Narmadaben Modi: ಪ್ರಧಾನಿ ನರೇಂದ್ರ ಮೋದಿ ಚಿಕ್ಕಮ್ಮ ಕೊರೊನಾ ಸೋಂಕಿನಿಂದ ಸಾವು

Covid 19 : ನಮ್ಮ ಚಿಕ್ಕಮ್ಮನನ್ನು ಕಳೆದ 10 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿಯವರ ಕಿರಿಯ ಸಹೋದರ ಪ್ರಹ್ಲಾದ ಮೋದಿ ತಿಳಿಸಿದ್ದಾರೆ.

Narmadaben Modi: ಪ್ರಧಾನಿ ನರೇಂದ್ರ ಮೋದಿ ಚಿಕ್ಕಮ್ಮ ಕೊರೊನಾ ಸೋಂಕಿನಿಂದ ಸಾವು
ನರೇಂದ್ರ ಮೋದಿ
guruganesh bhat

|

Apr 27, 2021 | 8:22 PM

ಅಹಮದಾಬಾದ್: ಕೊರೊನಾ ಸೋಂಕಿಗೆ ತುತ್ತಾಗಿದ್ದ ಪ್ರಧಾನಿ ನರೇಂದ್ರ ಮೋದಿಯವರ ಚಿಕ್ಕಮ್ಮ ನರ್ಮದಾಬೆನ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. 80 ವರ್ಷದ ಅವರು ಗುಜರಾತ್​ನ‌ ಅಹಮದಾಬಾದ್​ನ ಸಿವಿಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅಹಮದಾಬಾದ್​​ನ ರಾಣಿಪ್ ಪ್ರದೇಶದಲ್ಲಿ ತಮ್ಮ ಮಕ್ಕಳೊಡನೆ ವಾಸವಾಗಿದ್ದ ಅವರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ನಮ್ಮ ಚಿಕ್ಕಮ್ಮನನ್ನು ಕಳೆದ 10 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿಯವರ ಕಿರಿಯ ಸಹೋದರ ಪ್ರಹ್ಲಾದ ಮೋದಿ ತಿಳಿಸಿದ್ದಾರೆ. ನರ್ಮದಾಬೆನ್ ಅವರ ಪತಿ ಜಗಜೀವನ್​ದಾಸ್ ಅವರು ಪ್ರಧಾನಿ ನರೇಂದ್ರ ಮೋದಿಯವರ ತಂದೆಯ ಸಹೋದರರಾಗಿದ್ದರು ಎಂದು ಪಿಟಿಐ ವರದಿ ಮಾಡಿದೆ.

ಗುಜರಾತ್​ನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ನಿನ್ನೆಯ (ಏಪ್ರಿಲ್ 26) ವರದಿಯಂತೆ 14,430 ಹೊಸ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಈಮೂಲಕ ಗುಜರಾತ್​ನಲ್ಲಿ ಒಟ್ಟು  5,10,376 ಕೊರೊನಾ ಪ್ರಕರಣಗಳು ದಾಖಲಾದಂತಾಗಿವೆ. ನಿನ್ನೆ ಒಂದೇ ದಿನ 158 ಜನರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದು, 6,486 ಜನರು ಗುಜರಾತ್​ನಲ್ಲಿ ಈವರೆಗೆ ಕೊರೊನಾಗೆ ಬಲಿಯಾಗಿದ್ದಾರೆ. ನಿನ್ನೆಯ ವರದಿಯಂತೆ ಗುಜರಾತ್​ನಲ್ಲಿ 1,21,461 ಸಕ್ರಿಯ ಕೊರೊನಾ ಪ್ರಕರಣಗಳಿವೆ.

ಇದನ್ನೂ ಓದಿ: Covid-19 Karnataka Update: ಕರ್ನಾಟಕದಲ್ಲಿ ಇಂದು 31,830 ಮಂದಿಗೆ ಕೊರೊನಾ ಸೋಂಕು, 180 ಸಾವು

Explainer: 18ರಿಂದ 45 ವಯೋಮಾನದವರಿಗೆ ಕೋವಿಡ್ ಲಸಿಕೆ; ನೋಂದಣಿ ಹೇಗೆ? ಪಡೆದುಕೊಳ್ಳುವುದು ಎಲ್ಲಿ? ಡೇಟ್ ಮಿಸ್ ಆದ್ರೆ ಏನು ಮಾಡಬೇಕು?

( Prime Ministe Narendra modis aunt NarmadaBen died by Covid 19 in gujarat hospital)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada