Rahul Gandhi: ನನ್ನ ಹೆಂಡತಿಯಾಗುವವಳು ಹೇಗಿರಬೇಕೆಂದರೆ…; ಜೀವನ ಸಂಗಾತಿ ಬಗ್ಗೆ ಮಾತಾಡಿದ ರಾಹುಲ್ ಗಾಂಧಿ

ತಮ್ಮ ಅಜ್ಜಿ ಇಂದಿರಾ ಗಾಂಧಿಯ ಬಗ್ಗೆ ಮಾತನಾಡಿರುವ ರಾಹುಲ್ ಗಾಂಧಿ, ಮಾಜಿ ಪ್ರಧಾನಿ ಹಾಗೂ ನನ್ನ ಅಜ್ಜಿ ಇಂದಿರಾ ಗಾಂಧಿ ನನ್ನ ಜೀವನದ ಪ್ರೀತಿ ಮತ್ತು ನನ್ನ ಎರಡನೇ ತಾಯಿ ಎಂದು ಹೇಳಿದ್ದಾರೆ.

Rahul Gandhi: ನನ್ನ ಹೆಂಡತಿಯಾಗುವವಳು ಹೇಗಿರಬೇಕೆಂದರೆ...; ಜೀವನ ಸಂಗಾತಿ ಬಗ್ಗೆ ಮಾತಾಡಿದ ರಾಹುಲ್ ಗಾಂಧಿ
ರಾಹುಲ್ ಗಾಂಧಿ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Dec 29, 2022 | 11:01 AM

ನವದೆಹಲಿ: ಭಾರತದ ಮೋಸ್ಟ್​ ಎಲಿಜಿಬಲ್ ಬ್ಯಾಚುಲರ್​​ಗಳಲ್ಲಿ ಒಬ್ಬರಾಗಿರುವ ರಾಹುಲ್ ಗಾಂಧಿ (Rahul Gandhi) ತಮ್ಮ ಜೀವನ ಸಂಗಾತಿ ಹೇಗಿರಬೇಕೆಂಬುದರ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ನನ್ನ ಹೆಂಡತಿಯಾಗುವವಳಲ್ಲಿ ನನ್ನ ತಾಯಿ ಸೋನಿಯಾ ಗಾಂಧಿ (Sonia Gandhi) ಮತ್ತು ಅಜ್ಜಿ ಇಂದಿರಾ ಗಾಂಧಿ (Indira Gandhi) ಅವರ ಗುಣಗಳು ಇರಬೇಕು. ಅಮ್ಮ ಮತ್ತು ಅಜ್ಜಿಯ ವ್ಯಕ್ತಿತ್ವದ ಗುಣಗಳನ್ನು ಹೊಂದಿರುವವಳ ಜೊತೆ ನಾನು ಜೀವನವನ್ನು ಹಂಚಿಕೊಳ್ಳಲು ಬಯಸುತ್ತೇನೆ ಎಂದು ಹೇಳಿದ್ದಾರೆ.

ತಮ್ಮ ರಾಷ್ಟ್ರವ್ಯಾಪಿ ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಇಂದಿರಾ ಗಾಂಧಿಯಂತಹ ಮಹಿಳೆಯೊಂದಿಗೆ ಜೀವನ ಹಂಚಿಕೊಳ್ಳಲು ಬಯಸುತ್ತೀರಾ? ಎಂದು ನಿರೂಪಕಿ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.

ತಮ್ಮ ಅಜ್ಜಿ ಇಂದಿರಾ ಗಾಂಧಿಯ ಬಗ್ಗೆ ಮಾತನಾಡಿರುವ ರಾಹುಲ್ ಗಾಂಧಿ, ಮಾಜಿ ಪ್ರಧಾನಿ ಹಾಗೂ ನನ್ನ ಅಜ್ಜಿ ಇಂದಿರಾ ಗಾಂಧಿ ನನ್ನ ಜೀವನದ ಪ್ರೀತಿ ಮತ್ತು ನನ್ನ ಎರಡನೇ ತಾಯಿ ಎಂದು ಹೇಳಿದ್ದಾರೆ. ನನಗೆ ಮದುವೆಯಾಗಬಾರದು ಎಂದೇನಿಲ್ಲ. ಆಕೆ ನನ್ನ ತಾಯಿ ಮತ್ತು ಅಜ್ಜಿಯ ಗುಣಗಳನ್ನು ಹೊಂದಿದ್ದರೆ ನನಗೆ ಇಷ್ಟವಾಗುತ್ತಾಳೆ. ಅಂತಹ ಮಹಿಳೆಯನ್ನು ನನ್ನ ಜೀವನ ಸಂಗಾತಿಯನ್ನಾಗಿ ಸ್ವೀಕರಿಸಲು ನಾನು ಬಯಸುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿಯ ಭಾಷಣಗಳು ಭಾರತದಲ್ಲಿ ನಡುಕ ಹುಟ್ಟಿಸುತ್ತಿವೆ: ಎಂಕೆ ಸ್ಟಾಲಿನ್ ಶ್ಲಾಘನೆ

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬೈಕ್ ಮತ್ತು ಸೈಕಲ್‌ಗಳನ್ನು ಓಡಿಸುವುದು ನನಗೆ ಇಷ್ಟವಾದ ವಿಷಯ ಎಂದಿದ್ದಾರೆ. ಹಾಗೇ, ಎಲೆಕ್ಟ್ರಿಕ್ ಮೋಟಾರ್‌ಗಳಿರುವ ಬೈಕ್ ಮತ್ತು ಮೌಂಟೇನ್ ಬೈಕ್‌ಗಳನ್ನು ತಯಾರಿಸುವ ಚೀನಾದ ಎಲೆಕ್ಟ್ರಿಕ್ ಕಂಪನಿಯನ್ನು ಅವರು ಉಲ್ಲೇಖಿಸಿದ್ದಾರೆ.

“ನಾನು ಎಲೆಕ್ಟ್ರಿಕ್ ಸ್ಕೂಟರ್ ಓಡಿಸಿದ್ದೇನೆ, ಆದರೆ ಎಂದಿಗೂ ಎಲೆಕ್ಟ್ರಿಕ್ ಬೈಕ್ ಓಡಿಸಿಲ್ಲ. ನನ್ನ ಬಳಿ ಸ್ವಂತ ಕಾರಿಲ್ಲ. ನನಗೆ ಕಾರುಗಳಲ್ಲಿ ಆಸಕ್ತಿಯೂ ಇಲ್ಲ. ನನಗೆ ಬೈಕ್​ಗಳ ಬಗ್ಗೆಯೂ ಹುಚ್ಚಿಲ್ಲ. ಆದರೆ, ಬೈಕ್​ಗಳನ್ನು ಓಡಿಸುವುದೆಂದರೆ ನನಗೆ ಇಷ್ಟ. ನನಗೆ ಆಕಾಶದಲ್ಲಿ ಹಾರಾಡುವುದು, ನೀರಿನೊಳಗೆ ಈಜಾಡುವುದು, ನೆಲದ ಮೇಲೆ ಸಂಚರಿಸುವುದೆಲ್ಲವೂ ಇಷ್ಟ. ನಾನು ಪ್ರಯಾಣಿಸುವಾಗ ಅಮ್ಮನ ಕಾರನ್ನು ಬಳಸುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ರಾಹುಲ್ ಗಾಂಧಿ ರಾಮನಲ್ಲದಿರಬಹುದು, ಆದರೆ ಬಿಜೆಪಿ ರಾವಣನ ಹಾದಿಯಲ್ಲಿದೆ; ಸಲ್ಮಾನ್ ಖುರ್ಷಿದ್

ರಾಹುಲ್ ಗಾಂಧಿಯನ್ನು ಅವರ ವಿರೋಧಿಗಳು ಪಪ್ಪು ಎಂದು ಟೀಕಿಸುವುದರ ಬಗ್ಗೆಯೂ ಮಾತನಾಡಿರುವ ರಾಹುಲ್ ಗಾಂಧಿ, ನಾನು ಯಾರಿಗೂ, ಯಾವುದಕ್ಕೂ ಹೆದರುವುದಿಲ್ಲ. ನೀವು ಏನು ಹೇಳಲು ಬಯಸುತ್ತೀರೋ ಅದರಿಂದ ನನಗೇನೂ ಬೇಸರವಿಲ್ಲ. ನಾನು ಯಾರನ್ನೂ ದ್ವೇಷಿಸುವುದಿಲ್ಲ, ನೀವು ನನ್ನನ್ನು ನಿಂದಿಸಿದರೂ ಅಥವಾ ನನ್ನನ್ನು ಹೊಡೆದರೂ ನಾನು ನಿಮ್ಮನ್ನು ದ್ವೇಷಿಸುವುದಿಲ್ಲ. ಅವರು ತಮ್ಮ ಪ್ರಚಾರಕ್ಕಾಗಿ ನನ್ನನ್ನು “ಪಪ್ಪು” ಎಂದು ಕರೆಯುತ್ತಾರೆ. ಅದಕ್ಕೆಲ್ಲ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್