಕ್ಕಿಲ್ಲ, ಬಿಜೆಪಿ ಮತ್ತು ಕಾಂಗ್ರೆಸ್​​ ಎರಡೂ ಒಂದೇ: ಅಖಿಲೇಶ್​​ ಯಾದವ್​​

ಲಕ್ನೋದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅಖಿಲೇಶ್ ನಮಗೆ ಭಾರತ್ ಜೋಡೋ ಯಾತ್ರೆಗೆ ಯಾವುದೇ ಆಹ್ವಾನ ಬಂದಿಲ್ಲ. ನಮ್ಮ ಪಕ್ಷದ ಸಿದ್ಧಾಂತವೇ ಬೇರೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಒಂದೇ ಎಂದಿದ್ದಾರೆ.

ಭಾರತ್​​ ಜೋಡೋ ಯಾತ್ರೆಗೆ ಆಮಂತ್ರಣ ಸಿಕ್ಕಿಲ್ಲ, ಬಿಜೆಪಿ ಮತ್ತು ಕಾಂಗ್ರೆಸ್​​ ಎರಡೂ ಒಂದೇ: ಅಖಿಲೇಶ್​​ ಯಾದವ್​​
ಅಖಿಲೇಶ್ ಯಾದವ್
TV9 Web
| Edited By: |

Updated on: Dec 29, 2022 | 7:10 PM

Share

ಜನವರಿ 3, 2023 ರಂದು ಉತ್ತರ ಪ್ರದೇಶದಲ್ಲಿ ಪುನರಾರಂಭಗೊಳ್ಳಲಿರುವ ರಾಹುಲ್ ಗಾಂಧಿ (Rahul Gandhi) ನೇತೃತ್ವದ ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಗೆ (Bharat Jodo Yatra) ಹಾಜರಾಗಲು ತಮ್ಮ ಪಕ್ಷಕ್ಕೆ ಆಹ್ವಾನ ಬಂದಿಲ್ಲ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav) ಗುರುವಾರ ಹೇಳಿದ್ದಾರೆ ಎಂದು ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ. ಲಕ್ನೋದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅಖಿಲೇಶ್ ನಮಗೆ ಭಾರತ್ ಜೋಡೋ ಯಾತ್ರೆಗೆ ಯಾವುದೇ ಆಹ್ವಾನ ಬಂದಿಲ್ಲ. ನಮ್ಮ ಪಕ್ಷದ ಸಿದ್ಧಾಂತವೇ ಬೇರೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಒಂದೇ ಎಂದಿದ್ದಾರೆ. ಅಖಿಲೇಶ್ ಯಾದವ್, ಬಿಎಸ್‌ಪಿ ವರಿಷ್ಠೆ ಮಾಯಾವತಿ ಮತ್ತು ಆರ್‌ಎಲ್‌ಡಿಯ ಜಯಂತ್ ಚೌಧರಿ ಸೇರಿದಂತೆ ಬಿಜೆಪಿಯೇತರ ಪಕ್ಷಗಳ ಹಲವು ನಾಯಕರಿಗೆ ಉತ್ತರ ಪ್ರದೇಶದಲ್ಲಿ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಲು ಆಹ್ವಾನ ಕಳುಹಿಸಿದೆ ಎಂದು ಕಾಂಗ್ರೆಸ್ ಹೇಳಿಕೊಂಡಿತ್ತು.

ಇದಕ್ಕೂ ಮುನ್ನ ಸೋಮವಾರ ರಾಹುಲ್ ಅವರ ಆಹ್ವಾನವನ್ನು ಸ್ವೀಕರಿಸಲು ಯೋಜಿಸುತ್ತಿದ್ದೀರಾ ಎಂಬ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅಖಿಲೇಶ್, ಪ್ರಶ್ನೆಗೆ ನೇರವಾಗಿ ಉತ್ತರಿಸುವುದನ್ನು ಬಿಟ್ಟು ನಮಗೂ ಭಾರತವನ್ನು ಒಗ್ಗೂಡಿಸುವಲ್ಲಿ ನಂಬಿಕೆ ಇದೆ, ನಾವು ಅದರಲ್ಲಿ ಸಹಮತ ಹೊಂದಿದ್ದೇವೆ. ಆದರೆ ಬಿಜೆಪಿಯನ್ನು ಯಾರು ನಿಭಾಯಿಸುತ್ತಾರೆ ಎಂಬುದು ಪ್ರಶ್ನೆ ಎಂದಿದ್ದಾರೆ.

ಪಕ್ಷದ ಕಾರ್ಯಕ್ರಮಗಳು ಇರುವುದರಿಂದ ಎಸ್‌ಪಿ ಮುಖ್ಯಸ್ಥರು ಯಾತ್ರೆಗೆ ಹಾಜರಾಗುವುದು “ಅಸಂಭವವಾಗಿದೆ” ಎಂದು ಎಸ್‌ಪಿ ವಕ್ತಾರ ರಾಜೇಂದ್ರ ಚೌಧರಿ ಹೇಳಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿದೆ. ಪಕ್ಷವು ಯಾವುದೇ ಔಪಚಾರಿಕ ಆಹ್ವಾನವನ್ನು ಸ್ವೀಕರಿಸಿಲ್ಲ ಎಂದು ಚೌಧರಿ ಒತ್ತಿ ಹೇಳಿದ್ದಾರೆ.

ಇದನ್ನೂ ಓದಿ: Rahul Gandhi: ನನ್ನ ಹೆಂಡತಿಯಾಗುವವಳು ಹೇಗಿರಬೇಕೆಂದರೆ…; ಜೀವನ ಸಂಗಾತಿ ಬಗ್ಗೆ ಮಾತಾಡಿದ ರಾಹುಲ್ ಗಾಂಧಿ

ಉತ್ತರ ಪ್ರದೇಶದಲ್ಲಿ ಭಾರತ್ ಜೋಡೋ ಯಾತ್ರೆಯು ಜನವರಿ 3 ರಂದು ಗಾಜಿಯಾಬಾದ್‌ನ ಲೋನಿ ಪ್ರದೇಶವನ್ನು ಪ್ರವೇಶಿಸಿ ಶಾಮ್ಲಿಯ ಕೈರಾನಾ ಮೂಲಕ ಹರಿಯಾಣಕ್ಕೆ ಪ್ರಯಾಣಿಸಲಿದೆ. ಮರುದಿನ ಯಾತ್ರೆ ಬಾಗ್‌ಪತ್‌ನ ಮಾವಿ ಕಲಾನ್‌ಗೆ ತಲುಪುತ್ತದೆ. ಅದೇ ಜಿಲ್ಲೆಯ ಬಾಗ್‌ಪತ್ ನಗರ ಮತ್ತು ಸಿಸಾನಾ, ಸರೂರ್‌ಪುರ ಮತ್ತು ಬರೋಟ್ ಮೂಲಕ ಹಾದುಹೋಗುತ್ತದೆ. ಜನವರಿ 5 ರಂದು, ಯಾತ್ರೆಯು ಶಾಮ್ಲಿ ಜಿಲ್ಲೆಯ ಆಲಂ ತಲುಪುತ್ತದೆ ಮತ್ತು ಕಂಡ್ಲಾ, ಉಂಚಾ ಗ್ರಾಮ ಮತ್ತು ಕೈರಾನಾ ಮೂಲಕ ಹಾದುಹೋಗಲಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ