ಮಂಚೇರಿಯಲ್, ಏ.18: ತೆಲಂಗಾಣದ (telangana) ಮಂಚೇರಿಯಲ್ ಜಿಲ್ಲೆಯ ತೆರೇಸಾ ಶಾಲೆಯಲ್ಲಿ ವಿದ್ಯಾರ್ಥಿಗಳು ‘ಹನುಮಾನ್ ದೀಕ್ಷೆ ಉಡುಗೆ’ ಧರಿಸಿ ತರಗತಿಗೆ ಬಂದಿರುವುದನ್ನು ಶಿಕ್ಷಕರು ವಿರೋಧಿಸಿದ್ದಾರೆ. ಇದೀಗ ಶಿಕ್ಷಕರ ವಿರುದ್ಧ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿದೆ. ಪ್ರತಿಭಟನೆಗಾರರು ಶಾಲಾ ಕ್ರಮದ ವಿರುದ್ಧ ಅಕ್ರೋಶಗೊಂಡ ಶಾಲಾ ವಸ್ತುಗಳನ್ನು ಧ್ವಂಸಗೊಳಿಸಿದ್ದಾರೆ. ಘಟನೆಗೆ ಸಂಬಂಧಿಸಿದೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಮದರ್ ತೆರೇಸಾ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳನ್ನು ಹನುಮಾನ್ ದೀಕ್ಷೆ ಉಡುಗೆ ಹಾಕಿಕೊಂಡು ಬಂದಿರುವುದಕ್ಕೆ ತರಗತಿಯೊಳಗೆ ಪ್ರವೇಶವಿಲ್ಲ ಎಂದು ಶಾಲಾ ಆಡಳಿತ ಮಂಡಳಿ ಹೇಳಿದೆ ಎಂದು ತರಗತಿಯಿಂದ ಹೊರ ಕಳುಹಿಸಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿ ವಿದ್ಯಾರ್ಥಿಗಳು ಹಾಗು ಸಂಘಟನೆಗಳು ಶಾಲೆ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ. ಇನ್ನು ವಿದ್ಯಾರ್ಥಿಗಳ ಪೋಷಕರ ದೂರಿನ ಮೇರೆಗೆ ಬುಧವಾರ ಶಾಲಾ ಶಿಕ್ಷಕರು ಹಾಗೂ ಪ್ರಾಂಶುಪಾಲರ ವಿರುದ್ಧ ಸೆಕ್ಷನ್ 153 (ಎ) (ಧರ್ಮ ಅಥವಾ ಜನಾಂಗದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು 295 (ಎ) (ಧಾರ್ಮಿಕ ಅವಮಾನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Attacking a school in Adilabad Telangana that too chanting Jai Shree Ram!
How shameless are these goons!
— Vijay Thottathil (@vijaythottathil) April 17, 2024
ವಿದ್ಯಾರ್ಥಿಗಳು ಶಾಲಾ ಸಮವಸ್ತ್ರವಿಲ್ಲದೆ ಶಾಲೆಗೆ ಬಂದಿರುವುದನ್ನು ಕಂಡು ಪ್ರಾಂಶುಪಾಲರ ವಿದ್ಯಾರ್ಥಿಗಳ ಪೋಷಕರು ಶಾಲೆಗೆ ಬರುವಂತೆ ಹೇಳಿದ್ದಾರೆ. ಇದನ್ನು ವಿರೋಧಿಸಿ ಹಿಂದೂ ಸಂಘಟನೆ ಸದಸ್ಯರು ಶಾಲೆಯ ಹೊರಗೆ ಪ್ರತಿಭಟನೆ ನಡೆಸಿದ್ದಾರೆ. ಸಮವಸ್ತ್ರ ಧರಿಸದೇ ಬರದ ವಿದ್ಯಾರ್ಥಿಗಳು ಶಾಲೆ ಪ್ರವೇಶಿಸುವಂತಿಲ್ಲ ಹಾಗೂ ವಾರ್ಷಿಕ ಪರೀಕ್ಷೆಗೆ ಹಾಜರಾಗದಂತೆ ಆಡಳಿತ ಮಂಡಳಿ ಹೇಳಿತ್ತು.
ಇದನ್ನೂ ಓದಿ : ಬೈಕ್ಗೆ ಡಿಕ್ಕಿ ಹೊಡೆದು ಚಾಲಕನ ಸಮೇತ ದೂರ ಎಳೆದೊಯ್ದ ಲಾರಿ, ಎದೆ ಝೆಲ್ಲೆನಿಸುವ ವಿಡಿಯೋ
ಇದರಿಂದ ಅಕ್ರೋಶಗೊಂಡು ಶಾಲೆ ಹೊರಗೆ ಪ್ರತಿಭಟನೆ ಮಾಡುತ್ತಿದ್ದ ಹಿಂದೂ ಸಂಘಟನೆ ಸದಸ್ಯರು ಶಾಲೆಯೊಳಗೆ ನುಗ್ಗಿ ಶಾಲೆಯ ಕಿಟಕಿಗಳನ್ನು ಧ್ವಂಸಗೊಳಿಸಿದ್ದಾರೆ. ಶಾಲೆ ಅನೇಕ ವಸ್ತುಗಳು ಮುರಿದು ಹಾಕಿದ್ದಾರೆ. ಶಾಲೆಯ ಆಡಳಿತ ಮಂಡಳಿ ಸ್ಥಳೀಯ ಪೊಲೀಸರಿಗೆ ಈ ಘಟನೆಯ ಬಗ್ಗೆ ದೂರು ನೀಡಿದ್ದು, ಇನ್ನೂ ಯಾರನ್ನೂ ಬಂಧಿಸಿಲ್ಲ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ