ಭೂಕಬಳಿಕೆ ಆರೋಪ ಎದುರಿಸುತ್ತಿರುವ ತೆಲಂಗಾಣ ಮಾಜಿ ಸಚಿವ ಇಟಾಲಾ ರಾಜೇಂದರ್ ರಾಜೀನಾಮೆ; ಶೀಘ್ರವೇ ಬಿಜೆಪಿ ಸೇರ್ಪಡೆ?
ರಾಜೇಂದರ್ ಹುಜುರಾಬಾದ್ನ ಶಾಸಕರಾಗಿದ್ದು, ಇಂದು ಸ್ಪೀಕರ್ಗೆ ರಾಜೀನಾಮೆ ಪತ್ರ ಸಲ್ಲಿಸುವುದಾಗಿ ತಿಳಿಸಿದ್ದರು. ಮೇ 31ರಂದು ಜೆಪಿ ನಡ್ಡಾರನ್ನು ಭೇಟಿ ಮಾಡಿದ ರಾಜೇಂದರ್ ಗುರುವಾರ ತೆಲಂಗಾಣಕ್ಕೆ ಆಗಮಿಸಿದ್ದಾರೆ.
ತೆಲಂಗಾಣ ಮಾಜಿ ಆರೋಗ್ಯ ಸಚಿವ ಇಟಾಲಾ ರಾಜೇಂದರ್ ಬಿಜೆಪಿ ಸೇರ್ಪಡೆಯ ಬಗ್ಗೆ ಈಗಾಗಲೇ ಊಹಾಪೋಹಗಳು ಎದ್ದಿದ್ದವು. ಸ್ವಲ್ಪದಿನಗಳ ಹಿಂದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾರನ್ನು ಅವರು ಭೇಟಿಯಾಗಿದ್ದರು. ಅದಕ್ಕೆ ಪುಷ್ಟಿ ನೀಡುವಂತೆ ಅವರೀಗ ತೆಲಂಗಾಣ ರಾಷ್ಟ್ರ ಸಮಿತಿ (TRS)ಗೆ ರಾಜೀನಾಮೆ ನೀಡಿದ್ದಾರೆ. ರಾಜೇಂದರ್ ಮೇದಕ್ ಜಿಲ್ಲೆಯಲ್ಲಿ ಭೂಕಬಳಿಕೆ ಮಾಡಿದ್ದಾರೆ ಎಂಬ ಆರೋಪವನ್ನು ಎದುರಿಸುತ್ತಿದ್ದು, ಮೇ 1ರಂದು ಅವರನ್ನು ಟಿಆರ್ಎಸ್ ಸಂಪುಟದಿಂದ ಉಚ್ಚಾಟಿಸಲಾಗಿತ್ತು. ಹಾಗೇ ಮೇ 31ರಂದು ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್ಕುಮಾರ್ ಜತೆ ಹೋಗಿ ಜೆ.ಪಿ.ನಡ್ಡಾರನ್ನು ಭೇಟಿಯಾಗಿದ್ದರು.
ನಾನು ಭೂಕಬಳಿಕೆ ಮಾಡಿದ್ದೇನೆ ಎಂಬ ಬಗ್ಗೆ ಅನಾಮಧೇಯ ಪತ್ರವೊಂದು ಬಂತು. ಅದರ ಆಧಾರದ ಮೇಲೆ ನನ್ನ ವಿರುದ್ಧ ತನಿಖೆ ಶುರುವಾಯಿತು. ಕೆಲವೇ ಗಂಟೆಗಳಲ್ಲಿ ನನ್ನನ್ನು ಸಚಿವ ಸ್ಥಾನದಿಂದ ತೆಗೆದುಹಾಕಲಾಯಿತು. ವಿಚಾರಣೆ ಮುಗಿಯುವ ಮುನ್ನವೇ ನನ್ನನ್ನು ಸಂಪುಟದಿಂದ ಹೊರಹಾಕಲಾಗಿದೆ. ನನ್ನ ವಿರುದ್ಧ ಮಾಡಲಾದ ಭೂಕಬಳಿಕೆ ಆರೋಪ ಆಧಾರ ರಹಿತವಾಗಿದ್ದು. ಆದರೆ ಅದನ್ನು ಗಣನೆಗೆ ತೆಗೆದುಕೊಳ್ಳದೆ, ನನಗೆ ವಿವರಣೆ ನೀಡಲು ಅವಕಾಶವನ್ನೂ ನೀಡದೆ, ಗಮನಕ್ಕೂ ತರದೆ ಸಂಪುಟದಿಂದ ಕೈಬಿಟ್ಟಿದ್ದಾರೆ ಎಂದು ಎಟೆಲಾ ರಾಜೇಂದರ್ ಟಿಆರ್ಎಸ್ ವಿರುದ್ಧ ಆರೋಪ ಮಾಡಿದ್ದಾರೆ.
ರಾಜೇಂದರ್ ಹುಜುರಾಬಾದ್ನ ಶಾಸಕರಾಗಿದ್ದು, ಇಂದು ಸ್ಪೀಕರ್ಗೆ ರಾಜೀನಾಮೆ ಪತ್ರ ಸಲ್ಲಿಸುವುದಾಗಿ ತಿಳಿಸಿದ್ದರು. ಮೇ 31ರಂದು ಜೆಪಿ ನಡ್ಡಾರನ್ನು ಭೇಟಿ ಮಾಡಿದ ರಾಜೇಂದರ್ ಗುರುವಾರ ತೆಲಂಗಾಣಕ್ಕೆ ಆಗಮಿಸಿದ್ದಾರೆ. ಮೇದಕ್ ಜಿಲ್ಲೆಯ ಹೊರವಲಯ ಅಚಾಂಪೇಟ್ನಲ್ಲಿರುವ ಭೂಮಿಯನ್ನು ಇಟೆಲಾ ರಾಜೇಂದರ್ ಅವರ ಕುಟುಂಬಕ್ಕೆ ಸೇರಿದ ಜಮುನಾ ಹ್ಯಾಚರೀಸ್ ಸಂಸ್ಥೆ ಕಬಳಿಸಿದೆ ಎಂಬ ಆರೋಪ ಕೇಳಿಬರುತ್ತಿದ್ದಂತೆ, ಎಟೆಲಾರನ್ನು ಆರೋಗ್ಯ ಇಲಾಖೆ ಸಚಿವ ಸ್ಥಾನದಿಂದ ಕೆಳಗಿಳಿಸಲಾಗಿದೆ. ಇಟಾಲಾ ಮುದಿರಾಜ್ ಸಮುದಾಯಕ್ಕೆ ಸೇರಿದ ಪ್ರಬಲ ನಾಯಕನಾಗಿದ್ದು, ನಾಲ್ಕು ಬಾರಿ ಶಾಸಕರಾದವರಾಗಿದ್ದಾರೆ.
ಇದನ್ನೂ ಓದಿ:ಕೊವಿಡ್ ಸಮಯದಲ್ಲಿ ಪ್ರಥಮ್ ಕೆಲಸ ನೋಡಿ ಮಂಡ್ಯದಿಂದ ಫುಡ್ ಕಿಟ್ ಕಳುಹಿಸಿಕೊಟ್ಟ ಶಾಸಕ ಪುಟ್ಟರಾಜು
Telangana former Health minister Etela Rajender resigns from TRS
Published On - 4:59 pm, Sat, 5 June 21