ತಾಲಿಬಾನ್ ಸಚಿವರ ಸುದ್ದಿಗೋಷ್ಠಿಯಲ್ಲಿ ಮಹಿಳಾ ಪತ್ರಕರ್ತರಿಗಿರಲಿಲ್ಲ ಅವಕಾಶ, ಭಾರತಕ್ಕೆ ಬಂದು ಅಫ್ಘಾನ್ ಕಾನೂನು ಹೇರಲು ಮುತ್ತಖಿ ಯಾರು?

ಭಾರತಕ್ಕೆ ಮೊದಲ ಬಾರಿಗೆ ಭೇಟಿ ನೀಡಿರುವ ತಾಲಿಬಾನ್(Taliban) ವಿದೇಶಾಂಗ ಸಚಿವ ಆಮೀರ್ ಖಾನ್ ಮುತ್ತಖಿ, ಭಾರತವನ್ನು ಅಫ್ಘಾನಿಸ್ತಾನದಂತೆ ನಡೆಸಿಕೊಂಡಿದ್ದಾರೆ. ಅವರು ದೆಹಲಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಪತ್ರಕರ್ತರಿಗೆ ಪಾಲ್ಗೊಳ್ಳಲು ಅವಕಾಶವನ್ನೇ ನೀಡಿರಲಿಲ್ಲ. ಭಾರತಕ್ಕೆ ಬಂದು ಅಫ್ಘಾನ್ ಕಾನೂನು ಹೇರಲು ಮುತ್ತಖಿ ಯಾರು ಜನ ಪ್ರಶ್ನೆ ಮಾಡುತ್ತಿದ್ದಾರೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಪ್ರಯಾಣ ವಿನಾಯಿತಿ ನೀಡಿದ ನಂತರ ಅಮೀರ್ ಖಾನ್ ಮುತ್ತಾಕಿ ಅವರ ಪ್ರವಾಸ ಸಾಧ್ಯವಾಗಿದೆ.

ತಾಲಿಬಾನ್ ಸಚಿವರ ಸುದ್ದಿಗೋಷ್ಠಿಯಲ್ಲಿ ಮಹಿಳಾ ಪತ್ರಕರ್ತರಿಗಿರಲಿಲ್ಲ ಅವಕಾಶ, ಭಾರತಕ್ಕೆ ಬಂದು ಅಫ್ಘಾನ್ ಕಾನೂನು ಹೇರಲು ಮುತ್ತಖಿ ಯಾರು?
ಮುತ್ತಖಿ

Updated on: Oct 11, 2025 | 9:51 AM

ನವದೆಹಲಿ, ಅಕ್ಟೋಬರ್ 11: ಭಾರತಕ್ಕೆ ಮೊದಲ ಬಾರಿಗೆ ಭೇಟಿ ನೀಡಿರುವ ತಾಲಿಬಾನ್(Taliban) ವಿದೇಶಾಂಗ ಸಚಿವ ಆಮೀರ್ ಖಾನ್ ಮುತ್ತಖಿ, ಭಾರತವನ್ನು ಅಫ್ಘಾನಿಸ್ತಾನದಂತೆ ನಡೆಸಿಕೊಂಡಿದ್ದಾರೆ. ಅವರು ದೆಹಲಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಪತ್ರಕರ್ತರಿಗೆ ಪಾಲ್ಗೊಳ್ಳಲು ಅವಕಾಶವನ್ನೇ ನೀಡಿರಲಿಲ್ಲ. ಭಾರತಕ್ಕೆ ಬಂದು ಅಫ್ಘಾನ್ ಕಾನೂನು ಹೇರಲು ಮುತ್ತಖಿ ಯಾರು ಜನ ಪ್ರಶ್ನೆ ಮಾಡುತ್ತಿದ್ದಾರೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಪ್ರಯಾಣ ವಿನಾಯಿತಿ ನೀಡಿದ ನಂತರ ಅಮೀರ್ ಖಾನ್ ಮುತ್ತಾಕಿ ಅವರ ಪ್ರವಾಸ ಸಾಧ್ಯವಾಗಿದೆ. ಇದು 2021 ರಲ್ಲಿ ಅಮೆರಿಕ ತನ್ನ ನೇತೃತ್ವದ ಪಡೆಗಳನ್ನು ಹಿಂತೆಗೆದುಕೊಂಡ ಬೆನ್ನಲ್ಲೆ ಅಧಿಕಾರಕ್ಕೆ ಮರಳಿದ ನಂತರ ಉನ್ನತ ತಾಲಿಬಾನ್ ನಾಯಕರೊಬ್ಬರು ಭಾರತಕ್ಕೆ ನೀಡಿದ ಮೊದಲ ಭೇಟಿಯಾಗಿದೆ.

ಮಹಿಳಾ ಪತ್ರಕರ್ತರು ಸೇರಿದಂತೆ ಹಲವಾರು ನಾಯಕರು ಈ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ನಮ್ಮ ದೇಶದ ಮೇಲೆ, ವಿಶೇಷವಾಗಿ ನಮ್ಮ ಸ್ವಂತ ನೆಲದಲ್ಲಿ ತನ್ನ ಷರತ್ತುಗಳನ್ನು ಹೇರಲು ಮುತ್ತಖಿ ಯಾರು ಎಂದು ಕೇಳಲಾಗುತ್ತಿದೆ.

ಮತ್ತಷ್ಟು ಒದಿ: ಇತ್ತ ಭಾರತಕ್ಕೆ ತಾಲಿಬಾನ್ ಸಚಿವರ ಭೇಟಿ, ಅತ್ತ ಅಫ್ಘಾನಿಸ್ತಾನದ ಮೇಲೆ ಪಾಕ್​ ವೈಮಾನಿಕ ದಾಳಿ

ಅಕ್ಟೋಬರ್ 10, ಶುಕ್ರವಾರ, ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ತಾಲಿಬಾನ್ ಸರ್ಕಾರದ ವಿದೇಶಾಂಗ ಸಚಿವ ಆಮೀರ್ ಖಾನ್ ಮುತ್ತಖಿ ಅವರನ್ನು ಭೇಟಿಯಾದರು.
ಹಲವಾರು ಪ್ರಮುಖ ಘೋಷಣೆಗಳನ್ನು ಮಾಡಲಾಯಿತು, ನಂತರ ಆಮೀರ್ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಮಧ್ಯಾಹ್ನ ಅಫ್ಘಾನ್ ರಾಯಭಾರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಹಿಳೆಯರಿಗೆ ಭಾಗವಹಿಸುವುದನ್ನು ನಿಷೇಧಿಸಲಾಯಿತು. ಮತ್ತೊಂದು ದೇಶದ ನಾಯಕನೊಬ್ಬ ನವದೆಹಲಿಯಲ್ಲಿ ಅಧಿಕೃತ ಮಾಧ್ಯಮಗೋಷ್ಠಿ ನಡೆಸಿ ಮಹಿಳಾ ಪತ್ರಕರ್ತರನ್ನು ಹೊರಗಿಡುವುದು ಅಸಾಮಾನ್ಯ ಎಂದು ಭಾರತ ಹೇಳಿದೆ. ಆದಾಗ್ಯೂ, ಮುತ್ತಖಿಯ ಸುದ್ದಿಗೋಷ್ಠಿಗೆ ಮಹಿಳಾ ಪತ್ರಕರ್ತರನ್ನು ಸೇರಿಸಿಕೊಳ್ಳುವುದಿಲ್ಲ ಎಂದು ತಾಲಿಬಾನ್ ಕಡೆಯವರು ಭಾರತೀಯ ಅಧಿಕಾರಿಗಳಿಗೆ ಔಪಚಾರಿಕವಾಗಿ ತಿಳಿಸಿದ್ದಾರೆಯೇ ಎಂಬುದು ತಿಳಿದಿಲ್ಲ.

ಅನೇಕ ಪತ್ರಕರ್ತರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದು, ಪುರುಷ ಪತ್ರಕರ್ತರು ಸುದ್ದಿಗೋಷ್ಠಿಯಿಂದ ಹೊರನಡೆಯಬೇಕಿತ್ತು ಎಂದಿದ್ದಾರೆ. ಭಾರತ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಳ್ವಿಕೆಯನ್ನು ಗುರುತಿಸದ ಕಾರಣ, ತಾಲಿಬಾನ್ ಧ್ವಜಕ್ಕೂ ಅಧಿಕೃತ ಸ್ಥಾನಮಾನ ನೀಡಿಲ್ಲ. ಇಲ್ಲಿಯವರೆಗೆ, ನವದೆಹಲಿಯಲ್ಲಿರುವ ಅಫ್ಘಾನ್ ರಾಯಭಾರ ಕಚೇರಿಯಲ್ಲಿ, ತಾಲಿಬಾನ್ ನ ಅಧಿಕೃತ ಧ್ವಜವಾಗಿರುವ ಇಸ್ಲಾಮಿಕ್ ನಂಬಿಕೆಯ ಶಹಾದಾ ಘೋಷಣೆಯ ಕಪ್ಪು ಪದಗಳನ್ನು ಹೊಂದಿರುವ ಸಾದಾ ಬಿಳಿ ಬಟ್ಟೆಯ ಧ್ವಜವನ್ನು ಹಾರಿಸುವುದಕ್ಕೆ ನವದೆಹಲಿ ಅನುಮತಿಸಿಲ್ಲ.

ರಾಯಭಾರ ಕಚೇರಿ ಇನ್ನೂ ಅಫ್ಘಾನಿಸ್ತಾನದ ಇಸ್ಲಾಮಿಕ್ ಗಣರಾಜ್ಯದ ಹಳೆಯ ಧ್ವಜವನ್ನು ಹಾರಿಸುತ್ತದೆ. ಅದು ಪದಚ್ಯುತಗೊಂಡ ಅಧ್ಯಕ್ಷ ಅಶ್ರಫ್ ಘನಿ ಅವರ ಆಡಳಿತಾವಧಿಯಲ್ಲಿ ಅಧಿಕೃತವಾಗಿತ್ತು.

ತಾಲಿಬಾನ್ ಸರ್ಕಾರ ಅಫ್ಘಾನಿಸ್ತಾನದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಹೆಣ್ಣುಮಕ್ಕಳ ವಿರುದ್ಧವಾಗಿ ಸಾಕಷ್ಟು ಕಾನೂನುಗಳನ್ನು ಇವರು ಜಾರಿಗೆ ತಂದಿದ್ದಾರೆ. ಹೆಣ್ಣುಮಕ್ಕಳ ಶಿಕ್ಷಣ ಮೊಟಕುಗೊಳಿಸುವುದರಿಂದ ಹಿಡಿದು, ಉದ್ಯಾನಕ್ಕೆ ಹೋಗುವುದನ್ನೂ ನಿಷೇಧಿಸಿದ್ದಾರೆ. ಬ್ಯೂಟಿ ಪಾರ್ಲರ್​ಗೆ ಹೋಗುವಂತಿಲ್ಲ, ಶಾಲೆಗಳಲ್ಲಿ ಹೆಣ್ಣುಮಕ್ಕಳು, ಗಂಡು ಮಕ್ಕಳ ಪ್ರತ್ಯೇಕವಾಗಿ ಕೂಡಬೇಕು, ಹೆಣ್ಣುಮಕ್ಕಳು ಕೆಲಸ ಮಾಡುವಂತಿಲ್ಲ ಹೀಗೆ ಹತ್ತು ಹಲವು ಷರತ್ತುಗಳನ್ನು ವಿಧಿಸಿದ್ದಾರೆ. ಇದೀಗ ಭಾರತಕ್ಕೆ ಬಂದಿ ಇಲ್ಲಿನ ಹೆಣ್ಣುಮಕ್ಕಳಿಗೆ ನಿಷೇಧ ಹೇರಿರುವುದಕ್ಕೆ ಆಕ್ರೋಶ ಭುಗಿಲೆದ್ದಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ