ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮಹತ್ವಾಕಾಂಕ್ಷಿ ಬಾಹ್ಯಾಕಾಶ ನೌಕೆ ಆದಿತ್ಯ ಎಲ್ 1 ಭಾನುವಾರ ಮೊದಲ ಕಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ತನ್ನ ಮೊದಲ ಸೌರ ಅನ್ವೇಷಣೆಯನ್ನು ಪೂರ್ಣಗೊಳಿಸಲು ಮತ್ತೊಂದು ಹೆಜ್ಜೆಯನ್ನು ಮುಂದಿರಿಸಿದೆ.
ಪಿಎಸ್‌ಎಲ್‌ವಿ-ಸಿ57 ಉಡಾವಣಾ ವಾಹನದ ಮೂಲಕ ಆದಿತ್ಯ-ಎಲ್1 ಉಡಾವಣೆ ಶನಿವಾರ ಇಸ್ರೋದಿಂದ ಯಶಸ್ವಿಯಾಗಿ ನೆರವೇರಿತು.
ಆದಿತ್ಯ ಎಲ್ 1 ಉಪಗ್ರಹ ಆರೋಗ್ಯಕರವಾಗಿ ಕಾರ್ಯನಿರ್ವಹಿಸುತ್ತಿದೆ ಹೊಸ ಕಕ್ಷೆಯು 245 ಕಿಮೀ x 22459 ಕಿಮೀ ತಲುಪಿದೆ. ಸೆಪ್ಟೆಂಬರ್ 5ರಂದು ಮತ್ತೊಂದು ಹೆಜ್ಜೆ ಇಡಲಿದೆ. ವಾಹನವು ಈಗಾಗಲೇ ಉಪಗ್ರಹವನ್ನು ನಿಖರವಾಗಿ ಅದರ ಉದ್ದೇಶಿತ ಕಕ್ಷೆಗೆ ಇರಿಸಿದೆ.
ಅಲ್ಲಿಂದ ಅದು 125-ದಿನಗಳ ಪ್ರಯಾಣದಲ್ಲಿ ತನ್ನ ಗಮ್ಯಸ್ಥಾನವಾದ ಸೂರ್ಯ-ಭೂಮಿಯ L1 ಪಾಯಿಂಟ್‌ನ ಕಡೆಗೆ ತನ್ನ ಪ್ರಯಾಣವನ್ನು ಮುಂದುವರೆಸುತ್ತದೆ.
ಬಾಹ್ಯಾಕಾಶ ನೌಕೆಯನ್ನು ಅಂತಿಮವಾಗಿ ಸೂರ್ಯ-ಭೂಮಿಯ ವ್ಯವಸ್ಥೆಯ ಲ್ಯಾಗ್ರೇಂಜ್ ಪಾಯಿಂಟ್ 1 (L1) ಸುತ್ತ ಹಾಲೋ ಕಕ್ಷೆಯಲ್ಲಿ ಇರಿಸಲಾಗುತ್ತದೆ. ಇನ್ನು ಆದಿತ್ಯ ಎಲ್1 ನೌಕೆಯು ಅಂಡಾಕಾರದ ಕಕ್ಷೆಯಲ್ಲಿ ಸೂರ್ಯನತ್ತ ಸಾಗುತ್ತದೆ, ಅಂತಿಮವಾಗಿ ಅದನ್ನು ಸೂರ್ಯ-ಭೂ ಮಂಡಲದ ಲಗ್ರಾಂಜ್ ಬಿಂದು 1ಸುತ್ತಲಿನ ಕಕ್ಷೆಗೆ ಸೇರಿಸಲಾಗುತ್ತದೆ.
ಮತ್ತಷ್ಟು ಓದಿ: ಸನ್ ಮಿಷನ್: ಇಂದು ಮೊದಲ ಕಕ್ಷೆ ಬದಲಿಸಲಿದೆ ಆದಿತ್ಯ ಎಲ್1
ಈ ಲಗ್ರಾಂಜ್ ಬಿಂದು 1 ಭೂಮಿಯಿಂದ ಸುಮಾರು 15 ಲಕ್ಷ ಕಿ.ಮೀ ದೂರದಲ್ಲಿದೆ. ಅಲ್ಲಿಗೆ ತಲುಪಲು ಎಲ್1 125 ದಿನಗಳನ್ನು ತೆಗೆದುಕೊಳ್ಳುತ್ತದೆ.
ಸೌರ ಯೋಜನೆಯ ಉದ್ದೇಶವೇನು?
ಆದಿತ್ಯ ಎಲ್1 ಯೋಜನೆಯ ಮುಖ್ಯ ಉದ್ದೇಶವೆಂದರೆ ಕೊರೊನಾ(ಸೂರ್ಯನ ವಾತಾವರಣದ ಅತ್ಯಂತ ಹೊರಗಿನ ಭಾಗ) ಬಿಸಿಯಾಗುವ ಪ್ರಕ್ರಿಯೆ ಹಾಗೂ ಸೌರ ಗಾಳಿಯ ಹೆಚ್ಚಳವನ್ನು ಅರ್ಥ ಮಾಡಿಕೊಳ್ಳುವುದು, ಕೊರೊನಾ ಮಾಸ್ ಇಜೆಕ್ಷನ್, ಜ್ವಾಲೆಗಳು ಹಾಗೂ ಭೂಮಿಯ ಸಮೀಪದ ಹವಾಮಾನವನ್ನು ಅರ್ಥಮಾಡಿಕೊಳ್ಳುವುದು ಮುಖ್ಯ ಉದ್ದೇಶವಾಗಿದೆ.
Aditya-L1 Mission:
The satellite is healthy and operating nominally.The first Earth-bound maneuvre (EBN#1) is performed successfully from ISTRAC, Bengaluru. The new orbit attained is 245km x 22459 km.
The next maneuvre (EBN#2) is scheduled for September 5, 2023, around 03:00… pic.twitter.com/sYxFzJF5Oq
— ISRO (@isro) September 3, 2023
ಆದಿತ್ಯ ಎಲ್1ನಲ್ಲಿ 7 ಸಲಕರಣೆಗಳಿವೆ, ಅವುಗಳ ಪೈಕಿ ನಾಲ್ಕು ಸಲಕರಣೆಗಳು ಸೂರ್ಯನಿಂದ ಬರುವ ಬೆಳಕಿನ ಮೇಲೆ ನಿಗಾ ಇಟ್ಟರೆ , ಇತರೆ ಮೂರು ಸಲಕರಣೆಗಳು ಪ್ಲಾಸ್ಮಾ ಹಾಗೂ ಕಾಂತೀಯ ಕ್ಷೇತ್ರಗಳ ಕುರಿತು ಅಧ್ಯಯನ ಮಾಡಲಿವೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ