ನಾವು ಮನೆಯಲ್ಲಿ ಕುಳಿತು ಫೇಸ್​ಬುಕ್ ಪೆರಟುತ್ತಿದ್ದರೆ ಫೇಸ್​ಬುಕ್ ಸೃಷ್ಟಿಕರ್ತ ಮಾರ್ಕ್ ಜುಕರ್​ಬರ್ಗ್ ಬಯಲಲ್ಲಿ ಈಟಿ ಎಸೆಯುತ್ತಿದ್ದಾರೆ!

Facebook CEO Mark Zuckerberg: ಮನೆಯಂಗಳದಲ್ಲಿ ಬಿಡಿಸಿದ ರಂಗೋಲಿ ಚಿತ್ರ, ಅಂಗಳದಂಚಿಗೆ ಅರಳಿದ ದಾಸವಾಳದ ಹೂವಿನ ಚಿತ್ರಗಳನ್ನು ತೆಗೆದು ಪೋಸ್ಟ್ ಮಾಡಿದಂತೆ ಫೇಸ್​ಬುಕ್ ಸಿಇಒ ಮಾರ್ಕ್ ಝುಕರ್​ಬರ್ಗ್ ಸಹ ಅವರ ಸ್ಕಿಲ್​ಗಳ ಪ್ರದರ್ಶನ ಮಾಡುತ್ತಿದ್ದಾರೆ. ಏನಪ್ಪಾ ಮಾರ್ಕ್ ಝುಕರ್​ಬರ್ಗ್ ಸ್ಕಿಲ್ ಅಂದಿರಾ? ಇಲ್ಲಿದೆ ನೋಡಿ

ನಾವು ಮನೆಯಲ್ಲಿ ಕುಳಿತು ಫೇಸ್​ಬುಕ್ ಪೆರಟುತ್ತಿದ್ದರೆ ಫೇಸ್​ಬುಕ್ ಸೃಷ್ಟಿಕರ್ತ ಮಾರ್ಕ್ ಜುಕರ್​ಬರ್ಗ್ ಬಯಲಲ್ಲಿ ಈಟಿ ಎಸೆಯುತ್ತಿದ್ದಾರೆ!
ಫೇಸ್​ಬುಕ್ ಸಿಇಒ ಮಾರ್ಕ್ ಝುಕರ್​ಬರ್ಗ್
Follow us
TV9 Web
| Updated By: Digi Tech Desk

Updated on:Jun 08, 2021 | 9:23 PM

ಫೇಸ್​ಬುಕ್ ಸಿಇಒ ಮಾರ್ಕ್ ಝುಕರ್​ಬರ್ಗ್ ಫೇಸ್​ಬುಕ್​ನಲ್ಲಿ ಸಖತ್ತಾಗೇ ಆ್ಯಕ್ಟಿವ್ ಆಗಿದ್ದಾರೆ. ಅವರೂ ನಮ್ಮಂತೆ ನಿಮ್ಮಂತೆಯೇ ಮಾರ್ಕ್​ಗೂ ತಮ್ಮ ಕೌಶಲಗಳ ಫೊಟೊ ತೆಗೆದು ಫೇಸ್​ಬುಕ್​ನಲ್ಲಿ ಹಂಚಿಕೊಳ್ಳುವುದು ಅಂದರೆ ಇಷ್ಟವಂತೆ. ಅದಕ್ಕೆ ಮಾರ್ಕ್ ಝುಕರ್​ಬರ್ಗ್ ಹಾಕುವ ಪೋಸ್ಟ್​ಗಳೇ ಸಾಕ್ಷಿ. ಮನೆಯಂಗಳದಲ್ಲಿ ಬಿಡಿಸಿದ ರಂಗೋಲಿ ಚಿತ್ರ, ಅಂಗಳದಂಚಿಗೆ ಅರಳಿದ ದಾಸವಾಳದ ಹೂವಿನ ಚಿತ್ರಗಳನ್ನು ತೆಗೆದು ಪೋಸ್ಟ್ ಮಾಡಿದಂತೆ ಫೇಸ್​ಬುಕ್ ಸಿಇಒ ಮಾರ್ಕ್ ಝುಕರ್​ಬರ್ಗ್ ಸಹ ಅವರ ಸ್ಕಿಲ್​ಗಳ ಪ್ರದರ್ಶನ ಮಾಡುತ್ತಿದ್ದಾರೆ. ಏನಪ್ಪಾ ಮಾರ್ಕ್ ಝುಕರ್​ಬರ್ಗ್ ಸ್ಕಿಲ್ ಅಂದಿರಾ? ಇಲ್ಲಿದೆ ನೋಡಿ

ಅದೊಂದು ಹಸಿರು ಬಯಲು. ಕೈಯಲ್ಲಿ ಈಟಿ ಹಿಡಿದು ಬಂದ ಮಾರ್ಕ್ ಝುಕರ್​ಬರ್ಗ್ ದೂರದಲ್ಲಿ ನಿಲ್ಲಿಸಿರುವ ಗುರಿಗೆ ಈಟಿ ಎಸೆಯುತ್ತಾರೆ. ನೋಡನೋಡುತ್ತಿದ್ದಂತೆ ಕ್ಷಣಾರ್ಧದಲ್ಲಿ ಮಾರ್ಕ್​ ಕೈಯಲ್ಲಿದ್ದ ಈಟಿ ಗುರಿಯತ್ತ ಛಕ್ಕನೆ ಸಾಗಿ ಫಟಕ್ ಅಂತ ನಾಟುತ್ತದೆ. ಫೇಸ್​ಬುಕ್​ನಲ್ಲಿ ನಮ್ಮ ನಿಮ್ಮಂತೆಯೇ ದಿನದ ಆಗುಹೋಗುಗಳ, ಹವ್ಯಾಸಗಳ ವಿಡಿಯೋ, ಫೋಟೊಗಳನ್ನು ಫೇಸ್​ಬುಕ್​ನಲ್ಲಿ ಹಂಚಿಕೊಂಡು ಖುಷಿಪಡುವ ಚಾಲಿ ಅವರಿಗೂ ಇದೆ.

ಫೇಸ್​ಬುಕ್ ಸಿಇಒ ಮಾರ್ಕ್ ಝುಕರ್​ಬರ್ಗ್ ಪೋಸ್ಟ್​ಗೆ ಕೆಲವರು ಹಾಕಿಟುವ ಕಮೆಂಟ್​ಗಳು ಅಷ್ಟೇ ಸ್ವಾರಸ್ಯಕರವೂ ಆಗಿದೆ. ಕೆಲವಂತೂ ವ್ಯಂಗ್ಯಭರಿತವಾಗಿದೆ. ‘ನಾವು ಲಾಕ್​ಡೌನ್​ನಲ್ಲಿ ಮನೆಯಲ್ಲಿ ಕುಳಿತು ಫೇಸ್​ಬುಕ್ ಪೆರಟುತ್ತಿದ್ದರೆ ಫೇಸ್​ಬುಕ್ ಸೃಷ್ಟಿಕರ್ತ ಮಾತ್ರ ಬಯಲಲ್ಲಿ ಆರಾಮಾಗಿ ಆಡುತ್ತಿದ್ದಾನೆ ಎಂದು ಓರ್ವ ನೆಟ್ಟಿಗ ಪ್ರತಿಕ್ರಿಯಿದ್ದಾರೆ. ಈ ಪ್ರತಿಕ್ರಿಯೆ ಪ್ರಸ್ತುತ ಸನ್ನಿವೇಶದಲ್ಲಿ ಮಾರ್ಮಿಕ ಎನಿಸುವಂತಿದೆ.

ಇದನ್ನೂ ಓದಿ: ಲಸಿಕೆ ಪಡೆದ ಆ ಯುವಕನ ರೀತಿಯೇ ವೈರಲ್​ ಆಯ್ತು ಪ್ರಶಾಂತ್​ ನೀಲ್ ಫೋಟೋ​; ಆದರೆ ಕಾರಣ ಬೇರೆ

Fact Check: ನೀತಾ ಅಂಬಾನಿಗೆ ನಮಸ್ಕಾರ ಮಾಡುತ್ತಿರುವ ನರೇಂದ್ರ ಮೋದಿ, ಸಾಮಾಜಿಕ ಮಾಧ್ಯಮಗಳಲ್ಲಿ;ಫೇಕ್ ಫೋಟೊ ವೈರಲ್ (Facebook CEO Mark Zuckerberg have particular skills Javelin Throw video viral)

Published On - 9:00 pm, Tue, 8 June 21

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ