
ಮುಂಬೈ: ಕೊವಿಡ್ ನಿಯಮ ಉಲ್ಲಂಘಿಸಿದ್ದ ನೈಟ್ ಕ್ಲಬ್ ಮೇಲೆ ಮುಂಬೈ ಪೊಲೀಸರು ಮಂಗಳವಾರ ಬೆಳಗ್ಗೆ 3 ಗಂಟೆಗೆ ದಾಳಿ ನಡೆಸಿ 34 ಮಂದಿಯನ್ನು ಬಂಧಿಸಿದ್ದರು.
ಈ ದಾಳಿ ನಂತರ ಟ್ವೀಟ್ ಮಾಡಿರುವ ಮುಂಬೈ ಪೊಲೀಸರು, ಬೆಳಗ್ಗೆ 6 ಗಂಟೆವರೆಗೆ ಪಾರ್ಟಿ ಮುಂದುವರಿಯಬಾರದು. ಅಂಧೇರಿಯಲ್ಲಿರುವ ನೈಟ್ ಕ್ಲಬ್ನಲ್ಲಿ ಕೊವಿಡ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ಬೆಳಗ್ಗೆ 3 ಗಂಟೆಗೆ ದಾಳಿ ನಡೆಸಿದ್ದೇವೆ. 34 ಮಂದಿ ವಿರುದ್ಧ ಕ್ರಮ ಕೈಗೊಂಡಿದ್ದು ಇದರಲ್ಲಿ 19 ಮಂದಿ ದೆಹಲಿ ಮತ್ತು ಪಂಜಾಬ್ನವರಾಗಿದ್ದಾರೆ. ಕೆಲವು ಸೆಲಬ್ರಿಟಿಗಳೂ ಇಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸರು ಟ್ವೀಟ್ ಮಾಡಿದ್ದಾರೆ.
ಬಂಧಿತರ ವಿರುದ್ಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿರುವುದಾಗಿ ಪಿಟಿಐ ಸುದ್ದಿ ಸಂಸ್ಧೆ ವರದಿ ಮಾಡಿದೆ. ಬಂಧಿತರಾದವರಲ್ಲಿ ಕ್ರಿಕೆಟಿಗ ಸುರೇಶ್ ರೈನಾ, ಗಾಯಕ ಗುರು ರಾಂಧವಾ ಮೊದಲಾದ ಸೆಲೆಬ್ರಿಟಿಗಳಿದ್ದು ಇವರಿಗೆ ಜಾಮೀನು ನೀಡಲಾಗಿದೆ.
ಕ್ರಿಸ್ಮಸ್ ಮತ್ತು ಹೊಸವರ್ಷದ ಆಚರಣೆಗೆ ಪೂರ್ವಭಾವಿಯಾಗಿ ಮಹಾರಾಷ್ಟ್ರ ಸರ್ಕಾರ ಎಲ್ಲ ನಗರ ಮತ್ತು ಮುನ್ಸಿಪಲ್ ಕಾರ್ಪೊರೇಷನ್ ಪ್ರದೇಶಗಳಲ್ಲಿ ನೈಟ್ ಕರ್ಫ್ಯೂ ಘೋಷಿಸಿದೆ. ಡಿಸೆಂಬರ್ 22ರಿಂದ ಜನವರಿ 5ರವರೆಗೆ ರಾತ್ರಿ 11 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಕರ್ಫ್ಯೂ ನಿರ್ಬಂಧವಿರಲಿದೆ.
ಹೊಸ ವರ್ಷವನ್ನು ನಾವು ಪ್ರತಿಬಾರಿಯಂತೆ ಆಚರಿಸಲಾಗುವುದಿಲ್ಲ. ಕೊರೊನಾ ಸೋಂಕು ಹರಡದಂತೆ ವಿಧಿಸಿರುವ ನಿಯಮಗಳ ಉಲ್ಲಂಘನೆ ಪುನರಾವರ್ತನೆಯಾಗಬಾರದು ಎಂಬ ಉದ್ದೇಶದಿಂದ ಕರ್ಫ್ಯೂ ಹೇರಲಾಗಿದೆ ಎಂದು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಕಮಿಷನರ್ ಇಕ್ಬಾಲ್ ಸಿಂಗ್ ಚಹಾಲ್ ಹೇಳಿದ್ದಾರೆ.
ಡ್ರ್ಯಾಗನ್ಫ್ಲೈ ಕ್ಲಬ್ ಮೇಲೆ ಖಾಕಿ ದಾಳಿ: ಕ್ರಿಕೆಟಿಗ ಸುರೇಶ್ ರೈನಾ ಸೇರಿ ಅನೇಕ ಸೆಲೆಬ್ರಿಟಿಗಳು ಅರೆಸ್ಟ್!