Viral Video: ಮದುವೆ ನಡೆಯುತ್ತಿರುವಾಗ ಏಕಾಏಕಿ ಎದ್ದು ವಿಚಿತ್ರವಾಗಿ ಡ್ಯಾನ್ಸ್ ಮಾಡಿದ ಮದುಮಗ; ವರನ ಕುಣಿತ ನೋಡಿ ವಧು ಕಂಗಾಲು
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋವನ್ನು ನೋಡಿ ನೆಟ್ಟಿಗರಂತೂ ಸಿಕ್ಕಾಪಟೆ ಖುಷಿಪಟ್ಟಿದ್ದಾರೆ. ಈ ವರ ಯಾವುದೇ ಪೂರ್ವಸಿದ್ಧತೆಯಿಲ್ಲದೆ, ಚಿತ್ರ, ವಿಚಿತ್ರವಾಗಿ ಕುಣಿದಿದ್ದು ನಿಜಕ್ಕೂ ನಗುತರಿಸುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.
ಇತ್ತೀಚೆಗೆ ಮದುವೆಗಳಿಗೆ ಸಂಬಂಧಪಟ್ಟ ತಮಾಷೆ, ನಾಟಕೀಯ, ಗಂಭೀರ ವಿಚಾರಗಳು ಬೆಳಕಿಗೆ ಬರುವ ಪ್ರಮಾಣ ಜಾಸ್ತಿಯಾಗಿದೆ. ಒಂದಲ್ಲ ಒಂದು ವಿಡಿಯೋಗಳು ವೈರಲ್ ಆಗುತ್ತಲೇ ಇವೆ. ಹಾಗೇ ಈಗಲೂ ಒಂದು ಸಿಕ್ಕಾಪಟೆ ಫನ್ನಿ ವಿಡಿಯೋ ವೈರಲ್ ಆಗಿದ್ದು, ಅದನ್ನು ನೋಡಿ ನೆಟ್ಟಿಗರು, ತಮಗೆ ನಗು ತಡೆಯಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಅಲ್ಲೊಂದು ಮದುವೆ ನಡೆಯುತ್ತಿದೆ. ತುಂಬ ಜನ ಸೇರಿದ್ದಾರೆ. ವಧು-ವರರು ಅಕ್ಕಪಕ್ಕ ಕುಳಿತು ಮದುವೆ ಕಾರ್ಯಕ್ರಮದಲ್ಲಿ ತೊಡಗಿದ್ದಾರೆ. ಅದೇನಾಯಿತೋ ಗೊತ್ತಿಲ್ಲ..ವರ ಕುಳಿತಲ್ಲೇ ಮೈ ಅಲಗಾಡಿಸುತ್ತ ಡ್ಯಾನ್ಸ್ ಮಾಡಲು ಶುರು ಮಾಡಿದೆ. ನೋಡನೋಡುತ್ತಿದ್ದಂತೆಯೇ ಎದ್ದು ನಿಂತು ವಿಚಿತ್ರ ರೀತಿಯಲ್ಲಿ, ಭರ್ಜರಿ ನೃತ್ಯವನ್ನೇ ಮಾಡಿದ. ವಧು ಹಾಗೂ ನೆರೆದಿದ್ದ ಅತಿಥಿಗಳೆಲ್ಲ ಕಂಗಾಲಾಗಿ ವರನನ್ನು ನೋಡಿದ್ದಾರೆ. ವಧು ಹಾಗೂ ಆಕೆಯ ಕುಟುಂಬದವರಂತೂ ವರನ ಡ್ಯಾನ್ಸ್ ನೋಡಿ ಸಿಕ್ಕಾಪಟೆ ಶಾಕ್ ಆಗಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋವನ್ನು ನೋಡಿ ನೆಟ್ಟಿಗರಂತೂ ಸಿಕ್ಕಾಪಟೆ ಖುಷಿಪಟ್ಟಿದ್ದಾರೆ. ಈ ವರ ಯಾವುದೇ ಪೂರ್ವಸಿದ್ಧತೆಯಿಲ್ಲದೆ, ಚಿತ್ರ, ವಿಚಿತ್ರವಾಗಿ ಕುಣಿದಿದ್ದು ನಿಜಕ್ಕೂ ನಗುತರಿಸುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಒಮ್ಮೆಲೇ ಹೀಗೆ ಕುಣಿಯಲು ಕಾರಣವೇನಿರಬಹುದು ಎಂದೂ ಹಲವರು ಪ್ರಶ್ನಿಸಿದ್ದಾರೆ. ಇತ್ತೀಚೆಗೆ ವರನೊಬ್ಬ ತನ್ನ ಮದುವೆ ದಿನ ಒಂದಷ್ಟು ಮಹಿಳೆಯರೊಂದಿಗೆ ನೃತ್ಯ ಮಾಡಿದ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಭರ್ಜರಿ ವೈರಲ್ ಆಗಿತ್ತು. ಆತ ಭೋಜ್ಪುರಿ ಹಾಡಿಗೆ ನೃತ್ಯ ಮಾಡಿದ್ದ. ಈಗ ಈ ವಿಡಿಯೋ ಸಹ ತುಂಬ ವೈರಲ್ ಆಗುತ್ತಿದೆ.
Groom Suddenly Starts Dancing in Middle of Wedding video viral
Published On - 2:44 pm, Tue, 8 June 21