Covid RT PCR Tests: ಜನವರಿ 1 ರಿಂದ ಚೀನಾ, ಇತರ 5 ದೇಶಗಳಿಂದ ಆಗಮಿಸುವವರಿಗೆ ಆರ್‌ಟಿಪಿಸಿಆರ್ ಪರೀಕ್ಷೆ ಕಡ್ಡಾಯ

ಚೀನಾ, ಹಾಂಗ್ ಕಾಂಗ್, ಜಪಾನ್, ದಕ್ಷಿಣ ಕೊರಿಯಾ, ಸಿಂಗಾಪುರ ಮತ್ತು ಥೈಲ್ಯಾಂಡ್‌ನಿಂದ ಪ್ರಯಾಣಿಸುವ ಪ್ರಯಾಣಿಕರು ಪ್ರಯಾಣಿಸುವ ಮೊದಲು ಏರ್ ಸುವಿಧಾ ಪೋರ್ಟಲ್‌ನಲ್ಲಿ ತಮ್ಮ ವಿವರಗಳನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ.

Covid RT PCR Tests: ಜನವರಿ 1 ರಿಂದ ಚೀನಾ, ಇತರ 5 ದೇಶಗಳಿಂದ ಆಗಮಿಸುವವರಿಗೆ ಆರ್‌ಟಿಪಿಸಿಆರ್ ಪರೀಕ್ಷೆ ಕಡ್ಡಾಯ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Dec 29, 2022 | 6:15 PM

ಕೆಲವು ದೇಶಗಳಲ್ಲಿ ಕೊರೊನಾವೈರಸ್ (Coronavirus) ಪ್ರಕರಣಗಳ ಹೆಚ್ಚಳದ ಮಧ್ಯೆ ಭಾರತ ಜನವರಿ 1, 2023 ರಿಂದ ಚೀನಾ, ಜಪಾನ್ ಮತ್ತು ಇತರ ನಾಲ್ಕು ದೇಶಗಳಿಂದ ಬರುವ ಪ್ರಯಾಣಿಕರಿಗೆ ಆರ್‌ಟಿಪಿಸಿಆರ್ ಪರೀಕ್ಷೆಯನ್ನು (RT-PCR test) ಕಡ್ಡಾಯಗೊಳಿಸಿದೆ. ಚೀನಾ, ಹಾಂಗ್ ಕಾಂಗ್, ಜಪಾನ್, ದಕ್ಷಿಣ ಕೊರಿಯಾ, ಸಿಂಗಾಪುರ ಮತ್ತು ಥೈಲ್ಯಾಂಡ್‌ನಿಂದ ಪ್ರಯಾಣಿಸುವ ಪ್ರಯಾಣಿಕರು ಪ್ರಯಾಣಿಸುವ ಮೊದಲು ಏರ್ ಸುವಿಧಾ ಪೋರ್ಟಲ್‌ನಲ್ಲಿ ತಮ್ಮ ವಿವರಗಳನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ. ಭಾರತಕ್ಕೆ ಪ್ರಯಾಣ ಬೆಳೆಸಿದ 72 ಗಂಟೆಗಳ ಒಳಗೆ ಪರೀಕ್ಷೆಗಳನ್ನು ನಡೆಸಬೇಕು ಎಂದು ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ (Mansukh Mandaviya) ಹೇಳಿದ್ದಾರೆ. ಚೀನಾ ಮತ್ತು ಪೂರ್ವ ಏಷ್ಯಾದ ದೇಶಗಳಲ್ಲಿ ಕೋವಿಡ್ -19 ಪ್ರಕರಣಗಳ ಹೆಚ್ಚಳದ ನಡುವೆಯೇ ಸರ್ಕಾರದ ಈ ಕ್ರಮ ಬಂದಿದೆ. ಈ ಅವಶ್ಯಕತೆಯು ಎಲ್ಲಾ ಅಂತರಾಷ್ಟ್ರೀಯ ಪ್ರಯಾಣಿಕರು ಭಾರತಕ್ಕೆ ಆಗಮನದ ಎಲ್ಲಾ ಒಳಬರುವ ಅಂತರಾಷ್ಟ್ರೀಯ ವಿಮಾನಗಳಲ್ಲಿ ನಡೆಸುವ ಯಾದೃಚ್ಛಿಕ ಪರೀಕ್ಷೆಗಿಂತ ಎರಡು ಶೇಕಡಾ ಪರೀಕ್ಷೆ ಹೆಚ್ಚು ಆಗಿದ್ದು, ಇದು ಪ್ರಯಾಣಿಕರು ಎಲ್ಲಿಂದ ಬಂದಿದ್ದಾರೆ ಎಂಬುದನ್ನು ನೋಡದೆ ನಡೆಸಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.

ಕೆಲವು ದೇಶಗಳಲ್ಲಿ ಕೊರೊನಾವೈರಸ್ ಪ್ರಕರಣಗಳ ಹೆಚ್ಚಳದ ಮಧ್ಯೆ, ಸರ್ಕಾರ ಈ ಎಚ್ಚರಿಕೆಯನ್ನು ನೀಡಿದ್ದು ಕೋವಿಡ್ ಮಾರ್ಗಸೂಚಿಗಳನ್ನು ಬಿಗಿಗೊಳಿಸಿದೆ. ಯಾವುದೇ ಸಂದರ್ಭಕ್ಕೆ ಸಿದ್ಧರಾಗಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಕೇಳಿದೆ.

ಇದನ್ನೂ ಓದಿ:  Anant Ambani Engagement: ಮುಕೇಶ್ ಅಂಬಾನಿ ಪುತ್ರನ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡ ರಾಧಿಕಾ ಮರ್ಚೆಂಟ್

ಗುರುವಾರ ನವೀಕರಿಸಿದ ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ 268 ಹೊಸ ಕೊರೊನಾವೈರಸ್ ಸೋಂಕುಗಳು ದಾಖಲಾಗಿದ್ದು ಸಕ್ರಿಯ ಪ್ರಕರಣಗಳು 3,552 ಕ್ಕೆ ಏರಿದೆ. ದೈನಂದಿನ ಸಕಾರಾತ್ಮಕತೆಯ ದರವು ಶೇಕಡಾ 0.11 ರಷ್ಟು ದಾಖಲಾಗಿದ್ದು, ವಾರದ ಧನಾತ್ಮಕತೆಯನ್ನು ಶೇಕಡಾ 0.17 ಕ್ಕೆ ನಿಗದಿಪಡಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ