ಸ್ವತಂತ್ರವಾಗಿ ಸ್ಪರ್ಧಿಸಿ ಸಂಸದೆಯಾಗಿದ್ದ ನವನೀತ್​ ಕೌರ್​ಗೆ ಬಾಂಬೆ ಹೈಕೋರ್ಟ್​​ನಿಂದ 2 ಲಕ್ಷ ರೂ.ದಂಡ..

ಇದೇ ವರ್ಷ ಮಾರ್ಚ್​ನಲ್ಲಿ ಕೌರ್​ ಹಾಗೂ ಶಿವಸೇನೆ ಸಂಸದ ಅರವಿಂದ್​ ಸಾವಂತ್​ ನಡುವೆ ಸಂಘರ್ಷ ಏರ್ಪಟ್ಟಿತ್ತು. ಅರವಿಂದ್ ಸಾವಂತ್​ ಅವರು ದೆಹಲಿಯ ಲೋಕಸಭೆ ಮೊಗಸಾಲೆಯಲ್ಲಿಯೇ ನಿಂತು ನನಗೆ ಬೆದರಿಕೆ ಹಾಕಿದ್ದಾರೆ ಎಂದು ಕೌರ್​ ಆರೋಪಿಸಿದ್ದರು.

ಸ್ವತಂತ್ರವಾಗಿ ಸ್ಪರ್ಧಿಸಿ ಸಂಸದೆಯಾಗಿದ್ದ ನವನೀತ್​ ಕೌರ್​ಗೆ ಬಾಂಬೆ ಹೈಕೋರ್ಟ್​​ನಿಂದ 2 ಲಕ್ಷ ರೂ.ದಂಡ..
ನವನೀತ್​ ಕೌರ್​ ರಾಣಾ
Follow us
TV9 Web
| Updated By: Lakshmi Hegde

Updated on:Jun 08, 2021 | 4:32 PM

ಮುಂಬೈ: ಮಹಾರಾಷ್ಟ್ರದ ಸಂಸದೆ ನವನೀತ್​ ಕೌರ್​​ ರಾಣಾರಿಗೆ ಬಾಂಬೆ ಹೈಕೋರ್ಟ್​ 2 ಲಕ್ಷ ರೂಪಾಯಿ ದಂಡ ವಿಧಿಸಿದೆ. ನವನೀತ್​ ಕೌರ್​ ಅವರು ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಈ ದಂಡ ವಿಧಿಸಲಾಗಿದೆ. ನವನೀತ್​ ಕೌರಾ ಅಮರಾವತಿಯ ಸಂಸದೆಯಾಗಿದ್ದಾರೆ. ಸ್ವತಂತ್ರವಾಗಿ ಸ್ಪರ್ಧಿಸಿ ಗೆದ್ದಿದ್ದರು. ಇದೇ ಮೊದಲಬಾರಿಗೆ ಸಂಸದೆಯಾಗಿದ್ದ ಅವರೀಗ ತಮ್ಮ ಸ್ಥಾನ ಕಳೆದುಕೊಳ್ಳುವ ಭಯದಲ್ಲಿದ್ದಾರೆ. ಆದರೆ ಕೋರ್ಟ್​ ಸದ್ಯ 2 ಲಕ್ಷ ರೂಪಾಯಿ ದಂಡವನ್ನು ಮಾತ್ರ ವಿಧಿಸಿದ್ದು, ನವನೀತ್​ ಹುದ್ದೆಯ ಬಗ್ಗೆ ಮೌನ ವಹಿಸಿದೆ.

ವಿದರ್ಭದ ಅತಿದೊಡ್ಡ ಪ್ರದೇಶವಾದ ಅಮರಾವತಿಯ ಸಂಸದೆಯಾಗಿರುವ ಕೌರ್​ಗೆ ಈಗ 35 ವರ್ಷ. 7 ಭಾಷೆಗಳನ್ನು ಮಾತನಾಡುತ್ತಾರೆ. ಮಹಾರಾಷ್ಟ್ರದ ಎಂಟು ಮಹಿಳಾ ಜನಪ್ರತಿನಿಧಿಗಳಲ್ಲಿ ಇವರೂ ಒಬ್ಬರು. ಇದೇ ವರ್ಷ ಮಾರ್ಚ್​ನಲ್ಲಿ ಕೌರ್​ ಹಾಗೂ ಶಿವಸೇನೆ ಸಂಸದ ಅರವಿಂದ್​ ಸಾವಂತ್​ ನಡುವೆ ಸಂಘರ್ಷ ಏರ್ಪಟ್ಟಿತ್ತು. ಅರವಿಂದ್ ಸಾವಂತ್​ ಅವರು ದೆಹಲಿಯ ಲೋಕಸಭೆ ಮೊಗಸಾಲೆಯಲ್ಲಿಯೇ ನಿಂತು ನನಗೆ ಬೆದರಿಕೆ ಹಾಕಿದ್ದಾರೆ. ನಾನು ಮಹಾರಾಷ್ಟ್ರ ಸರ್ಕಾರದ ವಿರುದ್ಧ ಧ್ವನಿ ಎತ್ತಿದರೆ ಜೈಲಿಗೆ ಕಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ ಎಂದು ನವನೀತ್ ಕೌರ್​ ಆರೋಪಿಸಿದ್ದರು. ಈ ಬಗ್ಗೆ ಲೋಕಸಭೆ ಸ್ಪೀಕರ್ ಓಂಬಿರ್ಲಾರಿಗೂ ದೂರು ನೀಡಿದ್ದರು.

ಮಹಾರಾಷ್ಟ್ರದ ಪೊಲೀಸ್​ ಅಧಿಕಾರಿಯಾಗಿದ್ದ ಸಚಿನ್​ ವಾಝೆ ಅಮಾನತಿನ ಬಗ್ಗೆ ಕೌರ್​ ಲೋಕಸಭೆಯಲ್ಲಿ ಮಾತನಾಡಿದ್ದರು. ಮುಕೇಶ್ ಅಂಬಾನಿ ಮನೆ ಮುಂದೆ ಬಾಂಬ್​ ಸಿಕ್ಕ ಪ್ರಕರಣದಲ್ಲಿ ಈ ಅಧಿಕಾರಿಯನ್ನು ಅಮಾನತು ಮಾಡಿ, ಅರೆಸ್ಟ್ ಮಾಡಲಾಗಿತ್ತು. ಅದರ ಬಗ್ಗೆ ಮಾತನಾಡಿದ್ದ ಕೌರ್​, ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್​ ಬೀರ್​ ಸಿಂಗ್​ ಅವರ ಭ್ರಷ್ಟಾಚಾರ ಪ್ರಕರಣದಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ತಮ್ಮ ಅಧಿಕಾರದಿಂದ ಕೆಳಗೆ ಇಳಿಯಬೇಕು ಎಂದೂ ಆಗ್ರಹಿಸಿದ್ದರು.

ಇದನ್ನೂ ಓದಿ: ರಶ್ಮಿಕಾ ಬಗ್ಗೆ ಕೆಟ್ಟ ಕಮೆಂಟ್​ಗಳ ಸುರಿಮಳೆ; ರಕ್ಷಿತ್​ ಶೆಟ್ಟಿ ಪ್ರತಿಕ್ರಿಯೆಗೆ ಭೇಷ್​ ಎನ್ನಲೇಬೇಕು

Published On - 4:27 pm, Tue, 8 June 21