Telangana Lockdown: ತೆಲಂಗಾಣದಲ್ಲಿ ಇನ್ನೂ 10 ದಿನಗಳ ಅವಧಿಗೆ ಲಾಕ್ಡೌನ್ ವಿಸ್ತರಣೆ
ನಿರ್ಬಂಧ ಸಡಿಲಿಕೆ ಅವಧಿಯನ್ನು ಸಂಜೆ 5 ಗಂಟೆಯವರೆಗೆ ವಿಸ್ತರಿಸಲಾಗಿದೆ. ಜನರು ಮನೆಗಳಿಗೆ ಹಿಂದಿರುಗಲು ಅವಕಾಶ ನೀಡಲು ಮತ್ತೂ ಒಂದು ಗಂಟೆಯ ವಿನಾಯ್ತಿ ನೀಡಲಾಗಿದೆ. ಸಂಜೆ 6 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ರಾಜ್ಯದಲ್ಲಿ ಕಟ್ಟುನಿಟ್ಟಿನ ಲಾಕ್ಡೌನ್ ಇರುತ್ತದೆ.
ಹೈದರಾಬಾದ್: ತೆಲಂಗಾಣ ಸರ್ಕಾರವು ಜೂನ್ 10ರಿಂದ ಇನ್ನೂ 10 ದಿನಗಳ ಅವಧಿಗೆ ಲಾಕ್ಡೌನ್ ವಿಸ್ತರಿಸಲು ನಿರ್ಧರಿಸಿದೆ. ನಿರ್ಬಂಧ ಸಡಿಲಿಕೆ ಅವಧಿಯನ್ನು ಸಂಜೆ 5 ಗಂಟೆಯವರೆಗೆ ವಿಸ್ತರಿಸಲಾಗಿದೆ. ಜನರು ಮನೆಗಳಿಗೆ ಹಿಂದಿರುಗಲು ಅವಕಾಶ ನೀಡಲು ಮತ್ತೂ ಒಂದು ಗಂಟೆಯ ವಿನಾಯ್ತಿ ನೀಡಲಾಗಿದೆ. ಸಂಜೆ 6 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ರಾಜ್ಯದಲ್ಲಿ ಕಟ್ಟುನಿಟ್ಟಿನ ಲಾಕ್ಡೌನ್ ಇರುತ್ತದೆ.
ನಗರದಲ್ಲಿ ಸಂಜೆ 3 ಗಂಟೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ವಿಸ್ತೃತ ಮಾರ್ಗಸೂಚಿಯನ್ನು ಶೀಘ್ರ ಪ್ರಕಟಿಸಲಾಗುವುದು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ತೆಲಂಗಾಣದ ಸತ್ತುಪಲ್ಲಿ, ಮದಿರ, ನಲ್ಗೊಂಡ, ನಾಗಾರ್ಜುನ ಸಾಗರ, ದೇವರಕೊಂಡ, ಮುನುಗೋಡು ಮತ್ತು ಮಿರ್ಯಾಲಗೂಡ ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳಿಗ್ಗೆ 6ರಿಂದ ಮಧ್ಯಾಹ್ನ 1ರವರೆಗೆ ಈಗಿರುವಂತೆಯೇ ಲಾಕ್ಡೌನ್ ವಿಸ್ತರಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಈ ಕ್ಷೇತ್ರಗಳಲ್ಲಿ ಇನ್ನೂ ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಬಂದಿಲ್ಲ.
ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅಧ್ಯಕ್ಷತೆಯಲ್ಲಿ ನಡೆದ ಸುದೀರ್ಘ ಸಚಿವ ಸಂಪುಟ ಸಭೆಯಲ್ಲಿ ಲಾಕ್ಡೌನ್, ಲಸಿಕೆ ಅಭಿಯಾನ, ರಾಜ್ಯದ ಆರ್ಥಿಕ ಸ್ಥಿತಿಗತಿ, ಕೃಷಿ ಚಟುವಟಿಕೆ, ವೇತನ ಪರಿಷ್ಕರಣ ಆಯೋಗದ ವರದಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯಿತು.
ತೆಲಂಗಾಣದಲ್ಲಿ ಮೇ 12ರಿಂದ ಲಾಕ್ಡೌನ್ ಜಾರಿಯಲ್ಲಿದೆ. ಬೆಳಿಗ್ಗೆ 6ರಿಂದ 1 ಗಂಟೆಯವರೆಗೆ ಅತ್ಯವಶ್ಯಕ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಲಾಕ್ಡೌನ್ ವಿಸ್ತರಿಸಬಾರದ ಎಂದು ಎಐಎಂಐಎಂ ರಾಜ್ಯ ಸರ್ಕಾರವನ್ನು ಒತ್ತಾಯಿಸಿತ್ತು. ಲಾಕ್ಡೌನ್ ಜಾರಿಗೂ ಮೊದಲು ರಾಜ್ಯದಲ್ಲಿ ಕೇವಲ ರಾತ್ರಿ ಕರ್ಫ್ಯೂ ಮಾತ್ರ ಇತ್ತು. ಕೊರೊನಾ ಸೋಂಕಿತರ ಸಂಖ್ಯೆ ತೀವ್ರಗತಿಯಲ್ಲಿ ಹೆಚ್ಚಾದ ಕಾರಣ ರಾಜ್ಯದ ಮುಖ್ಯ ಕಾರ್ಯದರ್ಶಿ ಸೋಮೇಶ್ ಕುಮಾರ್ ಲಾಕ್ಡೌನ್ ವಿಧಿಸಬೇಕೆಂದು ಪ್ರತಿಪಾದಿಸಿದ್ದರು.
(Telangana Lockdown Extended for Another 10 Days)
ಇದನ್ನೂ ಓದಿ: ಭೂಕಬಳಿಕೆ ಆರೋಪ ಎದುರಿಸುತ್ತಿರುವ ತೆಲಂಗಾಣ ಮಾಜಿ ಸಚಿವ ಎಟೆಲಾ ರಾಜೇಂದರ್ ರಾಜೀನಾಮೆ; ಶೀಘ್ರವೇ ಬಿಜೆಪಿ ಸೇರ್ಪಡೆ?
ಇದನ್ನೂ ಓದಿ: ತೆಲಂಗಾಣದ 135 ವರ್ಷ ಹಳೆಯ ಜೈಲು ಖಾಲಿ, ಇಲ್ಲಿ ತಲೆ ಎತ್ತಲಿದೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ
Published On - 9:24 pm, Tue, 8 June 21