ಜೈಪುರ: ಪಂಚತಾರಾ ಹೋಟೆಲ್ ನಲ್ಲಿ ತಂಗಿದ್ದ ವಿದೇಶಿ ಮಹಿಳೆಯೊಬ್ಬರು ಬೆತ್ತಲೆಯಾಗಿ ರೂಮಿನಿಂದ ಹೊರಬಂದು ದೊಡ್ಡ ಹೈಡ್ರಾಮವೇ ಮಾಡಿದ್ದಾಳೆ. ಅಲ್ಲದೇ ಹೋಟೆಲ್ ಸಿಬ್ಬಂದಿ ಮೇಲೆ ಮನಬಂದಂತೆ ಹಲ್ಲೆ ಮಾಡಿ ಮಾಡಿದ್ದಾಳೆ. ರಾಜಸ್ಥಾನ ರಾಜಧಾನಿ ಜೈಪುರದ ಫೈವ್ ಸ್ಟಾರ್ ಹೋಟೆಲ್ನಲ್ಲಿ ನಡೆದಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಮಹಿಳೆ ವಿರುದ್ಧ ಕಿಡಿಕಾರಿದ್ದಾರೆ.
ಭಾರತಕ್ಕೆ ಪ್ರವಾಸಕ್ಕಾಗಿ ಬಂದಿದ್ದ ವಿದೇಶಿ ಮಹಿಳೆ ಒಬ್ಬರು ಅಲ್ಲಿನ ಪಂಚತಾರಾ ಹೋಟೆಲ್ ನಲ್ಲಿ ತಂಗಿದ್ದರು. ಏಕಾಏಕಿ ರೂಮಿನಿಂದ ಬೆತ್ತಲೆಯಾಗಿ ಬಂದ ಮಹಿಳೆ, ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲ ಗಲಾಟೆ ಬಿಡಿಸಲು ಬಂದ ಮಹಿಳಾ ಸಿಬ್ಬಂದಿಯೊಬ್ಬರ ಕೂದಲು ಹಿಡಿದು ಎಳೆದಾಡಿದ್ದಾರೆ.
ದೃಶ್ಯದಲ್ಲಿ ನೋಡಿದ ಪ್ರಕಾರ, ಕೂಗಾಡುತ್ತಲೇ ಕೋಣೆಯಿಂದ ಬೆತ್ತಲಾಗಿ ಹೊರಬಂದ ಮಹಿಳೆ ಹೋಟೆಲ್ ಸಿಬ್ಬಂದಿಯನ್ನು ಬಾಯಿಗೆ ಬಂದಂತೆ ಬೈದು ಕೂಗಾಡಿದ್ದಾಳೆ. ಅಲ್ಲದೇ ಹೋಟೆಲ್ ಸಿಬ್ಬಂದಿ ಮೇಲೂ ಹಲ್ಲೆಗೆ ಮುಂದಾಗಿರುವುದು ವೈರಲ್ ಆಗಿರುವ ವಿಡಿಯೋನಲ್ಲಿ ಕಾಣಬಹುದು.
ಆದ್ರೆ, ಈ ವಿದೇಶಿ ಮಹಿಳೆ ಹೋಟೆಲ್ ರೂಮಿನಿಂದ ಬೆತ್ತಲೆಯಾಗಿ ಆಚೆ ಬಂದು ಯಾವ ಕಾರಣಕ್ಕೆ ಈ ರೀತಿ ರಂಪಾಟ ಮಾಡಿದ್ದಾರೆ ಎನ್ನುವುದು ತಿಳಿದುಬಂದಿಲ್ಲ. ಆದರೆ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಒಬ್ಬರು, ಕೂಡಲೇ ಆಕೆಯನ್ನು ದೇಶದಿಂದ ವಾಪಸ್ ಕಳುಹಿಸಿ. ಪಾಸ್‌ಪೋರ್ಟ್ ಬ್ಲಾಕ್ ಲಿಸ್ಟ್ಗೆ ಸೇರಿಸಿ ಎಂದಿದ್ದರೆ, ಮತ್ತೊಬ್ಬರು ಭಾರತದ ಕಾನೂನಿನ ಪ್ರಕಾರ ಆಕೆಗೆ ಶಿಕ್ಷೆ ವಿಧಿಸಬೇಕು ಎಂದು ಹೇಳಿದ್ದಾರೆ.
Viral Video from a 5 Star Hotel in Jaipur, Rajasthan.
African WOMAN getting naked and fighting with the hotel staff!! pic.twitter.com/a5Hhu2w9qH
— Barkha Trehan ?? / बरखा त्रेहन (@barkhatrehan16) December 17, 2022
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 5:20 pm, Sun, 18 December 22