ಉತ್ತರ ಪ್ರದೇಶದ ಕಾನ್ಪುರದಲ್ಲಿ ಬಸ್-ಆಟೊ ಮುಖಾಮುಖಿ: 16 ಮಂದಿ ಸಾವು, 30 ಜನರಿಗೆ ಗಾಯ

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ. ಎಲ್ಲ ಹಿರಿಯ ಅಧಿಕಾರಿಗಳೂ ಸ್ಥಳಕ್ಕೆ ಭೇಟಿ ನೀಡಿ, ನೊಂದವರಿಗೆ ನೆರವಾಗಬೇಕು ಎಂದು ಸೂಚಿಸಿದ್ದಾರೆ.

ಉತ್ತರ ಪ್ರದೇಶದ ಕಾನ್ಪುರದಲ್ಲಿ ಬಸ್-ಆಟೊ ಮುಖಾಮುಖಿ: 16 ಮಂದಿ ಸಾವು, 30 ಜನರಿಗೆ ಗಾಯ
ರಸ್ತೆ ಅಪಘಾತ
Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jun 08, 2021 | 10:58 PM

ಲಖನೌ: ಉತ್ತರ ಪ್ರದೇಶದ ಕಾನ್ಪುರದ ಉಪನಗರ ಸಚೆಂದಿಯಲ್ಲಿ ಬಸ್ ಮತ್ತು ಆಟೊ ಮಂಗಳವಾರ ಮುಖಾಮುಖಿಯಾಗಿ 16 ಮಂದಿ ಮೃತಪಟ್ಟಿದ್ದಾರೆ. 30 ಮಂದಿಗೆ ಗಾಯಗಳಾಗಿವೆ. ಗಾಯಗೊಂಡವರನ್ನು ಲಾಲಾ ಲಜಪತ್​ರಾಯ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡ ಕೆಲವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಹೀಗಾಗಿ ಮೃತರ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂದು ಪೊಲೀಸರು ಹೇಳಿದ್ದಾರೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ. ಎಲ್ಲ ಹಿರಿಯ ಅಧಿಕಾರಿಗಳೂ ಸ್ಥಳಕ್ಕೆ ಭೇಟಿ ನೀಡಿ, ನೊಂದವರಿಗೆ ನೆರವಾಗಬೇಕು ಎಂದು ಸೂಚಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಬಸ್-ಆಟೊ ಮುಖಾಮುಖಿ

(Accident in Kanpur of Uttar Pradesh as bus collides with three wheeler)

ಇದನ್ನೂ ಓದಿ: ಆಂಧ್ರದ ಪೂರ್ವ ಗೋದಾವರಿಯಲ್ಲಿ ಕಾರು ಅಪಘಾತ; ಮಗು ಸೇರಿ ನಾಲ್ವರ ಸಾವು

ಇದನ್ನೂ ಓದಿ: Viral Video: ’ಅವಸರವೇ ಅಪಘಾತಕ್ಕೆ ಕಾರಣ’ ಸಮಯಕ್ಕೆ ಸರಿಯಾಗಿ ಎಚ್ಚರಿಸಿದ ಬೇಸ್​ ಜಂಪರ್​ ಸ್ನೇಹಿತನಿಗೆ ಕೊಡಬೇಕಿದೆ ಉಡುಗೊರೆ

Published On - 10:50 pm, Tue, 8 June 21