ಮೋದಿಯವರಿಗೆ ಆಡಳಿತ ನಡೆಸಲು ಬರುವುದಿಲ್ಲ, ಸಚಿನ್​ಗೆ ಬ್ಯಾಟಿಂಗ್ ಗೊತ್ತಿಲ್ಲ ಎಂಬಂತಾಯ್ತು ನಿಮ್ಮ ವಾದ: ಕಂಗನಾ ರಣಾವತ್

Kangana Ranaut: ಎಲ್ಲದಕ್ಕೂ ರೊಚ್ಚಿಗೇಳಬೇಡಿ. ಕುಂಭ ಮೇಳ ಮತ್ತು ಚುನಾವಣಾ ಪ್ರಚಾರ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಮೋದಿ ಕೆಲವು ತಪ್ಪುಗಳನ್ನು ಮಾಡಿದ್ದಾರೆ ಎಂಬುದು ನಿಮಗೂ ಗೊತ್ತಿರಬೇಕು. ದೇಶದ ಪ್ರಧಾನಿಂತೆ ನಡೆದುಕೊಳ್ಳುವ ಮೂಲಕ ಎಲ್ಲವನ್ನೂ ಸರಿ ಮಾಡುವ ಭರವಸೆಯನ್ನು ಅವರು ನೀಡಬೇಕು ಎಂದು ಟ್ವೀಟಿಗರೊಬ್ಬರು ಕಂಗನಾ ಟ್ವೀಟ್ ಗೆ ಪ್ರತಿಕ್ರಿಯಿಸಿದ್ದಾರೆ.

ಮೋದಿಯವರಿಗೆ ಆಡಳಿತ ನಡೆಸಲು ಬರುವುದಿಲ್ಲ, ಸಚಿನ್​ಗೆ ಬ್ಯಾಟಿಂಗ್ ಗೊತ್ತಿಲ್ಲ ಎಂಬಂತಾಯ್ತು ನಿಮ್ಮ  ವಾದ: ಕಂಗನಾ ರಣಾವತ್
ನಟಿ ಕಂಗನಾ
ರಶ್ಮಿ ಕಲ್ಲಕಟ್ಟ

Updated on: Apr 27, 2021 | 9:39 PM

ಮುಂಬೈ: ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆ ನೀಡಬೇಕು #Resign_PM_Modi ಎಂಬ ಹ್ಯಾಷ್​ಟ್ಯಾಗ್ ಟ್ವಿಟರ್​ನಲ್ಲಿ ಟ್ರೆಂಡ್ ಆಗುತ್ತಿದೆ. ಮೋದಿ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸುವ ಟ್ವೀಟ್​ಗಳ ಬಗ್ಗೆ ಗುಡುಗಿದ ಬಾಲಿವುಡ್ ನಟಿ ಕಂಗನಾ ರಣಾವತ್, ಮೋದಿಜೀ ಅವರಿಗೆ ಆಡಳಿತ ನಡೆಸಲು ಬರುವುದಿಲ್ಲ,ಕಂಗನಾಗೆ ನಟನೆ ಬರುವುದಿಲ್ಲ, ಸಚಿನ್ ಗೆ ಬ್ಯಾಟಿಂಗ್ ಮಾಡಲು ಬರುವುದಿಲ್ಲ, ಲತಾಜೀ ಅವರಿಗೆ ಹಾಡಲು ಬರುವುದಿಲ್ಲ, ಆದರೆ ಈ ಚಿಂದಿ ಟ್ರೋಲ್ ಗಳಿಗೆ ಎಲ್ಲವೂ ತಿಳಿದಿದೆ. ಪ್ಲೀಸ್ #Resign_PM_Modi ಜೀ, ಈ ವಿಷ್ಣು ಅವತಾರದ ಟ್ರೋಲ್ ಗಳನ್ನು ಭಾರತದ ಮುಂದಿನ ಪ್ರಧಾನಿಯನ್ನಾಗಿ ಮಾಡಿ ಎಂದು ಟ್ವೀಟ್ ಮಾಡಿದ್ದಾರೆ.

ದೇಶದಲ್ಲಿ ಕೊರೊನಾವೈರಸ್ ಎರಡನೇ ಅಲೆಗೆ ಮೋದಿಯೇ ಕಾರಣ ಎಂದು ಆರೋಪಿಸಿ ನೆಟ್ಟಿಗರು #Resign_PM_Modi ಹ್ಯಾಷ್ ಟ್ಯಾಗ್ ಟ್ರೆಂಡ್ ಮಾಡಿದ್ದಾರೆ.


ಕಂಗನಾ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿದ ಕೆಲವು ನೆಟ್ಟಿಗರು ದೇಶದಲ್ಲಿ ಕೊವಿಡ್ ಪ್ರಕರಣಗಳು ಇರುವಾಗಲೇ ಕುಂಭ ಮೇಳ ಆಯೋಜಿಸಲು, ಚುನಾವಣಾ ಪ್ರಚಾರ ಕಾರ್ಯಕ್ರಮಗಳನ್ನು ನಡೆಸಲು ಮೋದಿ ಅನುಮತಿ ನೀಡಬಾರದಿತ್ತು ಎಂದಿದ್ದಾರೆ.


ಎಲ್ಲದಕ್ಕೂ ರೊಚ್ಚಿಗೇಳಬೇಡಿ. ಕುಂಭ ಮೇಳ ಮತ್ತು ಚುನಾವಣಾ ಪ್ರಚಾರ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಮೋದಿ ಕೆಲವು ತಪ್ಪುಗಳನ್ನು ಮಾಡಿದ್ದಾರೆ ಎಂಬುದು ನಿಮಗೂ ಗೊತ್ತಿರಬೇಕು. ದೇಶದ ಪ್ರಧಾನಿಂತೆ ನಡೆದುಕೊಳ್ಳುವ ಮೂಲಕ ಎಲ್ಲವನ್ನೂ ಸರಿ ಮಾಡುವ ಭರವಸೆಯನ್ನು ಅವರು ನೀಡಬೇಕು ಎಂದು ಟ್ವೀಟಿಗರೊಬ್ಬರು ಕಂಗನಾ ಟ್ವೀಟ್ ಗೆ ಪ್ರತಿಕ್ರಿಯಿಸಿದ್ದಾರೆ.

ವಿಡಿಯೊವೊಂದನ್ನು ಟ್ವೀಟ್  ಮಾಡಿದ ಕಂಗನಾ ಇಡೀ ಜಗತ್ತು ಭಾರತದ ಬಗ್ಗೆ ಅನುಭೂತಿ ಮತ್ತು ಗೌರವವನ್ನು ತೋರಿಸುತ್ತಿದೆ, ಅದಕ್ಕೆ ಕಾರಣ ನಮ್ಮ ನಾಯಕ ಮತ್ತು ಅವರ ಶ್ರೇಷ್ಠ ನಾಯಕತ್ವ, ಖಾತರಿಗಾಗಿ ಏನನ್ನೂ ತೆಗೆದುಕೊಳ್ಳಬೇಡಿ, ವಿಷಪೂರಿತ ಕೃತಜ್ಞತೆಯಿಲ್ಲದ ಸರೀಸೃಪವಾಗಿರ.ಇವರುಕೊವಿಡ್ ವಿರುದ್ಧ ಹೋರಾಡುವ ಬದಲು ಆ ಮಹಾನ್ ನಾಯಕತ್ವದ ವಿರುದ್ಧ ಹೋರಾಡುತ್ತಾರೆ ಮತ್ತು ಅವರನ್ನು ಕಟುವಾಗಿ ನಿಂದಿಸುತ್ತಾರೆ ಎಂದಿದ್ದಾರೆ.

ಇದನ್ನೂ ಓದಿ: Kangana Ranaut : ನಟ ಕಾರ್ತಿಕ್ ಸಹ ಬಾಲಿವುಡ್ ನೆಪೋಟಿಸ್ಮ್ ಅನ್ನು ಎದುರಿಸುತ್ತಿದ್ದಾರೆ : ನಟಿ ಕಂಗನಾ

Published On - 9:38 pm, Tue, 27 April 21

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us