Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಕ್ಕಳಿಗೆ ಸೆರೆಲಾಕ್ ಕೊಡುವ ಮುನ್ನ ಎಚ್ಚರ, ಹೆಚ್ಚಿನ ಸಕ್ಕರೆ ಅಂಶವಿರುವ ಉತ್ಪನ್ನಗಳ ಮಾರಾಟ ಮಾಡ್ತಿದೆಯಾ ನೆಸ್ಲೆ?

ಬಡ ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ನೆಸ್ಲೆ ಹೆಚ್ಚು ಸಕ್ಕರೆ ಅಂಶವಿರುವ ಮಕ್ಕಳ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ. ಭಾರದಲ್ಲಿ ದೊರೆಯುವ ಸೆರೆಲಾಕ್​ನಲ್ಲಿಯೂ 3 ಗ್ರಾಂನಷ್ಟು ಸಕ್ಕರೆ ಅಂಶ ಪತ್ತೆಯಾಗಿದೆ. ಏಷ್ಯಾ, ಆಫ್ರಿಕಾ ಹಾಗೂ ಲ್ಯಾಟಿನ್ ಅಮೆರಿಕದಲ್ಲಿ ಮಾರಾಟವಾದ ಆಹಾರ ಮಾದರಿಯನ್ನು ಸ್ವಿಸ್ ಬೆಲ್ಜಿಯಂ ಲ್ಯಾಬ್​ಗೆ ಪರೀಕ್ಷೆಗೆ ಕಳುಹಿಸಿದಾಗ ಇದು ಬಹಿರಂಗಗೊಂಡಿದೆ.

ಮಕ್ಕಳಿಗೆ ಸೆರೆಲಾಕ್ ಕೊಡುವ ಮುನ್ನ ಎಚ್ಚರ, ಹೆಚ್ಚಿನ ಸಕ್ಕರೆ ಅಂಶವಿರುವ ಉತ್ಪನ್ನಗಳ ಮಾರಾಟ ಮಾಡ್ತಿದೆಯಾ ನೆಸ್ಲೆ?
ನೆಸ್ಲೆ
Follow us
ನಯನಾ ರಾಜೀವ್
|

Updated on:Apr 18, 2024 | 10:41 AM

ಮಕ್ಕಳಿಗಾಗಿಯೇ ಉತ್ಪನ್ನಗಳನ್ನು ತಯಾರಿಸುವ ಹಲವು ಕಂಪನಿಗಳು ಜಗತ್ತಿನಲ್ಲಿವೆ, ಅದರಲ್ಲಿ ನೆಸ್ಲೆ(Nestle) ಕೂಡ ಒಂದು. ವಿಶ್ವದ ಅತಿದೊಡ್ಡ ಗ್ರಾಹಕ ಸರಕುಗಳು ಮತ್ತು ಮಕ್ಕಳ ಉತ್ಪನ್ನಗಳ ತಯಾರಕ ನೆಸ್ಲೆ, ಭಾರತ ಹಾಗೂ ಏಷ್ಯಾ ಮತ್ತು ಆಫ್ರಿಕನ್ ದೇಶದಗಳಲ್ಲಿ ಮಾರಾಟ ಮಾಡುವ ಉತ್ಪನ್ನಗಳಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆಯನ್ನು ಸೇರಿಸುತ್ತಿದೆ ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ. ಸ್ವಿಸ್ ತನಿಖಾ ಸಂಸ್ಥೆ ಪಬ್ಲಿಕ್ ಐನಿಂದ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.

ಇದು ಒಂದು ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಶಿಶುಗಳಿಗೆ ಸೆರೆಲಾಕ್(Cerelac) ಮಾದರಿಗಳಲ್ಲಿ ನೆಸ್ಲೆ ನೀಡುತ್ತದೆ. ಆರು ತಿಂಗಳಿಂದ ಎರಡು ವರ್ಷ ವಯಸ್ಸಿನ ಮಕ್ಕಳಿಗೆ ಧಾನ್ಯದ ರೂಪದಲ್ಲಿ ನೀಡಲಾಗುತ್ತದೆ. ಭಾರತದಲ್ಲಿ, ಎಲ್ಲಾ 15 ಸೆರೆಲಾಕ್ ಬೇಬಿ ಉತ್ಪನ್ನಗಳು ಪ್ರತಿ ಸೇವೆಗೆ ಸರಾಸರಿ 3 ಗ್ರಾಂ ಸಕ್ಕರೆಯನ್ನು ಹೊಂದಿರುತ್ತವೆ ಎಂದು ಸಂಶೋಧನೆಗಳು ತೋರಿಸಿವೆ. ಅದೇ ಉತ್ಪನ್ನವನ್ನು ಜರ್ಮನಿ ಮತ್ತು ಯುಕೆಯಲ್ಲಿ ಸಕ್ಕರೆ ಸೇರಿಸದೆ ಮಾರಾಟ ಮಾಡಲಾಗುತ್ತಿದೆ.

ಅದೇ ಉತ್ಪನ್ನಗಳನ್ನು ಬ್ರಿಟನ್, ಜರ್ಮನಿ, ಸ್ವಿಟ್ಜರ್ಲೆಂಡ್ ಮತ್ತು ಇತರ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಸಕ್ಕರೆ ಇಲ್ಲದೆ ಮಾರಾಟ ಮಾಡಲಾಗುತ್ತಿದೆ.

ಏಷ್ಯಾ, ಆಫ್ರಿಕಾ ಹಾಗೂ ಲ್ಯಾಟಿನ್ ಅಮೆರಿಕದಲ್ಲಿ ಮಾರಾಟವಾದ ಆಹಾರ ಮಾದರಿಯನ್ನು ಸ್ವಿಸ್ ಬೆಲ್ಜಿಯಂ ಲ್ಯಾಬ್​ಗೆ ಪರೀಕ್ಷೆಗೆ ಕಳುಹಿಸಿದಾಗ ಇದು ಬಹಿರಂಗಗೊಂಡಿದೆ.

ಮತ್ತಷ್ಟು ಓದಿ: Child Health: ನಿಮ್ಮ ಮಕ್ಕಳ ಆರೋಗ್ಯಕ್ಕೆ ಅತ್ಯಗತ್ಯವಾದ ಡ್ರೈಫ್ರೂಟ್​ಗಳಿವು

ಭಾರತದಲ್ಲಿ 2022ರಲ್ಲಿ ಮಾರಾಟವು 250 ಮಿಲಿಯನ್ ಡಾಲರ್​ ಮೀರಿತ್ತು. ಎಲ್ಲಾ ಸೆರೆಲ್ಯಾಕ್ ಬೇಬಿ ಸಿರಿಲ್​ಗಳು ಪ್ರತಿ ಡಬ್ಬವು ಸರಾಸರಿ 3 ಗ್ರಾಂನಷ್ಟು ಸಕ್ಕರೆ ಅಂಶವನ್ನು ಹೊಂದಿದೆ ಎಂಬುದು ತಿಳಿದುಬಂದಿದೆ.

ಆಫ್ರಿಕಾದ ಪರಿಸ್ಥಿತಿಯೂ ಹೀಗೆ ಇದೆ ಆಫ್ರಿಕಾದ ಪ್ರಮುಖ ಮಾರುಕಟ್ಟೆಯಾದ ದಕ್ಷಿಣ ಆಫ್ರಿಕಾದ ಪರಿಸ್ಥಿತಿಯು ಇದೇ ರೀತಿಯದ್ದಾಗಿದೆ. ಅಲ್ಲಿ ಎಲ್ಲಾ ಸೆರೆಲಾಕ್ ಪ್ರತಿ ಡಬ್ಬವು ನಾಲ್ಕು ಗ್ರಾಂನಷ್ಟು ಸಕ್ಕರೆ ಅಂಶವನ್ನು ಹೊಂದಿದೆ. ಇಲ್ಲಿ 2022ರಲ್ಲಿ 150 ಮಿಲಿಯನ್ ಡಾಲರ್​ನಷ್ಟು ಮಾರಾಟವಾಗಿದೆ.

ಬ್ರೆಜಿಲ್​ ಹೇಳಿದ್ದೇನು? ಬ್ರೆಜಿಲ್​ನಲ್ಲಿ ಸೆರೆಲಾಕ್​ ಅನ್ನು ಮ್ಯೂಸಿಲಾನ್​ ಎಂದು ಕರೆಯಲಾಗುತ್ತದೆ, ಎಂಟು ಉತ್ಪನ್ನಗಳಲ್ಲಿ ಎರಡರಲ್ಲಿ ಸಕ್ಕರೆ ಸೇರಿಸಲಾಗಿಲ್ಲ ಎಂಬುದು ಕಂಡುಬಂದಿದೆ. ನೈಜೀರಿಯಾದಲ್ಲಿ ಪರೀಕ್ಷಿಸಲಾದ ಒಂದು ಉತ್ಪನ್ನದಲ್ಲಿ 6.8 ಗ್ರಾಂನಷ್ಟು ಸಕ್ಕರೆ ಇತ್ತು.

ಮೆಕ್ಸಿಕೋದಲ್ಲಿ ಮಕ್ಕಳಿಗೆ ಲಭ್ಯವಿರುವ ಮೂರು ನಿಡೋ ಉತ್ಪನ್ನಗಳಲ್ಲಿ ಎರಡರಲ್ಲಿ ಯಾವುದೇ ಸಕ್ಕರೆ ಸೇರಿಸಲಾಗಿಲ್ಲ, ಆದರೆ ಮೂರನೆಯದರಲ್ಲಿ 1.7 ಗ್ರಾಂ ಸೇರಿಸಲಾಗಿದೆ. ದಕ್ಷಿಣ ಆಫ್ರಿಕಾ, ನೈಜೀರಿಯಾ ಮತ್ತು ಸೆನೆಗಲ್​ನಲ್ಲಿ ಮಾರಾಟವಾಗುವ ನಿಡೋ ಕಿಂಡರ್ ಸುಮಾರು 1 ಗ್ರಾಂನಷ್ಟು ಸಕ್ಕರೆ ಅಂಶವನ್ನು ಹೊಂದಿದೆ.

ಭಾರತದಲ್ಲಿ ಮಾರಾಟವಾಗುವ ನೆಸ್ಲೆ ಮಗುವಿನ ಆಹಾರ ಉತ್ಪನ್ನಗಳಲ್ಲಿನ ಸಕ್ಕರೆಯ ಪ್ರಮಾಣ ಎಷ್ಟು? ವರದಿಯ ಪ್ರಕಾರ, ಭಾರತದಲ್ಲಿ ಮಾರಾಟವಾಗುವ ನೆಸ್ಲೆ ಮಕ್ಕಳ ಉತ್ಪನ್ನಗಳಲ್ಲಿ ಸುಮಾರು 3 ಗ್ರಾಂ ಸಕ್ಕರೆ ಕಂಡುಬಂದಿದೆ. ಪ್ಯಾಕೆಟ್‌ನಲ್ಲಿ ಈ ಪ್ರಮಾಣದ ಸಕ್ಕರೆಯ ಬಗ್ಗೆ ಕಂಪನಿಯು ಯಾವುದೇ ಮಾಹಿತಿಯನ್ನು ನೀಡಿಲ್ಲ.

ಮಕ್ಕಳಿಗೆ ಸಕ್ಕರೆ ಏಕೆ ಹಾನಿಕಾರಕ? ವರದಿಯ ಪ್ರಕಾರ, ಮಕ್ಕಳು ಸಕ್ಕರೆಗೆ ಬೇಗನೆ ಒಡ್ಡಿಕೊಳ್ಳುವುದರಿಂದ ಸಕ್ಕರೆ ಆಧಾರಿತ ಉತ್ಪನ್ನಗಳಿಗೆ ಆಕರ್ಷಣೆಗೆ ಕಾರಣವಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ, ಇದು ಬೊಜ್ಜು ಮತ್ತು ಇತರ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ.

ವರದಿಗೆ ನೆಸ್ಲೆ ಇಂಡಿಯಾ ಪ್ರತಿಕ್ರಿಯೆ ಏನು? ವರದಿಗೆ ಪ್ರತಿಕ್ರಿಯಿಸಿದ ನೆಸ್ಲೆ ಇಂಡಿಯಾ ವಕ್ತಾರರು ಕಳೆದ 5 ವರ್ಷಗಳಲ್ಲಿ, ನೆಸ್ಲೆ ಇಂಡಿಯಾ ಶಿಶು ಧಾನ್ಯಗಳ ಪೋರ್ಟ್‌ಫೋಲಿಯೊದಲ್ಲಿ ಸೇರಿಸಲಾದ ಸಕ್ಕರೆಯ ಪ್ರಮಾಣವನ್ನು ಶೇ.30 ರಷ್ಟು ಕಡಿಮೆ ಮಾಡಿದೆ ಎಂದು ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:39 am, Thu, 18 April 24