ಛತ್ತೀಸ್‌ಗಢ್ ರಾಜ್ಯದಲ್ಲಿ ಮದುವೆ ಮಂಟಪದಲ್ಲಿ ಘೋರ ಘಟನೆ ಸಂಭವಿಸಿದೆ. ದುಷ್ಕರ್ಮಿಗಳು ವಧು-ವರ ( Bride- Bridegroom) ಇಬ್ಬರ ಮೇಲೆಯೂ ಆಸಿಡ್ ಹಾಕಿ (Acid Attack) ಪರಾರಿಯಾಗಿದ್ದಾರೆ. ಈ ಘಟನೆಯಲ್ಲಿ ಭಾವಿ ದಂಪತಿಯಿಬ್ಬರು, ಇಬ್ಬರು ಮಕ್ಕಳು ಸೇರಿದಂತೆ 12 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಛತ್ತೀಸ್‌ಗಢ್ ಪೊಲೀಸರು (Chhattisgarh Crime) ನೀಡಿರುವ ವಿವರಗಳ ಪ್ರಕಾರ…
ಸ್ತರ್ ಜಿಲ್ಲೆಯ ಛೋಟೆ ಅಮಾಬಲ್ ಗ್ರಾಮದಲ್ಲಿ ಸುಧಾಪಾಲ್ ನಿವಾಸಿ ದಮ್ರು ಬಾಘೇಲ್ (23), ಸುನೀತಾ ಕಶ್ಯಪ್ (19) ವಿವಾಹ ಕಾರ್ಯಕ್ರಮ ನಡೆಯುತ್ತಿತ್ತು. ಅಷ್ಟರಲ್ಲಿ ಇದ್ದಿಕ್ಕಿದ್ದಂತೆ ಕರೆಂಟ್ ಹೋಯಿತು. ಇದೇ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ವೇದಿಕೆಯೇರಿ ವಧು ವರರ ಮೇಲೆ ಆಸಿಡ್ ಹಾಕಿದ್ದಾನೆ. ಆಸಿಡ್ ವಧು ವರರಷ್ಟೇ ಅಲ್ಲದೆ ಅವರ ಜೊತೆಯಲ್ಲಿ ಪಕ್ಕದಲ್ಲಿದ್ದ ಇಬ್ಬರು ಮಕ್ಕಳು ಸೇರಿದಂತೆ 12 ಮಂದಿಯ ಮೇಲೆ ಸಹ ಆಸಿಡ್ ಎರಚಿದ್ದಾರೆ. ಇದರಿಂದ ಮದುವೆ ಮಂಟಪದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಮಾಹಿತಿ ಪಡೆದ ಪೊಲೀಸರು ಘಟನೆಯ ಸ್ಥಳವನ್ನು ತಲುಪಿ ಸಂತ್ರಸ್ತರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮದುವೆ ಸಮಾರಂಭದಲ್ಲಿ ಕರೆಂಟ್ ಹೋದ ಸಮಯದಲ್ಲಿ ಈ ದಾಳಿ ನಡೆದಾಗ ಅಸಿಡ್ ದಾಳಿ ಮಾಡಿದ್ದು ಯಾರು ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಜೊತೆಗೆ ಯಾಕಾಗಿ ಆಸಿಡ್ ಸುರಿದರು ಎಂಬುದೂ ಸದ್ಯಕ್ಕೆ ಗೊತ್ತಾಗಿಲ್ಲ. ಭಾನ್‌ಪುರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಗಳ ಪತ್ತೆಗಾಗಿ ಪ್ರಯತ್ನಿಸುತ್ತಿದ್ದಾರೆ.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ