ಕೊವಿಡ್ ಕೇರ್ ಸೆಂಟರ್ನಲ್ಲಿ ಹಸೆಮಣೆ ಏರಿದ ನವಜೋಡಿ; ಮದುವೆಗೆ ಕೂಡಿಟ್ಟ ಹಣವೂ ದಾನ
ಹಲವಾರು ಮದುವೆ ಸಮಾರಂಭ, ರಜಾ ಪ್ರವಾಸ, ಸಾಮಾಜಿಕ, ಸಾರ್ವಜನಿಕ ಕಾರ್ಯಕ್ರಮಗಳು ನಡೆಸಲಾಗುತ್ತಿಲ್ಲ. ಆದರೆ, ಲಾಕ್ಡೌನ್, ಸೀಮಿತ ಅತಿಥಿಗಳ ನಿರ್ಬಂಧದ ಮಧ್ಯೆಯೂ ಯುವಜೋಡಿಗಳು ವಿಭಿನ್ನ ರೀತಿಯಲ್ಲಿ ಮದುವೆ ಆಗುತ್ತಿದ್ದಾರೆ.
ಕೊರೊನಾ ಸೋಂಕು ನಮ್ಮೆಲ್ಲಾ ಯೋಜನೆಗಳನ್ನು ತಲೆಕೆಳಗಾಗಿಸಿ ಬಿಟ್ಟಿದೆ. ಮೊದಲನೇ ಅಲೆಯ ಅಂತ್ಯದ ಬಳಿಕ ಕೊವಿಡ್ ಸಾಂಕ್ರಾಮಿಕದ ಸಮಸ್ಯೆ ಭಾರತದಲ್ಲಿ ಇನ್ನು ಇಲ್ಲ ಎಂದೇ ಅಂದುಕೊಳ್ಳಲಾಗಿತ್ತು. ಆದರೆ, ಈ ವರ್ಷದ ಆರಂಭದಲ್ಲಿ ಮತ್ತೆ ಎರಡನೇ ಅಲೆ, ಲಾಕ್ಡೌನ್ ಪ್ರಕ್ರಿಯೆ ಆರಂಭವಾಯಿತು. ಮೊದಲ ಅಲೆಯಲ್ಲಿ ಅನುಭವಿಸಿದ ಕೊವಿಡ್-19 ಪ್ರಕರಣಗಳು, ಸಾವು- ನೋವಿಗಿಂತ ಈ ಬಾರಿ ಅಧಿಕ ಸಮಸ್ಯೆ ಎದುರಿಸುವಂತಾಯಿತು. ಈ ಎಲ್ಲಾ ಕಾರಣಗಳಿಂದಾಗಿ ಜನರ ಯೋಜನೆಗಳು ಪ್ಲಾನ್ ಪ್ರಕಾರ ನಡೆಸಲಾಗುತ್ತಿಲ್ಲ.
ಹಲವಾರು ಮದುವೆ ಸಮಾರಂಭ, ರಜಾ ಪ್ರವಾಸ, ಸಾಮಾಜಿಕ, ಸಾರ್ವಜನಿಕ ಕಾರ್ಯಕ್ರಮಗಳು ನಡೆಸಲಾಗುತ್ತಿಲ್ಲ. ಆದರೆ, ಲಾಕ್ಡೌನ್, ಸೀಮಿತ ಅತಿಥಿಗಳ ನಿರ್ಬಂಧದ ಮಧ್ಯೆಯೂ ಯುವಜೋಡಿಗಳು ವಿಭಿನ್ನ ರೀತಿಯಲ್ಲಿ ಮದುವೆ ಆಗುತ್ತಿದ್ದಾರೆ. ವಿಶಿಷ್ಠವಾಗಿ ಹಸೆಮಣೆ ಏರುತ್ತಿದ್ದಾರೆ.
ಈಗ ಅಂತಹದ್ದೇ ಒಂದು ಘಟನೆ ನಡೆದಿದೆ. ಮಹಾರಾಷ್ಟ್ರ, ಅಹಮದ್ನಗರ್ನ ಯುವಜೋಡಿ ಕೊವಿಡ್ ಕೇರ್ ಸೆಂಟರ್ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇತ್ತೀಚೆಗಷ್ಟೇ ವಿವಾಹ ನಡೆಸುವ ಬಗ್ಗೆ ಅಹಮದ್ನಗರ್ ಜಿಲ್ಲೆಯಲ್ಲಿ ಅವಕಾಶ ನೀಡಲಾಗಿತ್ತು. ಆ ಬಳಿಕ ಇದೀಗ, ಯುವಜೋಡಿ ಕೊವಿಡ್ ಸೆಂಟರ್ನಲ್ಲಿ ಮದುವೆಯಾಗಿದ್ದಾರೆ. ಈ ವಿಶೇಷ ಸ್ಥಳವನ್ನು ಮದುವೆಯಾಗಲು ಬಳಸುವುದರ ಜೊತೆಗೆ, ಮತ್ತೊಂದು ಹೆಮ್ಮೆ ಪಡುವಂಥ ಕೆಲಸವನ್ನೂ ಅವರು ಮಾಡಿದ್ದಾರೆ. ಮದುವೆಗಾಗಿ ಅವರು ಕೂಡಿಟ್ಟಿದ್ದ ಹಣವನ್ನು ಕೊವಿಡ್ ಕೇರ್ ಸೆಂಟರ್ಗೆ ನೀಡಿದ್ದಾರೆ.
ಎಂಎಲ್ಎ ನಿಲೇಶ್ ಲಂಕೆ ಶರದ್ ಚಂದ್ರಜೀ ಪವಾರ್ ಆರೋಗ್ಯ ಮಂದಿರ್ ಕೊವಿಡ್ ಸೆಂಟರ್ನಲ್ಲಿ ಯುವಜೋಡಿ ಹಸೆಮಣೆ ಏರಿದ್ದಾರೆ. ಅನಿಕೇತ್ ವ್ಯವಹಾರೆ ಮತ್ತು ಆರತಿ ಶಿಂಧೆ ಹಾಗೂ ರಾಜಶ್ರೀ ಕಾಳೆ ಮತ್ತು ಜನಾರ್ದನ್ ಕಡಮ್ ತಮ್ಮ ಹೊಸ ಬದುಕನ್ನು ಈ ರೀತಿ ಮದುವೆ ಆಯೋಜಿಸುವ ಮೂಲಕ ಆರಂಭಿಸಲು ಉದ್ದೇಶಿಸಿದ್ದರು. ಆ ಮೂಲಕ, ಕೊರೊನಾದಿಂದ ಕೇರ್ ಸೆಂಟರ್ನಲ್ಲಿ ಇರುವ ಸ್ಥಳೀಯರಿಗೆ ಶುಭಸುದ್ದಿ ನೀಡಿದ್ದರು.
ಅಷ್ಟೇ ಅಲ್ಲದೆ, ಈ ಎರಡೂ ಜೋಡಿಗಳು ಫೇಸ್ ಮಾಸ್ಕ್, ಪಿಪಿಇ ಕಿಟ್ ಹಾಗೂ ಇತರ ಅಗತ್ಯ ವಸ್ತುಗಳನ್ನು ಕೊವಿಡ್ ಸೆಂಟರ್ಗೆ ನೀಡಿದ್ದಾರೆ. 37 ಸಾವಿರ ರೂಪಾಯಿಯ ಹಣಕಾಸು ಸಹಾಯವನ್ನು ಕೂಡ ಕೇರ್ ಸೆಂಟರ್ಗೆ ಮಾಡಿದ್ದಾರೆ. ಕೊರೊನಾ ಮಹಾಮಾರಿಯಿಂದ ಜಗತ್ತೇ ತತ್ತರಿಸಿ ಹೋಗಿದೆ. ನಮ್ಮ ಸ್ಥಳೀಯ ಜನರು ಕೂಡ ಕೊವಿಡ್ಗೆ ತುತ್ತಾಗಿ ಕೇರ್ ಸೆಂಟರ್ನಲ್ಲಿ ಇದ್ದಾರೆ. ಈ ಕಷ್ಟದ ಸಮಯದಲ್ಲಿ ಅವರನ್ನು ಚಿಯರ್ ಅಪ್ ಮಾಡಲು ನಾವು ಈ ನಿರ್ಧಾರ ಕೈಗೊಂಡೆವು ಎಂದು ದಂಪತಿ ತಿಳಿಸಿದ್ದಾರೆ.
ಕೊವಿಡ್ ಕೇರ್ ಸೆಂಟರ್ನಲ್ಲಿ ವಿವಾಹ ಸಮಾರಂಭವನ್ನು ಕೊವಿಡ್-19 ಮಾರ್ಗಸೂಚಿಗಳ ಅನುಸಾರ ನಡೆಸಲಾಗಿದೆ. ನವಜೋಡಿಗಳ ಜೊತೆಗೆ ಕೆಲವೇ ಕುಟುಂಬದ ಸದಸ್ಯರು ಭಾಗಿಯಾಗಿದ್ದಾರೆ. ಶಾಸಕ ನಿಲೇಶ್ ಲಂಕೆ ಕೂಡ ಮದುವೆ ಸಮಾರಂಭದಲ್ಲಿ ಭಾಗವಹಿಸಿ, ನವಜೋಡಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Viral Video: ಮದುವೆ ನಡೆಯುತ್ತಿರುವಾಗ ಏಕಾಏಕಿ ಎದ್ದು ವಿಚಿತ್ರವಾಗಿ ಡ್ಯಾನ್ಸ್ ಮಾಡಿದ ಮದುಮಗ; ವರನ ಕುಣಿತ ನೋಡಿ ವಧು ಕಂಗಾಲು
Shilpa Shetty Birthday: ವಿವಾಹಿತ ಪುರುಷ ರಾಜ್ ಕುಂದ್ರಾ ಜೊತೆ ಶಿಲ್ಪಾ ಶೆಟ್ಟಿ ಮದುವೆ ಆಗಲು ಒಪ್ಪಿದ್ದೇಕೆ?
Published On - 5:35 pm, Tue, 8 June 21