Adani Row: ಹಿಂಡೆನ್‌ಬರ್ಗ್ ವರದಿ ಕುರಿತು ತನಿಖೆಗೆ ಸುಪ್ರೀಂ ಆದೇಶ: ನಿವೃತ್ತ ನ್ಯಾ.ಎ.ಎಂ.ಸಪ್ರೆ ನೇತೃತ್ವದ ತಜ್ಞರ ಸಮಿತಿ ರಚನೆ

|

Updated on: Mar 02, 2023 | 11:32 AM

ಗೌತಮ್ ಅದಾನಿ (Gautham Adani) ವಿರುದ್ಧ ಬಿಡುಗಡೆ ಮಾಡಲಾಗಿದ್ದ ಹಿಂಡೆನ್‌ಬರ್ಗ್ ವರದಿಯ ಕುರಿತು ತನಿಖೆಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಇದರ ಜೊತೆಗೆ ಸಮಿತಿಯನ್ನು ಕೂಡ ರಚನೆ ಮಾಡಲಾಗಿದೆ.  ಈ ತನಿಖೆ ಸಮಿತಿಯ ನೇತೃತ್ವವನ್ನು  ನಿವೃತ್ತ ನ್ಯಾಯಾಧೀಶ ಎ.ಎಮ್ ಸಪ್ರೆ  ವಹಿಸಲಿದ್ದಾರೆ ಎಂದು ಸುಪ್ರೀಂ ಹೇಳಿದೆ.

Adani Row: ಹಿಂಡೆನ್‌ಬರ್ಗ್ ವರದಿ ಕುರಿತು ತನಿಖೆಗೆ ಸುಪ್ರೀಂ ಆದೇಶ: ನಿವೃತ್ತ ನ್ಯಾ.ಎ.ಎಂ.ಸಪ್ರೆ ನೇತೃತ್ವದ ತಜ್ಞರ ಸಮಿತಿ ರಚನೆ
ಗೌತಮ್ ಅದಾನಿ
Follow us on

ದೆಹಲಿ: ಗೌತಮ್ ಅದಾನಿ (Gautham Adani) ವಿರುದ್ಧ ಬಿಡುಗಡೆ ಮಾಡಲಾಗಿದ್ದ ಹಿಂಡೆನ್‌ಬರ್ಗ್ ವರದಿಯ ಕುರಿತು ತನಿಖೆಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಇದರ ಜೊತೆಗೆ ಸಮಿತಿಯನ್ನು ಕೂಡ ರಚನೆ ಮಾಡಲಾಗಿದೆ.  ಈ ತನಿಖೆ ಸಮಿತಿಯ ನೇತೃತ್ವವನ್ನು  ನಿವೃತ್ತ ನ್ಯಾಯಾಧೀಶ ಎ.ಎಮ್ ಸಪ್ರೆ  ವಹಿಸಲಿದ್ದಾರೆ ಎಂದು ಸುಪ್ರೀಂ ಹೇಳಿದೆ. ನಿವೃತ್ತ ನ್ಯಾಯಮೂರ್ತಿ ಅಭಯ್ ಮನೋಹರ್ ಸಪ್ರೆ ನೇತೃತ್ವದ ಸಮಿತಿಯು ಹಿರಿಯ ಬ್ಯಾಂಕರ್‌ಗಳಾದ ಕೆವಿ ಕಾಮತ್ ಮತ್ತು ಒಪಿ ಭಟ್, ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿ, ಒಪಿ ಭಟ್ ಮತ್ತು ನಿವೃತ್ತ ನ್ಯಾಯಮೂರ್ತಿ ಜೆಪಿ ದೇವಧರ್ ಅವರನ್ನು ಒಳಗೊಂಡಿರುತ್ತದೆ.

ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಈ ಸಮಿತಿಯು ತನಿಖೆಯ ವರದಿಯನ್ನು ಎರಡು ತಿಂಗಳಲ್ಲಿ ಪೂರ್ಣಗೊಳಿಸಬೇಕು ಮತ್ತು ವರದಿಯನ್ನು ಸಲ್ಲಿಸಬೇಕು ಎಂದು ಹೇಳಿದರು. ತಜ್ಞರ ಸಮಿತಿಯು ಕಾನೂನು ಚೌಕಟ್ಟುಗಳನ್ನು ಬಲಪಡಿಸುವ ಕ್ರಮಗಳನ್ನು ಸೂಚಿಸುತ್ತದೆ, ಅದಾನಿ ಸಾಲದ ಬಗ್ಗೆಯು ಕೂಡ ತನಿಖೆ ಮಾಡುತ್ತದೆ ಮತ್ತು ಶಾಸನಬದ್ಧ ಚೌಕಟ್ಟಯೊಳಗೆ ಕ್ರಮಗಳನ್ನು ಸೂಚಿಸುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Adani Row: ಅದಾನಿಯಿಂದ ಭಾರತದ ಹೂಡಿಕೆಗೆ ಘಾಸಿ ಎಂದಿದ್ದ ಜಾರ್ಜ್​ ಸೊರಸ್​ಗೆ ಖಡಕ್ ಉತ್ತರ ಕೊಟ್ಟ ಸಚಿವೆ ಸ್ಮೃತಿ ಇರಾನಿ

ಹೂಡಿಕೆದಾರರನ್ನು ರಕ್ಷಿಸಲು ನಿಯಂತ್ರಕ ಕಾರ್ಯವಿಧಾನಗಳನ್ನು ಕೇಳುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ನಿಯಮಗಳ ಉಲ್ಲಂಘನೆಯಾಗಿದೆಯೇ ಮತ್ತು ಷೇರುಗಳ ಬೆಲೆಯಲ್ಲಿ ಯಾವುದೇ ಮೋಸ ನಡೆದಿದೆಯೇ ಎಂದು ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ಸೆಬಿಗೆ ಸೂಚಿಸಿದೆ.

Published On - 11:01 am, Thu, 2 March 23