ದೆಹಲಿ: ರಾಷ್ಟ್ರಪತಿ ಸ್ಥಾನಕ್ಕೆ ಎನ್‌ಡಿಎ ನಾಮನಿರ್ದೇಶಿತ ದ್ರೌಪದಿ ಮುರ್ಮು(Draupadi Murmu) ಗುರುವಾರ ಭುವನೇಶ್ವರದಿಂದ ದೆಹಲಿ ತಲುಪಿದ್ದಾರೆ. ಶುಕ್ರವಾರ(ಜೂನ್ 24) ರಾಷ್ಟ್ರಪತಿ ಹುದ್ದೆಗೆ ನಾಮಪತ್ರ ಸಲ್ಲಿಸಲಿದ್ದು, ಒಂದು ದಿನ ಮೊದಲು ರಾಷ್ಟ್ರ ರಾಜಧಾನಿಗೆ ಭೇಟಿ ನೀಡಿದ್ದಾರೆ. ದ್ರೌಪದಿ ಮುರ್ಮು ದೆಹಲಿ ಪ್ರಯಾಣ ಬೆನ್ನಲ್ಲೆ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ(Pralhad Joshi) ಮನೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಜೋಶಿ ಅವರ ಮನೆಗೆ ಇಂದು ಮುಂಜಾನೆಯಿಂದಲೂ ಹಲವಾರು ಬಿಜೆಪಿ ನಾಯಕರು ಮತ್ತು ಬೆಂಬಲಿತ ಪಕ್ಷಗಳ ಮುಖಂಡರು ಭೇಟಿ ನೀಡಿದ್ದಾರೆ.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರ ದೆಹಲಿ ನಿವಾಸ ಇಂದು ಚಟುವಟಿಕೆಗಳ ಕೇಂದ್ರವಾಗಿತ್ತು. ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವ್ರಿಗೆ ಸೂಚಕರಾಗಿ ಸಹಿ ಹಾಕಲು ಗಣ್ಯಾತಿಗಣ್ಯರು ಜೋಶಿಯವ್ರ ನಿವಾಸಕ್ಕೆ ಆಗಮಿಸಿದ್ರು. ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ, ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಸೇರಿದಂತೆ ಕೇಂದ್ರ ಸಚಿವರು ಸೂಚಕರಾಗಿ ಸಹಿ ಹಾಕಿದ್ರು. ಬಿಜೆಪಿ ಸಂಸದರು ಸಹ ಪ್ರಲ್ಹಾದ್ ಜೋಶಿಯವ್ರ ನಿವಾಸಕ್ಕೆ ತೆರಳಿ ಸೂಚಕರಾಗಿ ಸಹಿ ಹಾಕಿದ್ದಾರೆ. ನಾಳೆ ಎನ್‌ಡಿಎ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ನಾಮಪತ್ರ ಸಲ್ಲಿಸಲಿದ್ದಾರೆ. ನಾಮಪತ್ರ ಸಲ್ಲಕೆ ವೇಳೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳ ಸಿಎಂಗಳು ಹಾಗೂ ಕೇಂದ್ರ ಮಂತ್ರಿಗಳು ಭಾಗಿಯಾಗಲಿದ್ದಾರೆ.
ಪ್ರಲ್ಹಾದ್ ಜೋಶಿಯವರ ಕಚೇರಿ ರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ಮೈತ್ರಿಕೂಟದ ಕೇಂದ್ರ ಬಿಂದು:
ರಾಷ್ಟ್ರಪತಿ ಚುನಾವಣೆಗೆ ಅಖಾಡ ಸಿದ್ಧವಾಗಿರುವಂತೆಯೇ, ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯುತ್ತಿದೆ. ಇದಕ್ಕೆ ತಕ್ಕಂತೆ ಎನ್‌ಡಿಎ ಮೈತ್ರಿಕೂಟ ಪಾಳಯದಲ್ಲಿ ಅಭ್ಯರ್ಥಿಯಾಗಿ ಆಯ್ಕೆಗೊಂಡ ದ್ರೌಪದಿ ಮುರ್ಮು ಅವರ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗಳು ಬಿರುಸಿನಿಂದ ನಡೆದಿದೆ.
ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಚುನಾವಣೆಗೆ ಶುಕ್ರವಾರ ತಮ್ಮ ನಾಮಪತ್ರವನ್ನು ಸಲ್ಲಿಸಲಿದ್ದು, ಇದಕ್ಕೆ ಪೂರಕವಾಗಿ ಪ್ರಕ್ರಿಯೆಗಳು ಕೇಂದ್ರ ಸಂಸದೀಯ ಸಚಿವರಾದ ಪ್ರಲ್ಹಾದ್ ಜೋಶಿಯವರ ಕಚೇರಿಯಲ್ಲಿ ನಡೆದಿವೆ.
ದ್ರೌಪದಿ ಅವರ ಉಮೇದುವಾರಿಕೆಯನ್ನು ಬೆಂಬಲಿಸಿ, ನಾಮಪತ್ರಕ್ಕೆ ಸಹಿ ಹಾಕಲು ಕೇಂದ್ರ ಸಚಿವರುಗಳ ದಂಡೇ ನೆರೆದಿದ್ದು, ಪ್ರಲ್ಹಾದ್ ಜೋಶಿಯವರ ಕಚೇರಿಯಲ್ಲಿ ಈ ಕುರಿತ ಪ್ರಕ್ರಿಯೆಗಳು ನಡೆದಿವೆ. ದ್ರೌಪದಿ ಮುರ್ಮು ಅವರ ಆಯ್ಕೆ ಬಹುತೇಕ ಖಚಿತವಾಗಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವರು ಉತ್ಸಾಹದಿಂದಲೇ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು. ಈ ಮೂಲಕ ಪ್ರಲ್ಹಾದ್ ಜೋಶಿಯವರ ಕಚೇರಿ ರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ಮೈತ್ರಿಕೂಟದ ಕೇಂದ್ರ ಬಿಂದುವಾಗಿ ಮಾರ್ಪಟ್ಟಿದೆ.
For creating history by winning with thumping votes in upcoming #PresidentialElections, Hon’ble CMs of UP, Meghalaya, Uttarakhand, Karnataka, MP, Gujarat & Assam came at my residence & signed nomination papers of NDA’s candidate #DraupadiMurmu, leader who represents ‘New India’ pic.twitter.com/UdpIpyZEhQ
— Pralhad Joshi (@JoshiPralhad) June 23, 2022
ದ್ರೌಪದಿ ಮುರ್ಮು ಅವರು ದೇಶದ ಭರವಸೆಯ ಹೊಸ ಕಿರಣವಾಗಿದ್ದು, ಇತಿಹಾಸದ ಸುವರ್ಣ ಪುಟದ ಭಾಗವಾಗಲು ಮತ್ತು ಮುಂದಿನ ರಾಷ್ಟ್ರಪತಿ ಚುನಾವಣೆಯಲ್ಲಿ ಅಜೇಯವಾಗಿ ವಿಜಯೋತ್ಸವ ಅನುಭವಿಸಲು ಎನ್ ಡಿಎ ಕಾತರದಿಂದ ಕಾಯುತ್ತಿದೆ. ಈ ಚುನಾವಣೆಯ ನಾಮಪತ್ರಕ್ಕೆ ಸಹಿ ಹಾಕಲು ಸಂಪುಟ ಸಹೋದ್ಯೋಗಿಗಳು ನಿವಾಸಕ್ಕೆ ಆಗಮಿಸಿದರು ಎಂದು ಪ್ರಲ್ಹಾದ್ ಜೋಶಿಯವರು ಟ್ವೀಟ್ ಮಾಡಿದ್ದಾರೆ.
ಜುಲೈ 18ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ಜುಲೈ 21ರಂದು ಮತ ಎಣಿಕೆ ನಡೆಯಲಿದೆ. ಸಂಸತ್ತಿನ ಎರಡೂ ಸದನಗಳ ಸದಸ್ಯರು, ಕೇಂದ್ರಾಡಳಿತ ಪ್ರದೇಶದ, ರಾಜ್ಯಗಳ ಶಾಸಕರು ಈ ಚುನಾವಣೆಯಲ್ಲಿ ಭಾಗಿಯಾಗಲಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಒಟ್ಟು 4880 ಮಂದಿ ಮತದಾನ ಮಾಡಲಿದ್ದಾರೆ.
ಇದನ್ನೂ ಓದಿ: ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆ ಆರೋಪದ ಮೇಲೆ ಸದನದಲ್ಲಿ ಭಾರತ ವಿರೋಧಿ ನಿರ್ಣಯ ಮಂಡಿಸಿದ ಯುಎಸ್ ಶಾಸಕಿ ಇಲ್ಹಾನ್ ಒಮರ್
Published On - 10:22 pm, Thu, 23 June 22