ಸುಶಾಂತ್​ ಸಾವಿನ ವಿಚಾರದಲ್ಲಿ ಕಂಗನಾ ರಣಾವತ್​ ಮುಖವಾಡ ಬಯಲು; ತರಾಟೆಗೆ ತೆಗೆದುಕೊಂಡ ನೆಟ್ಟಿಗರು

ಕಂಗನಾ ರಣಾವತ್​ ಅವರಿಗೆ ‘ವರ್ಷದ ಬೂಟಾಟಿಕೆ ವ್ಯಕ್ತಿ’ ಎಂಬ ಪ್ರಶಸ್ತಿ ನೀಡಬೇಕು ಎಂದು ಅನೇಕರು ಕಾಮೆಂಟ್​ ಮಾಡಿದ್ದಾರೆ. ಕಾಂಟ್ರವರ್ಸಿ ಕ್ವೀನ್​ ವಿರುದ್ಧ ಸುಶಾಂತ್​ ಅಭಿಮಾನಿಗಳು ತಿರುಗಿ ಬಿದ್ದಿದ್ದಾರೆ.

ಸುಶಾಂತ್​ ಸಾವಿನ ವಿಚಾರದಲ್ಲಿ ಕಂಗನಾ ರಣಾವತ್​ ಮುಖವಾಡ ಬಯಲು; ತರಾಟೆಗೆ ತೆಗೆದುಕೊಂಡ ನೆಟ್ಟಿಗರು
ಸುಶಾಂತ್​ ಸಿಂಗ್​ ರಜಪೂತ್​ - ಕಂಗನಾ ರಣಾವತ್​

ಇಲ್ಲಸಲ್ಲದ ಎಲ್ಲ ವಿಚಾರಗಳಿಗೆ ತಲೆ ಹಾಕುವುದು ನಟಿ ಕಂಗನಾ ರಣಾವತ್​ ಅವರ ಜಾಯಮಾನ. ಈ ಪ್ರಕ್ರಿಯೆಯಲ್ಲಿ ಅವರು ತಮ್ಮ ಮೇಲೆ ಅನೇಕ ವಿವಾದಗಳನ್ನು ಎಳೆದುಕೊಳ್ಳುತ್ತಾರೆ. ನಟ ಸುಶಾಂತ್​ ಸಿಂಗ್​ ರಜಪೂತ್​​ ನಿಧನರಾದ ಬಳಿಕ ಬಾಲಿವುಡ್​ನ ಅನೇಕರ ಮೇಲೆ ಕಂಗನಾ ಆರೋಪ ಮಾಡಿದ್ದರು. ಈಗ ಅವರು ಮತ್ತೆ ಸುಶಾಂತ್ ಸಾವಿನ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ. ಆದರೆ ಈ ಬಾರಿ ಒಂದು ಎಡವಟ್ಟು ಮಾಡಿಕೊಂಡಿದ್ದಾರೆ. ಅದಕ್ಕಾಗಿ ನೆಟ್ಟಿಗರಿಂದ ತೀವ್ರ ಟೀಕೆಗೆ ಒಳಗಾಗುತ್ತಿದ್ದಾರೆ.

ಸುಶಾಂತ್​ ಅವರದ್ದು ಆತ್ಮಹತ್ಯೆ ಅಲ್ಲ. ಅವರನ್ನು ಪ್ಲ್ಯಾನ್​ ಮಾಡಿ ಕೊಲೆ ಮಾಡಲಾಯಿತು ಎಂದು 2020ರಲ್ಲಿ ಅನೇಕ ಬಾರಿ ಕಂಗನಾ ಹೇಳಿದ್ದರು. ಮಾಧ್ಯಮಗಳ ಮುಂದೆಯೂ ಇದೇ ಹೇಳಿಕೆ ನೀಡಿದ್ದರು. ಆದರೆ ಈಗ ಸುಶಾಂತ್​ ಅವರದ್ದು ಆತ್ಮಹತ್ಯೆ ಎಂಬ ರೀತಿಯಲ್ಲಿ ಟ್ವೀಟ್​ ಮಾಡಿದ್ದಾರೆ. ಅದು ಅನೇಕರ ಕೋಪಕ್ಕೆ ಕಾರಣ ಆಗಿದೆ. ಇತ್ತೀಚೆಗೆ ಕರಣ್​ ಜೋಹರ್​ ಅವರ ಧರ್ಮ ಪ್ರೊಡಕ್ಷನ್ಸ್​ನಿಂದ ಹೊರದಬ್ಬಿಸಿಕೊಂಡ ನಟ ಕಾರ್ತಿಕ್​ ಆರ್ಯನ್​ಗೆ ಸಮಾಧಾನ ಮಾಡುವ ಭರದಲ್ಲಿ ಕಂಗನಾ ಅವರು ಸುಶಾಂತ್​ ಸಾವಿನ ವಿಚಾರವನ್ನು ಎಳೆದು ತಂದಿದ್ದರು.

‘ಕಾರ್ತಿಕ್​ ಸ್ವಂತವಾಗಿ ಇಲ್ಲಿಯವರಗೆ ಬೆಳೆದುಬಂದಿದ್ದಾರೆ. ಅದೇ ರೀತಿ ಅವರು ಮುಂದುವರಿಯಲಿದ್ದಾರೆ. ಕರಣ್​ ಜೋಹರ್​ ಮತ್ತು ಆತನ ನೆಪೋಟಿಸಂ ಗ್ಯಾಂಗ್​ಗೆ ನನ್ನದೊಂದು ಮನವಿ ಏನೆಂದರೆ, ದಯವಿಟ್ಟು ಕಾರ್ತಿಕ್​ರನ್ನು ಬಿಟ್ಟುಬಿಡಿ. ಸುಶಾಂತ್​ ರೀತಿ ಅವರ ಬೆನ್ನುಹತ್ತಬೇಡಿ. ನೇಣು ಹಾಕಿಕೊಳ್ಳುವಂತೆ ಒತ್ತಾಯ ಮಾಡಬೇಡಿ’ ಎಂದು ಕಂಗನಾ ಟ್ವೀಟ್​ ಮಾಡಿದ್ದರು. ಅದೇ ಈಗ ಚೆರ್ಚೆಗೆ ಕಾರಣ ಆಗಿದೆ.

ಕಳೆದ ವರ್ಷ ಸುಶಾಂತ್​ರದ್ದು ಕೊಲೆ ಎಂದು ಹೇಳಿ, ಈಗ ಆತ್ಮಹತ್ಯೆ ಎಂಬರ್ಥದಲ್ಲಿ ಟ್ವೀಟ್​ ಮಾಡಿರುವುದಕ್ಕೆ ಅನೇಕರು ಕಂಗನಾರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರತಿಬಾರಿಯೂ ನಿಮಗೆ ಜನರ ಗಮನ ಸೆಳೆದುಕೊಳ್ಳಲು ಸುಶಾಂತ್​ ಸಿಂಗ್​ ವಿಚಾರವೇ ಬೇಕಾ ಎಂದು ಸುಶಾಂತ್​ ಅಭಿಮಾನಿಗಳು ಕಂಗನಾ ವಿರುದ್ಧ ತಿರುಗಿ ಬಿದ್ದಿದ್ದಾರೆ. ಕಂಗನಾರ ಹಳೇ ಟ್ವೀಟ್​ಗಳ ಸ್ಕ್ರೀನ್​ ಶಾಟ್​ ತೆಗೆದು ಈಗ ಜನರು ಮತ್ತೆ ನೆನಪಿಸುತ್ತಿದ್ದಾರೆ. ಕಂಗನಾ ಮಾತು ಬದಲಿಸಿದ್ದಾರೆ ಎಂಬುದನ್ನು ಈ ಮೂಲಕ ನೆಟ್ಟಿಗರು ಒತ್ತಿಹೇಳುತ್ತಿದ್ದಾರೆ.

ಕಂಗನಾಗೆ ‘ವರ್ಷದ ಬೂಟಾಟಿಕೆ ವ್ಯಕ್ತಿ’ ಎಂದು ಪ್ರಶಸ್ತಿ ನೀಡಬೇಕು. ಅವರಿಗೆ ಮರೆವಿನ ಕಾಯಿಲೆ ಇರಬಹುದು ಎಂದು ಹಲವರು ಕಾಮೆಂಟ್​ ಮಾಡಿದ್ದಾರೆ. ‘ನನಗೆ ನಿಜಕ್ಕೂ ನಿರಾಸೆ ಆಗಿದೆ. ಸುಶಾಂತ್​ ಆತ್ಮಹತ್ಯೆ ಮಾಡಿಕೊಂಡಿಲ್ಲ. ನಿಮ್ಮ ಮಾತುಗಳನ್ನು ವಾಪಸ್​ ತೆಗೆದುಕೊಳ್ಳಿ. 10 ತಿಂಗಳಿಂದ ನಾವು ಸುಶಾಂತ್​ ಸಾವಿಗೆ ನ್ಯಾಯ ಕೊಡಿಸಲು ಹೋರಾಡುತ್ತಿರುವುದು ನಿಮಗೆ ಕಾಣುತ್ತಿಲ್ಲವೇ? ನೀವು ಸರಿಯಾಗಿದ್ದಾಗ ನಿಮ್ಮನ್ನು ಬೆಂಬಲಿಸಿದ್ದೇನೆ. ಆದರೆ ಈಗ ನೀವು ತಪ್ಪು ಮಾಡಿದ್ದೀರಿ’ ಎಂದು ಸುಶಾಂತ್​ ಅಭಿಮಾನಿಯೊಬ್ಬರು ಛಾಟಿ ಬೀಸಿದ್ದಾರೆ.

ಇದನ್ನೂ ಓದಿ: ಕಂಗನಾ ರಣಾವತ್​-ತಾಪ್ಸೀ ಪನ್ನು ಈಗ ಫ್ರೆಂಡ್ಸ್​! ಜಗಳ ಅಂತ್ಯ ಆಗಿದ್ದಕ್ಕೆ ಕಾರಣ ಏನು?

ದೊಡ್ಡ ಹೀರೋಗಳು ತಲೆಮರೆಸಿಕೊಂಡಿದ್ದಾರೆ, ಬಾಲಿವುಡ್​ ಉಳಿಯೋದು ನನ್ನಿಂದಲೇ: ಕಂಗನಾ

Click on your DTH Provider to Add TV9 Kannada