ಉಜ್ಬೇಕಿಸ್ತಾನ್: ಕಲುಷಿತ ಕೆಮ್ಮು ಸಿರಪ್‌ನಿಂದ ಮಕ್ಕಳ ಸಾವು, ಭಾರತೀಯ ಸೇರಿದಂತೆ 23 ಮಂದಿಗೆ ಶಿಕ್ಷೆ
ಅಪರಾಧಿಗಳು ಕಳಪೆ ಗುಣಮಟ್ಟದ ಅಥವಾ ನಕಲಿ ಔಷಧಿಗಳನ್ನು ಮಾರಾಟ ಮಾಡುವುದು, ತಮ್ಮ ಅಧಿಕೃತ ಕರ್ತವ್ಯಗಳನ್ನು ನಿರ್ಲಕ್ಷಿಸುವುದು, ನಕಲಿ ದಾಖಲೆಗಳನ್ನು ಸೃಷ್ಟಿಸುವುದು, ತೆರಿಗೆ ವಂಚನೆ ಮತ್ತು ಅಧಿಕಾರಿಗಳಿಗೆ ಲಂಚ ನೀಡುವುದು ಮೊದಲಾದ ಆರೋಪಗಳಲ್ಲಿ ತಪ್ಪಿತಸ್ಥರೆಂದು ಕಂಡುಬಂದಿದೆ. ಅಪರಾಧಿಗಳಲ್ಲಿ ಒಬ್ಬರು ಭಾರತೀಯ ಆಗಿದ್ದು, 23 ಮಂದಿಗೆ ಉಜ್ಬೇಕಿಸ್ತಾನ ನ್ಯಾಯಾಲಯ ಶಿಕ್ಷೆ ಘೋಷಿಸಿದೆ.
ತಾಷ್ಕೆಂಟ್ ಫೆಬ್ರವರಿ 27: ನೋಯ್ಡಾ ಮೂಲದ ಮರಿಯನ್ ಬಯೋಟೆಕ್ ಲಿಮಿಟೆಡ್ (Marion Biotech Limited)ತಯಾರಿಸಿದ ಕಲುಷಿತ ಕೆಮ್ಮಿನ ಸಿರಪ್‌ನಿಂದಾಗಿ (cough syrup )68 ಮಕ್ಕಳ ಸಾವು ಸಂಭವಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಜ್ಬೇಕಿಸ್ತಾನದ (Uzbekistan) ನ್ಯಾಯಾಲಯವು ಸೋಮವಾರ ಭಾರತೀಯ ಸೇರಿದಂತೆ 23 ಜನರಿಗೆ ಜೈಲು ಶಿಕ್ಷೆಯನ್ನು ವಿಧಿಸಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಭಾರತೀಯ ಅಪರಾಧಿ ಸಿಂಗ್ ರಾಘವೇಂದ್ರ ಪ್ರತಾಪ್‌ಗೆ 20 ವರ್ಷಗಳ ಸುದೀರ್ಘ ಶಿಕ್ಷೆ ವಿಧಿಸಲಾಯಿತು. ಅವರು ಕ್ಯುರಾಮ್ಯಾಕ್ಸ್ ಮೆಡಿಕಲ್‌ನಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಇದು ಮೇರಿಯನ್ ಬಯೋಟೆಕ್ ಉತ್ಪಾದಿಸಿದ ಔಷಧಿಗಳನ್ನು ಮಾರಾಟ ಮಾಡುವ ಸಂಸ್ಥೆಯಾಗಿದೆ.
ಶಿಕ್ಷೆ ವಿಧಿಸುವ ಸಂದರ್ಭದಲ್ಲಿ ಉಜ್ಬೇಕಿಸ್ತಾನ್‌ನ ಅಧಿಕಾರಿಗಳು ಕೆಮ್ಮಿನ ಸಿರಪ್‌ನ ವಿತರಕರು ಕಡ್ಡಾಯ ಪರೀಕ್ಷೆಯನ್ನು ಬಿಟ್ಟುಬಿಡಲು ಸ್ಥಳೀಯ ಅಧಿಕಾರಿಗಳಿಗೆ ಲಂಚ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ರಾಜ್ಯ ಪ್ರಾಸಿಕ್ಯೂಟರ್ ಸೈದ್ಕರಿಮ್ ಅಕಿಲೋವ್ ಅವರು ತಮ್ಮ ಉತ್ಪನ್ನಗಳ ಕಡ್ಡಾಯ ತಪಾಸಣೆಯನ್ನು ಬಿಟ್ಟುಬಿಡಲು ವೈದ್ಯಕೀಯ ಉತ್ಪನ್ನಗಳ ಪರಿಣತಿ ಮತ್ತು ಪ್ರಮಾಣೀಕರಣ ಕೇಂದ್ರದ ಅಧಿಕಾರಿಗಳಿಗೆ $33,000 (ಸುಮಾರು ರೂ 27 ಲಕ್ಷ) ಪಾವತಿಸಿದ್ದಾರೆ ಎಂದು ಆರೋಪಿಸಿದರು. ಪ್ರತಾಪ್ ಅವರಲ್ಲದೆ, ಆಮದು ಮಾಡಿದ ಔಷಧಿಗಳಿಗೆ ಪರವಾನಗಿ ನೀಡುವ ಉಸ್ತುವಾರಿ ವಹಿಸಿದ್ದ ಮಾಜಿ ಹಿರಿಯ ಅಧಿಕಾರಿಗಳಿಗೆ ನ್ಯಾಯಾಲಯವು ಜೈಲು ಶಿಕ್ಷೆಯನ್ನು ವಿಧಿಸಿತು.
ಅಪರಾಧಿಗಳು ಕಳಪೆ ಗುಣಮಟ್ಟದ ಅಥವಾ ನಕಲಿ ಔಷಧಿಗಳನ್ನು ಮಾರಾಟ ಮಾಡುವುದು, ತಮ್ಮ ಅಧಿಕೃತ ಕರ್ತವ್ಯಗಳನ್ನು ನಿರ್ಲಕ್ಷಿಸುವುದು, ನಕಲಿ ದಾಖಲೆಗಳನ್ನು ಸೃಷ್ಟಿಸುವುದು, ತೆರಿಗೆ ವಂಚನೆ ಮತ್ತು ಅಧಿಕಾರಿಗಳಿಗೆ ಲಂಚ ನೀಡುವುದು ಮೊದಲಾದ ಆರೋಪಗಳಲ್ಲಿ ತಪ್ಪಿತಸ್ಥರೆಂದು ಕಂಡುಬಂದಿದೆ. ಸಿರಪ್ ಸೇವಿಸಿ ಸಾವಿಗೀಡಾದ 68 ಮಕ್ಕಳು ಮತ್ತು ಅಂಗವಿಕಲರಾದ ಇತರ ನಾಲ್ಕು ಮಕ್ಕಳ ಕುಟುಂಬಗಳಿಗೆ $ 80,000 (ರೂ 66,29,436) ಪರಿಹಾರವನ್ನು ಪಾವತಿಸಲು ಏಳು ಅಪರಾಧಿಗಳಿಗೆ ನ್ಯಾಯಾಲಯ ಸೂಚಿಸಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಏಳು ಅಪರಾಧಿಗಳು ಔಷಧದಿಂದ ಹಾನಿಗೊಳಗಾದ ಇತರ ಎಂಟು ಮಕ್ಕಳ ಪೋಷಕರಿಗೆ $ 16,000 (ರೂ 13,25,887) ರಿಂದ $ 40,000 (ರೂ 33,14,718) ಪಾವತಿಸಬೇಕಿದೆ.
ಉಜ್ಬೇಕಿಸ್ತಾನ್‌ನ ಆರೋಗ್ಯ ಸಚಿವಾಲಯವು ಡಿಸೆಂಬರ್ 2022 ರಲ್ಲಿ ಶೀತ ಗುಣಮಾಡುವ ಔಷಧಿಯಾದ ಡಾಕ್ 1 ಮ್ಯಾಕ್ಸ್ ಸಿರಪ್ ಅನ್ನು ಸೇವಿಸಿದ ನಂತರ 18 ಮಕ್ಕಳು ಸಾವಿಗೀಡಾಗಿದ್ದಾರೆ ಎಂದು ಹೇಳಿತ್ತು . ಪ್ರಾಥಮಿಕ ತನಿಖೆಯ ಪ್ರಕಾರ ಕೆಮ್ಮಿನ ಸಿರಪ್‌ನಲ್ಲಿ ಎಥಿಲೀನ್ ಗ್ಲೈಕಾಲ್ ಎಂಬ ವಿಷಕಾರಿ ಅಂಶವಿತ್ತು.
ಔಷಧೀಯ ಉದ್ದೇಶಗಳಿಗಾಗಿ ಅನುಮತಿಸದ ಕೈಗಾರಿಕಾ ದರ್ಜೆಯ ಗ್ಲಿಸರಿನ್‌ನಲ್ಲಿ ಕಂಡುಬರುವ ಎಥಿಲೀನ್ ಗ್ಲೈಕೋಲ್‌ನ ಕುರುಹುಗಳನ್ನು ಸಹ ಸಿರಪ್‌ಗಳು ಒಳಗೊಂಡಿರಬಾರದು. ವೈದ್ಯಕೀಯ ಬಳಕೆಗಾಗಿ, ಸಿರಪ್ ತಯಾರಿಕೆಯಲ್ಲಿ ಗ್ಲಿಸರಿನ್ ಐಪಿ, ಅಥವಾ ಇಂಡಿಯನ್ ಫಾರ್ಮಾಕೋಪಿಯಾ, ಗ್ರೇಡ್ ಅನ್ನು ಬಳಸಬೇಕು.
ಎಥಿಲೀನ್ ಗ್ಲೈಕೋಲ್ ಮತ್ತು ಡೈಥಿಲೀನ್ ಗ್ಲೈಕೋಲ್ ವಾಂತಿ, ಸೆಳೆತಕ್ಕೆ ಕಾರಣವಾಗಬಹುದು. ಇದು ರಕ್ತಪರಿಚಲನಾ ವ್ಯವಸ್ಥೆಯ ಮೇಲೆ ಪರಿಣಾಮ ಬೀರಬಹುದು ಮತ್ತು ತೀವ್ರ ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾಗಬಹುದು. ಡಿಸೆಂಬರ್ 2022 ರಲ್ಲಿ, ಉತ್ತರ ಪ್ರದೇಶದ ಡ್ರಗ್ ರೆಗ್ಯುಲೇಟರ್ ನೋಯ್ಡಾದಲ್ಲಿ ಮರಿಯನ್ ಬಯೋಟೆಕ್‌ನ ಉತ್ಪಾದನಾ ಸೌಲಭ್ಯವನ್ನು ಉತ್ತಮ ಉತ್ಪಾದನಾ ಅಭ್ಯಾಸಗಳ ಬಹು ಉಲ್ಲಂಘನೆಗಳನ್ನು ಗಮನಿಸಿದ ನಂತರ ಅಮಾನತುಗೊಳಿಸಿತು. ವಿಶ್ವ ಆರೋಗ್ಯ ಸಂಸ್ಥೆಯು ಜಾರಿಗೆ ತಂದಿರುವ ಉತ್ತಮ ಉತ್ಪಾದನಾ ಅಭ್ಯಾಸಗಳ ವ್ಯವಸ್ಥೆಯು ಉತ್ಪನ್ನಗಳನ್ನು “ಸತತವಾಗಿ ಉತ್ಪಾದಿಸಲಾಗುತ್ತದೆ ಮತ್ತು ಅವುಗಳ ಉದ್ದೇಶಿತ ಬಳಕೆಗೆ ಸೂಕ್ತವಾದ ಗುಣಮಟ್ಟದ ಮಾನದಂಡಗಳಿಗೆ ಮತ್ತು ಮಾರ್ಕೆಟಿಂಗ್ ದೃಢೀಕರಣದ ಅಗತ್ಯವಿರುವಂತೆ ನಿಯಂತ್ರಿಸಲಾಗುತ್ತದೆ” ಎಂದು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ.
ಇದನ್ನೂ ಓದಿ: ವಿಮೆ ಹಣ ಪಡೆಯಲು ತನ್ನ ಎರಡೂ ಕಾಲುಗಳನ್ನು ಕತ್ತರಿಸಿ ಬಕೆಟ್ ಒಳಗೆ ಇರಿಸಿದ್ದ ವ್ಯಕ್ತಿ
ಅವರು ಅಗತ್ಯವಿರುವ ಮಾನದಂಡಗಳಿಗೆ ಬದ್ಧರಾಗಿದ್ದಾರೆ ಎಂಬುದನ್ನು ಸಾಬೀತುಪಡಿಸಿ ವರದಿಯನ್ನು ಸಲ್ಲಿಸಲು ಮರಿಯನ್ ಅವರನ್ನು ಕೇಳಲಾಗಿದೆ. ಇದರ ನಂತರ, ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಅವರಿಗೆ ಉತ್ಪಾದನೆಯನ್ನು ಪುನರಾರಂಭಿಸಲು ಅವಕಾಶ ನೀಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ