
ದೆಹಲಿ: ಕಾಂಗ್ರೆಸ್ ಪಕ್ಷದ ಸ್ಟಾರ್ ಪ್ರಚಾರಕರಾಗಿ ಮಿಂಚಿದ್ದ ನಟಿ ಖುಷ್ಬೂ ಇದೀಗ ಪಕ್ಷಕ್ಕೆ ಗುಡ್ ಬೈ ಹೇಳಿ ಕಮಲ ಪಾಳಯದತ್ತ ಮುಖಮಾಡಿದ್ದಾರೆ. ಖುಷ್ಬೂ ಇಂದು ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ.
ಕಲವೇ ಕ್ಷಣಗಳಲ್ಲಿ ಪಸರಿಸಲಿದೆ ಕಮಲದ ಖುಷ್ಬೂ..
ಕಮಲ ಪಕ್ಷಕ್ಕೆ ಸೇರುವ ಹಿನ್ನೆಲೆಯಲ್ಲಿ ಖುಷ್ಬೂ ನಿನ್ನೆ ರಾತ್ರಿಯೇ ಚನ್ನೈನಿಂದ ದೆಹಲಿಗೆ ಆಗಮಿಸಿರೋ ಮಾಹಿತಿ ಸಿಕ್ಕಿದೆ. ಕಾಂಗ್ರೆಸ್ ತೊರೆಯುತ್ತಿರುವ ಹಿನ್ನೆಲೆಯಲ್ಲಿ ನಟಿ ಪಕ್ಷಕ್ಕೆ ತಮ್ಮ ರಾಜೀನಾಮೆ ಪತ್ರವನ್ನು AICC ಅಧ್ಯಕ್ಷೆ ಸೋನಿಯಾ ಗಾಂಧಿಗೆ ರವಾನಿಸಿದ್ದಾರೆ.
ಸಾಮಾನ್ಯ ಜನನೊಂದಿಗೆ ಸಂಪರ್ಕ ಇಲ್ಲದವರು ಹಾಗೂ ವಾಸ್ತವಿಕತೆಯ ಅರಿವೇ ಇಲ್ಲದವರು ನಮ್ಮ ಮೇಲೆ ಹಕ್ಕು ಚಲಾಯಿಸುತ್ತಿದ್ದು ನಮ್ಮಂಥವರನ್ನು ದಮನಿಸಲು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ತಮ್ಮ ಪತ್ರದಲ್ಲಿ ಖುಷ್ಬೂ ಉಲ್ಲೇಖಿಸಿದ್ದಾರೆ.
ಇನ್ನು ಖುಷ್ಬೂ ಪಕ್ಷ ತೊರೆದ ಬೆನ್ನಲ್ಲೇ ನಟಿಯನ್ನು AICC ವಕ್ತಾರ ಸ್ಥಾನಮಾನದಿಂದ ಕೂಡಲೇ ವಜಾಗೊಳಿಸಲಾಗಿದೆ ಎಂದು ಪಕ್ಷ ತಿಳಿಸಿದೆ.