ನೂತನ ಎಎಪಿ ಕೌನ್ಸಿಲರ್‌ಗಳನ್ನು ಬೇಟೆಯಾಡಲು ಯತ್ನಿಸುತ್ತಿರುವ ಬಿಜೆಪಿ: ದೆಹಲಿ ಡಿಸಿಎಂ ಆರೋಪ
ನೂತನವಾಗಿ ಚುನಾಯಿತರಾದ ಆಮ್ ಆದ್ಮಿ ಪಕ್ಷದ ಕೌನ್ಸಿಲರ್‌ಗಳನ್ನು ಬಿಜೆಪಿಯು ತಮ್ಮ ಪಕ್ಷದತ್ತ ಸೆಳೆಯಲು ಯತ್ನಿಸುತ್ತಿದ್ದು, ಇದರ ಆಟಕ್ಕೆ ಯಾರೂ ಬಲಿಯಾಗುವುದಿಲ್ಲ ಎಂದು ದೆಹಲಿ ಉಪಮುಖ್ಯಮಂತ್ರಿ ಹೇಳಿದ್ದಾರೆ.
ದೆಹಲಿ: ಮಹಾನಗರ ಪಾಲಿಕೆ ಚುನಾವಣೆ (Delhi Municipal Corporation Election) ಯಲ್ಲಿ ನೂತವಾಗಿ ಚುನಾಯಿತರಾದ ಎಎಪಿ ಕೌನ್ಸಿಲರ್‌ಗಳನ್ನು ತಮ್ಮತ್ತ ಸೆಳೆಯಲು ಬಿಜೆಪಿ (BJP) ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Delhi DCM Manish Sisodia), ಬಿಜೆಪಿಯ ಆಟಕ್ಕೆ ಯಾರೂ ಬಲಿಯಾಗುವುದಿಲ್ಲ ಎಂದು ಹೇಳಿದರು. ಅಲ್ಲದೆ, ನೂತನ ಕೌನ್ಸಿಲರ್‌ಗಳಿಗೆ ದೂರವಾಣಿ ಕರೆಗಳು ಬಂದರೆ ಕರೆಯನ್ನು ರೆಕಾರ್ಡ್ ಮಾಡುವಂತೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.
ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು 134 ಸ್ಥಾನಗಳಲ್ಲಿ ಗೆಲುವು ಸಾಧಿಸಿದ ಬಳಿಕ ಮುನ್ಸಿಪಲ್ ಕಾರ್ಪೊರೇಷನ್‌ನಲ್ಲಿ ಬಿಜೆಪಿಯ 15 ವರ್ಷಗಳ ಆಡಳಿತವನ್ನು ಕೊನೆಗೊಂಡಿತು. 250 ವಾರ್ಡ್ಗಳ ಪೈಕಿ ಕಾಂಗ್ರೆಸ್ ಪಕ್ಷವನ್ನು ಕೇವಲ 9 ಸ್ಥಾನಗಳಿಗೆ ಇಳಿಸಿದ ನಂತರ ಮನೀಶ್ ಸಿಸೋಡಿಯಾ ಅವರು ಈ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: MCD election results 2022 ದೆಹಲಿ ಎಂಸಿಡಿ ಚುನಾವಣೆಯಲ್ಲಿ ಗೆದ್ದು ಬೀಗಿದ ಎಎಪಿ; 15 ವರ್ಷದ ಬಿಜೆಪಿ ಆಡಳಿತ ಅಂತ್ಯ
ಎಕ್ಸಿಟ್ ಪೋಲ್‌ಗಳಲ್ಲಿ ಭಾರಿ ಸೋಲು ಅನುಭವಿಸುವ ಮುನ್ಸೂಚನೆ ನೀಡಿದ್ದ ಬಿಜೆಪಿ 104 ಪುರಸಭೆಯ ವಾರ್ಡ್‌ಗಳನ್ನು ಗೆದ್ದು ಉತ್ಸಾಹದಿಂದ ಹೋರಾಟ ನಡೆಸಿತು. ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿಆಮ್ ಆದ್ಮಿ ಪಕ್ಷ (AAP) 132 ಸ್ಥಾನಗಳೊಂದಿಗೆ ಭರ್ಜರಿ ಗೆಲುವು ಸಾಧಿಸಿದೆ.ಅದೇ ವೇಳೆ 15 ವರ್ಷಗಳ ಕಾಲ ದೆಹಲಿ ಮಹಾನಗರ ಪಾಲಿಕೆಯಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ 102, ಕಾಂಗ್ರೆಸ್ 9 ಸೀಟು ಗಳಿಸಿದೆ. 12 ಪಕ್ಷೇತರರು ಕೂಡಾ ಈ ಚುನಾವಣೆಯಲ್ಲಿ ಗೆದ್ದಿದ್ದಾರೆ.
ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ