AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊವಿಡ್ ಲಸಿಕೆ ಮಾರಾಟ ದರಪಟ್ಟಿ ಪರಿಷ್ಕರಿಸಿದ ಕೇಂದ್ರ ಸರ್ಕಾರ; ಖಾಸಗಿ ಆಸ್ಪತ್ರೆಗಳಲ್ಲಿ ಯಾವ ಲಸಿಕೆಗೆ ಎಷ್ಟು ಬೆಲೆ?

ಯಾವುದೇ ಕೊವಿಡ್ ಲಸಿಕೆಯ ಒಂದು ಡೋಸ್ ವಿತರಿಸಲು ₹ 150ಕ್ಕಿಂತ ಹೆಚ್ಚು ಸೇವಾ ವೆಚ್ಚವನ್ನು ತೆಗೆದುಕೊಳ್ಳದಿರುವಂತೆ ಸೂಚನೆ ನೀಡಲಾಗಿದ್ದು, ರಾಜ್ಯ ಸರ್ಕಾರಗಳು ಖಾಸಗಿ ಆಸ್ಪತ್ರೆಗಳ ಮೇಲೆ ನಿಯಂತ್ರಣ ಸಾಧಿಸಲು ಸೂಚಿಸಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಕೊವಿಡ್ ಲಸಿಕೆ ವಿತರಣೆಗೆ ಹೆಚ್ಚಿನ ಹಣ ಪಡೆದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಚ್ಚರಿಕೆ ನೀಡಲಾಗಿದೆ.

ಕೊವಿಡ್ ಲಸಿಕೆ ಮಾರಾಟ ದರಪಟ್ಟಿ ಪರಿಷ್ಕರಿಸಿದ ಕೇಂದ್ರ ಸರ್ಕಾರ; ಖಾಸಗಿ ಆಸ್ಪತ್ರೆಗಳಲ್ಲಿ ಯಾವ ಲಸಿಕೆಗೆ ಎಷ್ಟು ಬೆಲೆ?
ಕೊವಿಡ್ 19 ಲಸಿಕೆ ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: guruganesh bhat

Updated on: Jun 08, 2021 | 10:14 PM

ದೆಹಲಿ: ಖಾಸಗಿ ಆಸ್ಪತ್ರೆಗಳಲ್ಲಿ ಕೊವಿಡ್ ಲಸಿಕೆ ಮಾರಾಟ ದರಪಟ್ಟಿಯನ್ನು ಪರಿಷ್ಕರಿಸಿ ಕೇಂದ್ರ ಸರ್ಕಾರ ಆದೇಶ ಪ್ರಕಟಿಸಿದೆ. ಕೊವಿಶೀಲ್ಡ್ ಒಂದು ಡೋಸ್ ಲಸಿಕೆಯ ದರ ₹ 780 ನಿಗಡಿಪಡಿಸಲಾಗಿದ್ದು, ಕೊವ್ಯಾಕ್ಸಿನ್ ಲಸಿಕೆಯ ಒಂದು ಡೋಸ್​ಗೆ ₹ 1,410 ನಿಗದಿಪಡಿಸಲಾಗಿದೆ. ರಷ್ಯಾ ಮೂಲದ ಸ್ಪುಟ್ನಿಕ್ ವಿ ಒಂದು ಡೋಸ್ ಲಸಿಕೆಗೆ ₹ 1,145 ನಿಗದಿಪಡಿಸಿ ದರಪಟ್ಟಿಯನ್ನು ಕೇಂದ್ರ ಸರ್ಕಾರ ಪರಿಷ್ಕರಿಸಿದೆ. ನಿಗಡಿಪಡಿಸಿದ ದರಕ್ಕಿಂತ ಹೆಚ್ಚಿಗೆ ಹಣವನ್ನು ಪಡೆಯದಂತೆ ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರ ಖಡಕ್ ಎಚ್ಚರಿಕೆ ನೀಡಿದೆ.

ಯಾವುದೇ ಕೊವಿಡ್ ಲಸಿಕೆಯ ಒಂದು ಡೋಸ್ ವಿತರಿಸಲು ₹ 150ಕ್ಕಿಂತ ಹೆಚ್ಚು ಸೇವಾ ವೆಚ್ಚವನ್ನು ತೆಗೆದುಕೊಳ್ಳದಿರುವಂತೆ ಸೂಚನೆ ನೀಡಲಾಗಿದ್ದು, ರಾಜ್ಯ ಸರ್ಕಾರಗಳು ಖಾಸಗಿ ಆಸ್ಪತ್ರೆಗಳ ಮೇಲೆ ನಿಯಂತ್ರಣ ಸಾಧಿಸಲು ಸೂಚಿಸಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಕೊವಿಡ್ ಲಸಿಕೆ ವಿತರಣೆಗೆ ಹೆಚ್ಚಿನ ಹಣ ಪಡೆದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಚ್ಚರಿಕೆ ನೀಡಲಾಗಿದೆ.

PM Narendra Modi ಜೂನ್ 21ರ ನಂತರ ಎಲ್ಲ ರಾಜ್ಯಗಳಿಗೂ ಕೇಂದ್ರದಿಂದ ಉಚಿತ ಲಸಿಕೆ: ನರೇಂದ್ರ ಮೋದಿ ಯೋಗ ದಿನವೂ ಆಗಿರುವ ಜೂನ್ 21ರ ನಂತರ ದೇಶದಲ್ಲಿ 18 ವರ್ಷ ದಾಟಿದ ಎಲ್ಲರಿಗೂ ಲಸಿಕೆ ಕೊಡುವ ಅಭಿಯಾನ ಹೊಸ ವೇಗದಿಂದ ನಡೆಯಲಿದೆ. ಭಾರತ ಸರ್ಕಾರವೇ ಎಲ್ಲ ರಾಜ್ಯಗಳಿಗೂ ಉಚಿತವಾಗಿ ಕೊಡಲಿದೆ ಎಂದಿದ್ದಾರೆ. ಭಾರತದ ಎಲ್ಲ ನಾಗರಿಕರಿಗೂ ಉಚಿತ ಲಸಿಕೆ ಕೊಡಲಾಗುವುದು. ಬಡವರು, ಮಧ್ಯಮ ವರ್ಗದವರು ಎಂಬ ಭೇದ ಇರುವುದಿಲ್ಲ. ಯಾರಿಗಾದರೂ ಉಚಿತ ಲಸಿಕೆಯ ಬದಲು ಖಾಸಗಿ ಆಸ್ಪತ್ರೆಗಳಲ್ಲಿ ಪಡೆಯುತ್ತೇವೆ ಎಂದಾದರೆ ಅದಕ್ಕೂ ಅವಕಾಶವಿದೆ. ಖಾಸಗಿ ಆಸ್ಪತ್ರೆಗಳು ಲಸಿಕೆಗಳಿಗೆ ಸೇವಾ ಶುಲ್ಕವಾಗಿ 150 ರೂ. ಮಾತ್ರ ವಿಧಿಸಬಹುದು. ದೇಶದಲ್ಲಿ ಉತ್ಪಾದನೆಯಾಗುವ ಒಟ್ಟು ಲಸಿಕೆ ಡೋಸ್​ಗಳ ಪೈಕಿ ಶೇ 25ರಷ್ಟು ಖಾಸಗಿ ವೈದ್ಯಕೀಯ ಸಂಸ್ಥೆಗಳ ಖರೀದಿಗೆ ಅವಕಾಶ ನೀಡಲಾಗುವುದು ಎಂದು ಮೋದಿ ಹೇಳಿದ್ದಾರೆ.

ಕೊರೊನಾದ 2ನೇ ಅಲೆಯ ಮೊದಲೇ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ಕೊಡದಿದ್ದರೆ ಏನಾಗ್ತಿತ್ತು ಯೋಚಿಸಿ. ವೈದ್ಯರು, ನರ್ಸಿಂಗ್ ಸಿಬ್ಬಂದಿ, ಆ್ಯಂಬುಲೆನ್ಸ್​ ಡ್ರೈವರ್​, ಸ್ವಚ್ಛತಾ ಕಾರ್ಮಿಕರಿಗೆ ಲಸಿಕೆ ಹಾಕಿಸದಿದ್ದರೆ ಏನಾಗುತ್ತಿತ್ತು? ಅವರಿಗೆ ಲಸಿಕೆ ಸಿಕ್ಕ ಕಾರಣದಿಂದಲೇ ಅವರು ಇತರರ ಆರೋಗ್ಯ ಕಾಪಾಡಲು ತೊಡಗಿಸಿಕೊಳ್ಳಲು ಆಯಿತು. ಒಂದು ಅಳತೆ ಎಲ್ಲರಿಗೂ ಅನ್ವಯಿಸುವುದಿಲ್ಲ ಎಂಬ ಮಾತು ಕೇಳಿಬಂತು. ಸಂವಿಧಾನದ ಪ್ರಕಾರ ಆರೋಗ್ಯ ಎನ್ನುವುದು ರಾಜ್ಯ ಹೊಣೆಗಾರಿಕೆ. ಹೀಗಾಗಿಯೇ ಕೇಂದ್ರ ಸರ್ಕಾರವು ಬೃಹತ್ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿ ರಾಜ್ಯಗಳಿಗೆ ಕೊಟ್ಟಿತು.

ಸ್ಥಳೀಯ ಮಟ್ಟದಲ್ಲಿ ಕರ್ಫ್ಯೂ, ಲಾಕ್​ಡೌನ್, ಕಂಟೇನ್​ಮೆಂಟ್ ವಲಯದ ಅಧಿಕಾರ ರಾಜ್ಯ ಸರ್ಕಾರಗಳಿಗೆ ಕೊಡಲಾಯಿತು. ಜನವರಿಯಿಂದ ಏಪ್ರಿಲ್​ವರೆಗೆ ಲಸಿಕೆ ಅಭಿಯಾನ ಕೇಂದ್ರದ ಉಸ್ತುವಾರಿಯಲ್ಲಿಯೇ ನಡೆಯಿತು. ಜನರು ಉತ್ಸಾಹದಿಂದ ಲಸಿಕೆ ಹಾಕಿಸಿಕೊಳ್ಳುತ್ತಿದ್ದು ಕೆಲ ರಾಜ್ಯ ಸರ್ಕಾರಗಳು ಲಸಿಕೆ ಹೊಣೆಯನ್ನು ನಮಗೂ ಕೊಡಿ ಎಂದು ಕೇಳಿದವು. ಲಸಿಕೆಗಾಗಿ ವಯೋಮಿತಿ ಏಕೆ ಎಂಬೆಲ್ಲಾ ಪ್ರಶ್ನೆಗಳು ಬಂದವು.

ಮಾಧ್ಯಮದ ಒಂದು ವರ್ಗ ಈ ವಿಚಾರದಲ್ಲಿ ಒಂದು ಆಂದೋಲನವೇ ನಡೆಯಿತು. ಈ ವಿಚಾರದಲ್ಲಿ ಒಂದು ಸಹಮತ ಬಂದಿತು.   ರಾಜ್ಯ ಸರ್ಕಾರಗಳೂ ಪ್ರಯತ್ನ ಮಾಡುತ್ತವೆ ಎಂದರೆ ನಾವು ಅವಕಾಶ ಕೊಡಬೇಕಿತ್ತು. ಹೀಗಾಗಿ ನಾವು ಅಭಿಯಾನದಲ್ಲಿ ಒಂದು ಬದಲಾವಣೆ ತಂದೆವು. ಹೊಣೆಗಾರಿಕೆಯನ್ನು ಅವರಿಗೂ ಕೊಡೋಣ ಅಂತ ನಿರ್ಧರಿಸಿದೆವು. ಅವರೂ ಪ್ರಯತ್ನಿಸಿದರು. ಅವರಿಗೆ ವಿಶ್ವದ ಪರಿಸ್ಥಿತಿ ಏನು ಅಂತ ಆಗ ಅರ್ಥವಾಯಿತು.

ಪ್ರಯತ್ನಗಳ ನಂತರ ಕೆಲ ರಾಜ್ಯಗಳು ಹಿಂದಿನ ವ್ಯವಸ್ಥೆಗಳೇ ಸರಿಯಿತ್ತು ಎಂಬ ಅಭಿಪ್ರಾಯಕ್ಕೆ ಬಂದವು. ಲಸಿಕೆಗಳ ವಿಚಾರದಲ್ಲಿ ರಾಜ್ಯಗಳು ತಮ್ಮ ಅಭಿಪ್ರಾಯವನ್ನು ಬದಲಿಸಿಕೊಂಡವು. ನಮಗೂ ದೇಶದ ಜನರ ಹಿತವೇ ಮುಖ್ಯ. ಹೀಗಾಗಿಯೇ ಮತ್ತೆ ಜನವರಿಯಲ್ಲಿ ಇದ್ದ ವ್ಯವಸ್ಥೆಯನ್ನೇ ತಂದೆವು.

ರಾಜ್ಯಗಳಲ್ಲಿ ಲಸಿಕೆಗೆ ಸಂಬಂಧಿಸಿದಂತೆ ಇದ್ದ ಶೇ 25ರಷ್ಟು ಹೊಣೆಗಾರಿಕೆಯನ್ನೂ ಭಾರತ ಸರ್ಕಾರವೇ ತೆಗೆದುಕೊಳ್ಳಲಿದೆ. ಮುಂದಿನ ಎರಡು ವಾರಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೊಸ ಮಾರ್ಗದರ್ಶಿ ಸೂತ್ರಗಳ ಅನ್ವಯ ಲಸಿಕೆ ಅಭಿಯಾನಕ್ಕೆ ಹೊಸ ವೇಗ ಕೊಡುತ್ತದೆ.

ಗೆಲುವು ಬೇಕಾದವರು ಸುಲಭವಾಗಿ ಸೋಲೊಪ್ಪುವುದಿಲ್ಲ. ಕಠಿಣ ಪರಿಶ್ರಮದಿಂದ ಹೋರಾಡುತ್ತಾರೆ. ಪರಿಸ್ಥಿತಿ ಬದಲಾದಂತೆ ತಮ್ಮ ತಂತ್ರಗಳನ್ನೂ ಬದಲಿಸಿಕೊಳ್ಳುತ್ತಾರೆ. ಲಸಿಕೆ ವಿಚಾರದಲ್ಲಿ ಭಾರತವು ವಿಶ್ವದ ಹಲವು ದೇಶಗಳಿಗಿಂತ ಮುಂದಿದೆ. ಭಾರತದ ಕೊವಿನ್ ಮಾದರಿಯ ಪ್ಲಾಟ್​ಫಾರಂ ರೂಪಿಸಲು ಹಲವು ದೇಶಗಳು ಮುಂದೆ ಬಂದಿವೆ. ನಮಗೆ ಪ್ರತಿ ಡೋಸ್​ನ ಮಹತ್ವ ಅರ್ಥವಾಗಿದೆ. ಒಂದು ಡೋಸ್ ಲಸಿಕೆ ಒಂದು ಜೀವ ಉಳಿಸಬಹುದು. ರಾಜಕಾರಣದ ಮಾತುಗಳು ಈ ವೇಳೆ ಬೇಡ. ಅದು ಯಾರಿಗೂ ಇಷ್ಟವಾಗುವುದಿಲ್ಲ. ಲಸಿಕೆ ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಲಭ್ಯವಾಗಲಿದೆ. ಇದನ್ನು ಜನರಿಗೆ ತಲುಪಿಸುವುದು ಎಲ್ಲ ಜನನಾಯಕರ ಕರ್ತವ್ಯವಾಗಿದೆ. ಮಹಾಪಿಡುಗಿನ ಈ ಸಮಯದಲ್ಲಿ ಬಡವರ ಎಲ್ಲ ಅಗತ್ಯಗಳನ್ನು ಗಮನಿಸಿ, ನಾವು ಅವರ ಜೊತೆಗೆ ಇರುತ್ತೇವೆ.

ನವೆಂಬರ್​ವರೆಗೂ ಬಡವರಿಗೆ ಉಚಿತ ಆಹಾರ ಧಾನ್ಯ ಕೊಡುತ್ತೇವೆ. ದೇಶದ 80 ಕೋಟಿ ಜನರಿಗೆ ಉಚಿತ ಧಾನ್ಯ ಸಿಗಲಿದೆ. ಭಾರತದಲ್ಲಿ ಲಸಿಕೆ ಅಭಿಯಾನ ಆರಂಭವಾದಾಗ ಬಡವರಿಗೆ ಸಿಗುತ್ತೋ ಇಲ್ವೋ ಎಂಬ ಆತಂಕವಿತ್ತು. ಆದರೆ ಭಾರತಕ್ಕೆ ಲಸಿಕೆ ಬಂದಾಗ ಇಂಥ ಚರ್ಚೆಗಳೂ ಹೆಚ್ಚಾದವು. ಲಸಿಕೆಯ ಆಧರಿಸಿ ಅನುಮಾನ ಬಿತ್ತುತ್ತಿರುವವರನ್ನೂ ದೇಶದ ಜನರು ಗಮನಿಸುತ್ತಿದ್ದಾರೆ. ಈ ಪಿಡುಗಿನ ಸಂದರ್ಭದಲ್ಲಿ ನಾವೆಲ್ಲರೂ ಜೊತೆಯಾಗಿರಬೇಕು ಎಂದು ಅವರು ತಿಳಿಸಿದ್ದರು.

ಇದನ್ನೂ ಓದಿ: ನಾವು ಮನೆಯಲ್ಲಿ ಕುಳಿತು ಫೇಸ್​ಬುಕ್ ಪೆರಟುತ್ತಿದ್ದರೆ ಫೇಸ್​ಬುಕ್ ಸೃಷ್ಟಿಕರ್ತ ಮಾರ್ಕ್ ಜುಕರ್​ಬರ್ಗ್ ಬಯಲಲ್ಲಿ ಈಟಿ ಎಸೆಯುತ್ತಿದ್ದಾರೆ!

ಜುಲೈ 1ರಿಂದ ಪುನಃ ಆನ್​ಲೈನ್ ತರಗತಿ ಪ್ರಾರಂಭ: ಮಕ್ಕಳ ಬಳಿ ಸ್ಮಾರ್ಟ್​ಫೋನ್​ನಂತಹ ಅಗತ್ಯ ಸೌಲಭ್ಯ ಇದೆಯೇ ಎಂದು ಪ್ರಶ್ನಿಸಿದ ಹೈಕೋರ್ಟ್

(Here is the new Covid Vaccine price list released by Central Govt to private hospitals)

ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!