ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿಯ ಭಾಷಣಗಳು ಭಾರತದಲ್ಲಿ ನಡುಕ ಹುಟ್ಟಿಸುತ್ತಿವೆ: ಎಂಕೆ ಸ್ಟಾಲಿನ್ ಶ್ಲಾಘನೆ

ರಾಹುಲ್ ಅವರ ಭಾಷಣಗಳು ದೇಶದಲ್ಲಿ ನಡುಕ ಹುಟ್ಟಿಸುತ್ತಿವೆ, ಅವರು ಚುನಾವಣಾ ರಾಜಕೀಯ ಅಥವಾ ಪಕ್ಷ ರಾಜಕಾರಣವನ್ನು ಮಾತನಾಡುತ್ತಿಲ್ಲ, ಆದರೆ ಸಿದ್ಧಾಂತದ ರಾಜಕೀಯವನ್ನು ಮಾತನಾಡುತ್ತಿದ್ದಾರೆ. ಅದಕ್ಕಾಗಿಯೇ ಅವರನ್ನು ಕೆಲವು ವ್ಯಕ್ತಿಗಳು ತೀವ್ರವಾಗಿ ವಿರೋಧಿಸುತ್ತಿದ್ದಾರೆ

ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿಯ ಭಾಷಣಗಳು ಭಾರತದಲ್ಲಿ ನಡುಕ ಹುಟ್ಟಿಸುತ್ತಿವೆ: ಎಂಕೆ ಸ್ಟಾಲಿನ್ ಶ್ಲಾಘನೆ
ಎಂಕೆ ಸ್ಟಾಲಿನ್
Follow us
| Updated By: ರಶ್ಮಿ ಕಲ್ಲಕಟ್ಟ

Updated on: Dec 26, 2022 | 3:40 PM

ಚೆನ್ನೈ: ಭಾರತ್ ಜೋಡೋ ಯಾತ್ರೆಯಲ್ಲಿ (Bharat Jodo Yatra) ರಾಹುಲ್ ಗಾಂಧಿ (Rahul Gandhi) ಮಾಡುವ ಭಾಷಣಗಳು ದೇಶದಲ್ಲಿ ನಡುಕ ಹುಟ್ಟಿಸುತ್ತಿವೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ (MK Stalin) ಶ್ಲಾಘಿಸಿದ್ದಾರೆ. ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರು ಅವರನ್ನು ಹೊಗಳಿದ ಸ್ಟಾಲಿನ್, ದೇಶಕ್ಕೆ ಅವರಂಥ ನಾಯಕ ಮತ್ತು ಜಾತ್ಯಾತೀತ ಮತ್ತು ಸಮಾನತೆ ಮೌಲ್ಯವನ್ನು ಸಾರುವ ಮಹಾತ್ಮಗಾಂಧಿಯವರಂಥ ನಾಯಕರು ಬೇಕು ಎಂದಿದ್ದಾರೆ. ಭಾನುವಾರ ಚೆನ್ನೈನಲ್ಲಿ ಕಾಂಗ್ರೆಸ್​​​ನ ಹಿರಿಯ ನಾಯಕ ಎ ಗೋಪಣ್ಣ ಅವರು ನೆಹರು ಬಗ್ಗೆ ಬರೆದ ಮಾಮನಿತರ್ ನೆಹರು ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸ್ಟಾಲಿನ್ ಈ ಮಾತು ಹೇಳಿದ್ದಾರೆ. ನೆಹರು ಅವರು “ನಿಜವಾದ ಪ್ರಜಾಪ್ರಭುತ್ವವಾದಿ, ಸಂಸದೀಯ ಪ್ರಜಾಪ್ರಭುತ್ವದ ಸಂಕೇತ. ಆದ್ದರಿಂದಲೇ ಎಲ್ಲಾ ಪ್ರಜಾಸತ್ತಾತ್ಮಕ ಶಕ್ತಿಗಳು ಅವರನ್ನು ಅಭಿನಂದಿಸುತ್ತವೆ” ಎಂದು ಸ್ಟಾಲಿನ್ ಹೇಳಿದ್ದಾರೆ.ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರವನ್ನು ಟೀಕಿಸಿದ ಸ್ಟಾಲಿನ್, ಇಂದು ಸಂಸತ್ತಿನಲ್ಲಿ ಪ್ರಧಾನ ವಿಷಯಗಳ ಕುರಿತು ಚರ್ಚೆಯಾಗುತ್ತಿಲ್ಲ. ಆದರೆ ನೆಹರೂ ಅವರು ವಿರೋಧ ಪಕ್ಷಗಳ ಅಭಿಪ್ರಾಯಗಳನ್ನು ಪ್ರೋತ್ಸಾಹಿಸಿದರು.

ಸಾರ್ವಜನಿಕ ವಲಯದ ಉದ್ಯಮಗಳು ಮುಚ್ಚುತ್ತಿರುವಾಗಲೂ ನಮಗೆ ಈಗ ನೆಹರು ನೆನಪಾಗುತ್ತಾರೆ “ಇಂದಿನ ರಾಜಕೀಯ ಪರಿಸ್ಥಿತಿ ನಮಗೆ ನೆಹರು ಅವರ ನಿಜವಾದ ಮೌಲ್ಯವನ್ನು ತೋರಿಸುತ್ತದೆ. ಇಷ್ಟು ವರ್ಷಗಳ ನಂತರ ತಮಿಳುನಾಡಿಗೆ (ಇವಿಆರ್) ಪೆರಿಯಾರ್, ಅಣ್ಣಾ (ಸಿಎನ್ ಅಣ್ಣಾದೊರೈ) ಮತ್ತು ಕಲೈಂಜರ್ (ಎಂ ಕರುಣಾನಿಧಿ) ಅಗತ್ಯವಿರುವಂತೆಯೇ, ಭಾರತಕ್ಕೆ ಒಕ್ಕೂಟ, ಸಮಾನತೆ, ಭ್ರಾತೃತ್ವ, ಸಮಾನತೆ, ಜಾತ್ಯತೀತತೆಯನ್ನು ಸ್ಥಾಪಿಸಲು ಗಾಂಧಿ ಮತ್ತು ನೆಹರು ಅಗತ್ಯವಿದೆ ಎಂದು ಸ್ಟಾಲಿನ್ ಹೇಳಿದ್ದಾರೆ.

“ಆತ್ಮೀಯ ಸಹೋದರ ರಾಹುಲ್” ಅವರು ದೇಶದಾದ್ಯಂತ ಭಾರತ್ ಜೋಡೋ ಯಾತ್ರೆಯನ್ನು ಕೈಗೊಂಡಿದ್ದು, ಕನ್ಯಾಕುಮಾರಿಯಿಂದ ಅದಕ್ಕೆ ಚಾಲನೆ ನೀಡಿದ್ದಕ್ಕೆ ನಾನು ಖುಷಿ ಪಡುತ್ತೇನೆ ಎಂದು ಸ್ಟಾಲಿನ್ ಹೇಳಿದ್ದಾರೆ.

ಇದನ್ನೂ ಓದಿ: New Year Guidelines: ಹೊಸ ವರ್ಷಾಚರಣೆಗೆ ಕೊರೊನಾ ರೂಲ್ಸ್​​; ಸೆಲೆಬ್ರೆಶನ್​ಗೆ ರಾತ್ರಿ 1 ಗಂಟೆಯವರೆಗೆ ಮಾತ್ರ ಅವಕಾಶ, ಮಾಸ್ಕ್​, ಲಸಿಕೆ ಕಡ್ಡಾಯ

ರಾಹುಲ್ ಅವರ ಭಾಷಣಗಳು ದೇಶದಲ್ಲಿ ನಡುಕ ಹುಟ್ಟಿಸುತ್ತಿವೆ, ಅವರು ಚುನಾವಣಾ ರಾಜಕೀಯ ಅಥವಾ ಪಕ್ಷ ರಾಜಕಾರಣವನ್ನು ಮಾತನಾಡುತ್ತಿಲ್ಲ, ಆದರೆ ಸಿದ್ಧಾಂತದ ರಾಜಕೀಯವನ್ನು ಮಾತನಾಡುತ್ತಿದ್ದಾರೆ. ಅದಕ್ಕಾಗಿಯೇ ಅವರನ್ನು ಕೆಲವು ವ್ಯಕ್ತಿಗಳು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಅವರ ಭಾಷಣಗಳು ಕೆಲವೊಮ್ಮೆ ನೆಹರು ಅವರಂತೆಯೇ ಇರುತ್ತವೆ. ಆದರೆ ಆಶ್ಚರ್ಯವಾಗುತ್ತದೆ. ನೆಹರೂ ಅವರ ವಾರಸುದಾರರು ಹಾಗೆ ಮಾತನಾಡದಿದ್ದರೇ ಅಚ್ಚರಿ. ಮಹಾತ್ಮ ಗಾಂಧಿ ಮತ್ತು ನೆಹರೂ ಅವರ ವಾರಸುದಾರರ ಮಾತಿನಿಂದಾಗಿ ಗೋಡ್ಸೆಯ ವಂಶಸ್ಥರು ಕಹಿ ಅನುಭವಿಸುತ್ತಾರೆ” ಎಂದು ಸ್ಟಾಲಿನ್ ಹೇಳಿದರು.

ಹಿಂದಿಯನ್ನು ಹೇರುವುದಿಲ್ಲ ಎಂಬ ಅವರ ಭರವಸೆ ಸೇರಿದಂತೆ ತಮಿಳುನಾಡಿಗೆ ನೆಹರೂ ಅವರ ಕೊಡುಗೆಯನ್ನು ಅವರು ಪ್ರೀತಿಯಿಂದ ನೆನಪಿಸಿಕೊಂಡ ಸ್ಟಾಲಿನ್, ಹಿಂದಿ ಹೇರಿಕೆ ಪ್ರಯತ್ನಗಳು ಈಗಲೂ ನಡೆಯುತ್ತಿವೆ ಎಂದು ಅವರು ಆರೋಪಿಸಿದರು.

ದಿವಂಗತ ಪ್ರಧಾನಿಯವರು ರಾಜ್ಯಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಐಐಟಿ-ಮದ್ರಾಸ್ ಮತ್ತು ಇಂಟೆಗ್ರಲ್ ಕೋಚ್ ಫ್ಯಾಕ್ಟರಿ ಮತ್ತು ನೆಯ್ವೇಲಿ ಲಿಗ್ನೈಟ್ ಕಾರ್ಪೊರೇಷನ್ (ಎನ್‌ಎಲ್‌ಸಿ) ಇತರವು ಇದಕ್ಕೆ ಸಾಕ್ಷಿಯಾಗಿದೆ. ಮಹಾತ್ಮ ಗಾಂಧಿಯವರು ಸ್ವತಃ ನೆಹರು ಅವರನ್ನು ಹೊಗಳಿದ್ದರು ಮತ್ತು ಅವರ ನಾಯಕತ್ವದಲ್ಲಿ ದೇಶವು ಸುರಕ್ಷಿತ ಕೈಯಲ್ಲಿದೆ ಎಂದಿದ್ದರು ಎಂದು ಸ್ಟಾಲಿನ್ ಹೇಳಿದ್ದಾರೆ.

ನೆಹರು ಅವರು ಕಾಂಗ್ರೆಸ್‌ನ ಧ್ವನಿಯನ್ನು ಮಾತ್ರವಲ್ಲದೆ ಭಾರತದ ಧ್ವನಿಯನ್ನು ಪ್ರತಿಧ್ವನಿಸಿದರು. ಅವರು ಇಡೀ ಭಾರತಕ್ಕೆ ಪ್ರಧಾನಿಯಾಗಿದ್ದರು – ಅವರು ಒಂದು ಭಾಷೆ, ಒಂದು ನಂಬಿಕೆ, ಒಂದು ಧರ್ಮ, ಒಂದು ಸಂಸ್ಕೃತಿ, ಒಂದು ಕಾನೂನಿಗೆ ವಿರುದ್ಧವಾಗಿದ್ದರು .ಅವರು ಕೋಮುವಾದ ಮತ್ತು ರಾಷ್ಟ್ರೀಯತೆ ಸಹ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ ಎಂದು ಹೇಳಿದರು. ಅದಕ್ಕಾಗಿಯೇ ಅವರನ್ನು ಜಾತ್ಯತೀತ ಶಕ್ತಿಗಳು ಶ್ಲಾಘಿಸುತ್ತವೆ” ಎಂದಿದ್ದಾರೆ ಸ್ಟಾಲಿನ್. ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕ ಪಿ ಚಿದಂಬರಂ, ಟಿಎನ್‌ಸಿಸಿ ಅಧ್ಯಕ್ಷ ಕೆಎಸ್ ಅಳಗಿರಿ ಮತ್ತಿತರರು ಭಾಗವಹಿಸಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ