AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bharat Jodo Yatra: ಬಿಜೆಪಿ 24×7 ಹಿಂದೂ-ಮುಸ್ಲಿಂ ದ್ವೇಷ ಹರಡುತ್ತಿದೆ: ರಾಹುಲ್ ಗಾಂಧಿ

ನಿಜವಾದ ಸಮಸ್ಯೆಗಳಿಂದ ನಿಮ್ಮ ಗಮನವನ್ನು ಬೇರೆಡೆಗೆ ತಿರುಗಿಸಲು 24x7 ಹಿಂದೂ-ಮುಸ್ಲಿಂ ದ್ವೇಷವನ್ನು ಹರಡಲಾಗುತ್ತಿದೆ ಎಂದು ಹೇಳಿದರು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಭಾರತ್ ಜೋಡೋ ಯಾತ್ರೆಯಲ್ಲಿ ದೆಹಲಿಯ ಕೆಂಪು ಕೋಟೆಗೆ ಬಂದು ತಲುಪಿದೆ.

Bharat Jodo Yatra: ಬಿಜೆಪಿ 24x7 ಹಿಂದೂ-ಮುಸ್ಲಿಂ ದ್ವೇಷ ಹರಡುತ್ತಿದೆ: ರಾಹುಲ್ ಗಾಂಧಿ
Bharat Jodo Yatra: Rahul Gandhi Image Credit source: google image
TV9 Web
| Edited By: |

Updated on:Dec 24, 2022 | 7:10 PM

Share

ದೆಹಲಿ: ಧಾರ್ಮಿಕ ಭಿನ್ನಾಭಿಪ್ರಾಯಗಳನ್ನು ಅಸ್ತ್ರವನ್ನಾಗಿ ಬಳಸಿಕೊಂಡು ದ್ವೇಷವನ್ನು ಹರಡುತ್ತಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ವಾಗ್ದಾಳಿ ನಡೆಸಿದ್ದಾರೆ. ಇಂದು ಸಂಜೆ ಭಾರತ್ ಜೋಡೋ ಯಾತ್ರೆಯಲ್ಲಿ (Bharat Jodo Yatra) ದೆಹಲಿ ಸ್ಮಾರಕವನ್ನು ತಲುಪಿದ ನಂತರ ಕೆಂಪು ಕೋಟೆಯಲ್ಲಿ ಮಾಡಿದ ಭಾಷಣದಲ್ಲಿ ರಾಹುಲ್ ಗಾಂಧಿ, ನಿಜವಾದ ಸಮಸ್ಯೆಗಳಿಂದ ನಿಮ್ಮ ಗಮನವನ್ನು ಬೇರೆಡೆಗೆ ತಿರುಗಿಸಲು 24×7 ಹಿಂದೂ-ಮುಸ್ಲಿಂ ದ್ವೇಷವನ್ನು ಹರಡಲಾಗುತ್ತಿದೆ ಎಂದು ಹೇಳಿದರು. ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಇಂದು ಬೆಳಗ್ಗೆ ಯಾತ್ರೆಯಲ್ಲಿ ಪಾಲ್ಗೊಂಡರು. ನಂತರ, ಮೆರವಣಿಗೆ ಕೆಂಪು ಕೋಟೆ ಬಳಿ ಬಂದಾಗ ನಟ ಕಮಲ್ ಹಾಸನ್ ರಾಹುಲ್ ಗಾಂಧಿಗೆ ಸಾಥ್ ನೀಡಿದರು.

ನಾನು 2,800 ಕಿಲೋಮೀಟರ್ ನಡೆದಿದ್ದೇನೆ, ಆದರೆ ಯಾವುದೇ ದ್ವೇಷವನ್ನು ನೋಡಲಿಲ್ಲ. ನಾನು ಟಿವಿ ಆನ್ ಮಾಡಿದಾಗ, ಮಾತ್ರ ನಾನು ಹಿಂಸೆಯನ್ನು ನೋಡುತ್ತೇನೆ ಎಂದು ರಾಹುಲ್ ಹೇಳಿದರು. ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಗೆ ಸೇರುವುದು ಮತ್ತು ರಾಹುಲ್ ಗಾಂಧಿ ಅವರೊಂದಿಗೆ ನಡೆಯುವುದು ರಾಜಕೀಯವಾಗಿ ತಪ್ಪು ಎಂದು ಜನರು ತನ್ನ ಬಳಿಗೆ ಬಂದರು ಎಂದು ಕಮಲ್ ಹಾಸನ್ ಹೇಳಿದರು.

ಇದನ್ನು ಓದಿ;Bharat Jodo Yatra: ಭಾರತ್​ ಜೋಡೋ ಯಾತ್ರೆ ತುಸು ಹೊತ್ತು ಸ್ಥಗಿತಗೊಳಿಸಿ ಆ್ಯಂಬುಲೆನ್ಸ್​ಗೆ ದಾರಿ ಮಾಡಿಕೊಟ್ಟ ರಾಹುಲ್ ಗಾಂಧಿ

ಇದು ದೇಶಕ್ಕೆ ಬೇಕಾದ ಸಮಯ. ಇಂದು ನನ್ನ ಆಂತರಿಕ ಧ್ವನಿ ಹೇಳಿದೆ, ಭಾರತ್ ತೋಡ್ನೆ ಕಿ ನಹಿ ಜೋಡ್ನೆ ಕಿ ಮದದ್ ಕರೋ (ದೇಶವನ್ನು ಒಗ್ಗೂಡಿಸಲು ಸಹಾಯ ಮಾಡಿ, ಅದನ್ನು ಒಡೆಯಬೇಡಿ) ಎಂದು ಹೇಳಿದರು. ಕಮಲ್ ಹಾಸನ್ ಯಾತ್ರೆಯಲ್ಲಿ ಭಾಗವಹಿಸಿದರೂ ರಾಜಕೀಯ ಮೈತ್ರಿಗಳ ಬಗ್ಗೆ ಮಾತನಾಡಲಿಲ್ಲ. ಏಪ್ರಿಲ್ 2021 ರಲ್ಲಿ ತಮಿಳುನಾಡಿನಲ್ಲಿ ತನ್ನ ಮೊದಲ ಚುನಾವಣೆಯಲ್ಲಿ ಸ್ಪರ್ಧಿಸಿದ ಅವರ ಪಕ್ಷವು ಚುನಾವಣಾ ಸೋತಿತ್ತು.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:00 pm, Sat, 24 December 22

Follow Us
Web contact
Web contact

TV9 Kannada

Read More
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ