ಚೀನಾ- ಪಾಕ್ ಜತೆಯಾಗಿ ಯೋಜನೆ ರೂಪಿಸುತ್ತವೆ, ಯುದ್ಧ ನಡೆದರೆ ಎರಡರ ಜತೆ ನಡೆಯುತ್ತದೆ: ರಾಹುಲ್ ಗಾಂಧಿ

TV9 Digital Desk

| Edited By: Rashmi Kallakatta

Updated on: Dec 25, 2022 | 8:58 PM

ಚೀನಾ ಮತ್ತು ಪಾಕಿಸ್ತಾನ ಒಟ್ಟಿಗೆ ಸೇರಿಕೊಂಡಿವೆ, ಯಾವುದೇ ಯುದ್ಧ ನಡೆದರೆ ಅದು ಎರಡರೊಂದಿಗೂ ನಡೆಯುತ್ತದೆ, ಆದ್ದರಿಂದ  ದೇಶಕ್ಕೆ ದೊಡ್ಡ ನಷ್ಟವಾಗಲಿದೆ. ಭಾರತವು ಈಗ ಅತ್ಯಂತ ದುರ್ಬಲವಾಗಿದೆ. ನನಗೆ ನಿಮ್ಮ (ಸೇನೆ) ಬಗ್ಗೆ ಗೌರವ ಮಾತ್ರವಲ್ಲ ನಿಮ್ಮ ಬಗ್ಗೆ ಪ್ರೀತಿ ಮತ್ತು ವಾತ್ಸಲ್ಯವಿದೆ ಎಂದು ರಾಹುಲ್ ಹೇಳಿದ್ದಾರೆ.

ಚೀನಾ- ಪಾಕ್ ಜತೆಯಾಗಿ ಯೋಜನೆ ರೂಪಿಸುತ್ತವೆ, ಯುದ್ಧ ನಡೆದರೆ ಎರಡರ ಜತೆ ನಡೆಯುತ್ತದೆ: ರಾಹುಲ್ ಗಾಂಧಿ
ಹರ್ಯಾಣದಲ್ಲಿ ಹಿರಿಯ ಸೇನಾಧಿಕಾರಿಗಳ ಜತೆ ರಾಹುಲ್ ಗಾಂಧಿ

ದೆಹಲಿ: ಚೀನಾ ಮತ್ತು ಪಾಕಿಸ್ತಾನ (Pakistan) ಒಟ್ಟಿಗೆ ತಯಾರಿ ನಡೆಸುತ್ತಿದ್ದು, ಒಂದು ವೇಳೆ ಯುದ್ಧ ನಡೆದರೆ ಅದು ಎರಡೂ ದೇಶಗಳ ವಿರುದ್ಧ ನಡೆಯಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಹೇಳಿದ್ದಾರೆ. ಭಾರತ್ ಜೋಡೋ ಯಾತ್ರೆಯ (Bharat jodo yatra) ಸಂದರ್ಭದಲ್ಲಿ ಸಶಸ್ತ್ರ ಪಡೆಗಳ ಯೋಧರೊಂದಿಗೆ ಸಂವಾದ ನಡೆಸಿದ ರಾಹುಲ್ ಗಾಂಧಿ ತಮ್ಮ ಯೂಟ್ಯೂಬ್ ಚಾನೆಲ್​​ನಲ್ಲಿ ವಿಡಿಯೊವೊಂದನ್ನು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ರಾಹುಲ್, ಚೀನಾ ಮತ್ತು ಪಾಕಿಸ್ತಾನ ಒಟ್ಟಿಗೆ ಸೇರಿಕೊಂಡಿವೆ, ಯಾವುದೇ ಯುದ್ಧ ನಡೆದರೆ ಅದು ಎರಡರೊಂದಿಗೂ ನಡೆಯುತ್ತದೆ, ಆದ್ದರಿಂದ  ದೇಶಕ್ಕೆ ದೊಡ್ಡ ನಷ್ಟವಾಗಲಿದೆ. ಭಾರತವು ಈಗ ಅತ್ಯಂತ ದುರ್ಬಲವಾಗಿದೆ. ನನಗೆ ನಿಮ್ಮ (ಸೇನೆ) ಬಗ್ಗೆ ಗೌರವ ಮಾತ್ರವಲ್ಲ ನಿಮ್ಮ ಬಗ್ಗೆ ಪ್ರೀತಿ ಮತ್ತು ವಾತ್ಸಲ್ಯವಿದೆ. ನೀವು ಈ ರಾಷ್ಟ್ರವನ್ನು ರಕ್ಷಿಸುತ್ತೀರಿ. ನೀವು ಇಲ್ಲದೆ ಈ ರಾಷ್ಟ್ರವು ಅಸ್ತಿತ್ವದಲ್ಲಿಲ್ಲ ಎಂದಿದ್ದಾರೆ. ಮೊದಲು ನಮಗೆ ಚೀನಾ ಮತ್ತು ಪಾಕಿಸ್ತಾನದ ಇಬ್ಬರು ಶತ್ರುಗಳಿದ್ದರು, ಅವುಗಳನ್ನು ಪ್ರತ್ಯೇಕವಾಗಿ ಇಡುವುದು ನಮ್ಮ ನೀತಿಯಾಗಿತ್ತು. ಮೊದಲಿಗೆ ಎರಡು ಮುಂಭಾಗದ ಯುದ್ಧ ನಡೆಯಬಾರದು ಎಂದು ಹೇಳಲಾಯಿತು ನಂತರ ಜನರು ಎರಡೂವರೆ ಮುಂಭಾಗದ ಯುದ್ಧ ನಡೆಯುತ್ತಿದೆ ಎಂದರು. ಅಂದರೆ ಪಾಕಿಸ್ತಾನ, ಚೀನಾ ಮತ್ತು ಭಯೋತ್ಪಾದನೆ ವಿರುದ್ಧದ ಯುದ್ಧ. ಇಂದು ಚೀನಾ ಮತ್ತು ಪಾಕಿಸ್ತಾನ ಎಂಬ ಒಂದು ಮುಂಭಾಗವಿದೆ, ಅದು ಒಟ್ಟಿಗೆ ಇದೆ. ಯುದ್ಧ ಸಂಭವಿಸಿದರೆ ಅದು ಎರಡರೊಂದಿಗೂ ಸಂಭವಿಸುತ್ತದೆ. ಅವರು ಮಿಲಿಟರಿಯಾಗಿ ಮಾತ್ರವಲ್ಲದೆ ಆರ್ಥಿಕವಾಗಿಯೂ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ ಎಂದಿದ್ದಾರೆ ರಾಹುಲ್.

ಕೇಂದ್ರ ಸರ್ಕಾರದ ನೀತಿಗಳನ್ನು ಟೀಕಿಸಿದ ರಾಹುಲ್ ಗಾಂಧಿ 2014 ರ ನಂತರ ನಮ್ಮ ಆರ್ಥಿಕ ವ್ಯವಸ್ಥೆಯು ನಿಧಾನಗೊಂಡಿದೆ. ನಮ್ಮ ದೇಶದಲ್ಲಿ ಗಲಭೆ, ಜಗಳ, ಗೊಂದಲ ಮತ್ತು ದ್ವೇಷವಿದೆ. ನಮ್ಮ ಮನಸ್ಥಿತಿ ಇನ್ನೂ ಎರಡೂವರೆ ಮುಂಭಾಗದ ಯುದ್ಧವಾಗಿದೆ. ನಮ್ಮ ಮನಸ್ಥಿತಿ ಜಂಟಿ ಕಾರ್ಯಾಚರಣೆ ಮತ್ತು ಸೈಬರ್ ಯುದ್ಧದ ಬಗ್ಗೆ ಅಲ್ಲ. ಭಾರತ ಈಗ ಅತ್ಯಂತ ದುರ್ಬಲವಾಗಿದೆ. ಚೀನಾ ಮತ್ತು ಪಾಕಿಸ್ತಾನ ಎರಡೂ ನಮಗಾಗಿ ಸರ್ಪ್ರೈಸ್ ಸಿದ್ಧಪಡಿಸುತ್ತದೆ.ಅದಕ್ಕಾಗಿಯೇ ಸರ್ಕಾರವು ಸುಮ್ಮನಿರಲು ಸಾಧ್ಯವಿಲ್ಲ ಎಂದು ನಾನು ಪದೇ ಪದೇ ಹೇಳುತ್ತೇನೆ.

ಗಡಿಯಲ್ಲಿ ಏನಾಯಿತು ಎಂಬುದನ್ನು ಸರ್ಕಾರ ದೇಶದ ಜನರಿಗೆ ಹೇಳಬೇಕು. ನಾವು ಯಾವ ಕ್ರಮವನ್ನು ತೆಗೆದುಕೊಳ್ಳಬೇಕು ನಾವು ಇಂದಿನಿಂದ ಪ್ರಾರಂಭಿಸಬೇಕು. ನಿಜವಾಗಿಯೂ ನಾವು ಐದು ವರ್ಷಗಳ ಹಿಂದೆ ಕಾರ್ಯಪ್ರವೃತ್ತರಾಗಬೇಕಿತ್ತು. ಆದರೆ ನಾವು ಅದನ್ನು ಮಾಡಲಿಲ್ಲ. ನಾವು ವೇಗವಾಗಿ ಕೆಲಸ ಮಾಡದಿದ್ದರೆ ದೊಡ್ಡ ನಷ್ಟವಾಗುತ್ತದೆ. ಅರುಣಾಚಲ ಮತ್ತು ಲಡಾಖ್‌ನ ಗಡಿಯಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ನಾನು ತುಂಬಾ ಕಾಳಜಿ ವಹಿಸುತ್ತೇನೆ ಎಂದು ಅವರು ಹೇಳಿದರು.

ಇದನ್ನೂ ಓದಿ: Pushpa Kamal Dahal Prachanda: ಮೂರನೇ ಬಾರಿ ನೇಪಾಳದ ಪ್ರಧಾನಿಯಾಗಿ ಪುಷ್ಪ ಕಮಲ್ ದಹಾಲ್ ಪ್ರಚಂಡ ನೇಮಕ

ಡಿಸೆಂಬರ್ 13 ರಂದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನ ಯಾಂಗ್ಟ್ಸೆ ಪ್ರದೇಶದಲ್ಲಿ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಪಡೆಗಳು ವಾಸ್ತವಿಕ ನಿಯಂತ್ರಣ ರೇಖೆಯನ್ನು ಉಲ್ಲಂಘಿಸಲು ಪ್ರಯತ್ನಿಸಿದರು. ಆದರೆ ಭಾರತೀಯ ಸೇನಾ ಕಮಾಂಡರ್‌ಗಳ ಸಮಯೋಚಿತ ಹಸ್ತಕ್ಷೇಪದಿಂದಾಗಿ ಸೇನೆ ಅವರನ್ನು ಹಿಮ್ಮೆಟ್ಟಿಸಿತು ಎಂದು ರಾಜ್ಯಸಭೆಗೆ ತಿಳಿಸಿದರು. ರಾಜ್ಯಸಭೆಯಲ್ಲಿ ಹೇಳಿಕೆ ನೀಡಿದ ರಕ್ಷಣಾ ಸಚಿವರು “ನಮ್ಮ ಪಡೆಗಳು ನಮ್ಮ ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಲು ಬದ್ಧವಾಗಿವೆ. ಅದರ ಮೇಲೆ ಮಾಡಿದ ಯಾವುದೇ ಪ್ರಯತ್ನವನ್ನು ವಿಫಲಗೊಳಿಸುವುದನ್ನು ಮುಂದುವರಿಸುತ್ತವೆ” ಎಂದು ಮೇಲ್ಮನೆಗೆ ಭರವಸೆ ನೀಡಿದರು. ಈ ಇಡೀ ಸದನವು ನಮ್ಮ ಸೈನಿಕರನ್ನು ಕೆಚ್ಚೆದೆಯ ಪ್ರಯತ್ನದಲ್ಲಿ ಬೆಂಬಲಿಸಲು ಒಗ್ಗಟ್ಟಾಗಿ ನಿಲ್ಲುತ್ತದೆ” ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada