ಮೋದಿ ಇದ್ದರೆ ಎಲ್ಲವೂ ಸಾಧ್ಯ, ಪ್ರಧಾನಿಯ ಹೊಗಳಿದ ಜೆಡಿಯು ನಾಯಕ

|

Updated on: Dec 05, 2023 | 11:33 AM

ಮೋದಿ ಇದ್ದರೆ ಎಲ್ಲವೂ ಸಾಧ್ಯ ಎಂದು ನಿತೀಶ್​ ಕುಮಾರ್(Nitish Kumar) ಅವರ ಜೆಡಿಯು ಪಕ್ಷದ ಮುಖಂಡರೊಬ್ಬರು ಹೇಳಿಕೆ ನೀಡಿದ್ದು, ಬಿಹಾರದಲ್ಲಿ ಗದ್ದಲ ಶುರುವಾಗಿದೆ. ಬಿಜೆಪಿಯು ಛತ್ತೀಸ್​ಗಢ, ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಭರ್ಜರಿ ಗೆಲುವು ದಾಖಲಿಸಿದೆ, ಈ ಹಿನ್ನೆಲೆಯಲ್ಲಿ ಸೀತಾಮರ್ಹಿ ಸಂಸದೀಯ ಕ್ಷೇತ್ರವನ್ನು ಪ್ರತಿನಿಧಿಸುವ ಸುನಿಲ್ ಕುಮಾರ್ ಪಿಂಟು ಈ ಹೇಳಿಕೆ ನೀಡಿದ್ದಾರೆ.

ಮೋದಿ ಇದ್ದರೆ ಎಲ್ಲವೂ ಸಾಧ್ಯ, ಪ್ರಧಾನಿಯ ಹೊಗಳಿದ ಜೆಡಿಯು ನಾಯಕ
ನರೇಂದ್ರ ಮೋದಿ
Follow us on

ಮೋದಿ ಇದ್ದರೆ ಎಲ್ಲವೂ ಸಾಧ್ಯ ಎಂದು ನಿತೀಶ್​ ಕುಮಾರ್(Nitish Kumar) ಅವರ ಜೆಡಿಯು ಪಕ್ಷದ ಮುಖಂಡರೊಬ್ಬರು ಹೇಳಿಕೆ ನೀಡಿದ್ದು, ಬಿಹಾರದಲ್ಲಿ ಗದ್ದಲ ಶುರುವಾಗಿದೆ. ಬಿಜೆಪಿಯು ಛತ್ತೀಸ್​ಗಢ, ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಭರ್ಜರಿ ಗೆಲುವು ದಾಖಲಿಸಿದೆ, ಈ ಹಿನ್ನೆಲೆಯಲ್ಲಿ ಸೀತಾಮರ್ಹಿ ಸಂಸದೀಯ ಕ್ಷೇತ್ರವನ್ನು ಪ್ರತಿನಿಧಿಸುವ ಸುನಿಲ್ ಕುಮಾರ್ ಪಿಂಟು ಈ ಹೇಳಿಕೆ ನೀಡಿದ್ದಾರೆ.

ಬಿಜೆಪಿಯು ರಾಜಸ್ಥಾನ, ಛತ್ತೀಸ್​ಗಢ ಹಾಗೂ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್​ನ್ನು ಅಧಿಕಾರದಿಂದ ಕೆಳಗಿಳಿಸಿದೆ. ಚುನಾವಣೆಯ ಫಲಿತಾಂಶ ನೋಡಿದರೆ ಮೋದಿ ಇದ್ದರೆ ಎಲ್ಲವೂ ಸಾಧ್ಯ ಎಂಬುದು ಸಾಬೀತಾಗುತ್ತದೆ. ವಿಧಾನಸಭೆಯಲ್ಲಿ ಬಿಜೆಪಿ ಈ ಘೋಷಣೆಯನ್ನು ಮಾಡಿತ್ತು ಎಂದು ಪಿಂಟು ಹೇಳಿದ್ದಾರೆ.

ಪಿಂಟು ಅವರ ಹೇಳಿಕೆಗೆ ಜೆಡಿಯು ತಿರುಗೇಟು ನೀಡಿದೆ, ಪಿಂಟು ಅವರು ಪ್ರಧಾನಿ ಮೋದಿಯವರ ಪ್ರಭಾವಕ್ಕೆ ಒಳಗಾಗಿದ್ದರೆ ಲೋಕಸಭಾ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪಕ್ಷದ ವಕ್ತಾರ ನೀರಜ್ ಕುಮಾರ್ ಒತ್ತಾಯಿಸಿದ್ದಾರೆ.

ಮತ್ತಷ್ಟು ಓದಿ: ನಿತೀಶ್ ಕುಮಾರ್ ಆಹಾರದಲ್ಲಿ ಏನೋ ಬೆರೆಸಲಾಗುತ್ತಿದೆ: ಜಿತನ್ ಮಾಂಝಿ

ಪ್ರಭಾವಿತರಾಗಿದ್ದರೆ ಲೋಕಸಭೆ ಚುನಾವಣೆಗೂ ಮುನ್ನ ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕು.ಆದಷ್ಟು ಬೇಗ ನಿರ್ಧಾರ ಕೈಗೊಳ್ಳಬೇಕು ಎಂದು ಕುಮಾರ್ ಹೇಳಿದ್ದಾರೆ.

ಬಿಜೆಪಿ ವಕ್ತಾರ ಕುಂಟಲ್ ಕೃಷ್ಣ ಪಿಂಟು ಹೇಳಿಕೆಯನ್ನು ಬೆಂಬಲಿಸಿದ್ದಾರೆ. ಜೆಡಿಯು ಸಂಸದರು ನೀಡಿರುವ ಹೇಳಿಕೆಯು ಪ್ರಸ್ತುತ ಪರಿಸ್ಥಿತಿ ಏನೆಂದು ಪ್ರತಿಯೊಬ್ಬ ವ್ಯಕ್ತಿಯು ಅರ್ಥಮಾಡಿಕೊಂಡಿದ್ದಾನೆ ಎಂಬುದನ್ನು ತೋರಿಸುತ್ತದೆ ಎಂದು ಅವರು ಹೇಳಿದರು.

ಜೆಡಿಯು ಬಿಜೆಪಿಯೊಂದಿಗಿನ ಸಂಬಂಧವನ್ನು ಮುರಿದುಕೊಂಡು ಎನ್​ಡಿಎಯಿಂದ ಹೊರನಡೆದಿತ್ತು. ಬಿಜೆಪಿ ಮಿತ್ರ ಪಕ್ಷವಾಗಿದ್ದ ನಿತೀಶ್ ಕುಮಾರ್ ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಬಳಿಕ ಆರ್‌ಜೆಡಿ ಮತ್ತು ಕಾಂಗ್ರೆಸ್‌ನೊಂದಿಗೆ ಕೈಜೋಡಿಸಿದರು ಮತ್ತು ಮತ್ತೆ ಮುಖ್ಯಮಂತ್ರಿಯಾದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:33 am, Tue, 5 December 23