ಲಕ್ನೊ: ಕೋಮು ಭಾವನೆಗಳಿಗೆ ಪ್ರಚೋದನೆ ಮತ್ತು ವೃದ್ಧನ ಮೇಲೆ ಹಲ್ಲೆಗೆ ಸಂಬಂಧಿಸಿದ ಪೋಸ್ಟ್‌ಗಳ ಕುರಿತು ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಟ್ವಿಟರ್, ಪತ್ರಕರ್ತರು ಮತ್ತು ಕಾಂಗ್ರೆಸ್ ಮುಖಂಡರು ಸೇರಿದಂತೆ ಎಂಟು ಮಂದಿಯ ವಿರುದ್ಧ ಪ್ರಕರಣ ದಾಖಲಾದ ಕೆಲವೇ ಗಂಟೆಗಳ ನಂತರ ವಿವಾದದಲ್ಲಿ ಹೊಸ ತಿರುವುಂಟಾಗಿದೆ. ಹಲ್ಲೆಗೊಳಗಾದ ಹಿರಿಯ ಮುಸ್ಲಿಂ ವ್ಯಕ್ತಿ ಅಬ್ದುಲ್ ಸಮದ್ ಅವರ ಕುಟುಂಬವು ಸಮದ್ ಅವರು ತಾಯತಗಳನ್ನು ಮಾರಾಟ ಮಾಡುತ್ತಿದ್ದರು ಎಂಬ ಪೊಲೀಸರ ಹೇಳಿಕೆಯನ್ನು ನಿರಾಕರಿಸಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಅಬ್ದುಲ್ ಸಮದ್ ಅವರಲ್ಲಿ “ಜೈ ಶ್ರೀ ರಾಮ್” ಮತ್ತು “ವಂದೇ ಮಾತರಂ” ಎಂದು ಹೇಳಲು ಒತ್ತಾಯಿಸಲಾಯಿತು. ಜೂನ್ 5 ರಂದು ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಗುಡಿಸಲಿನಲ್ಲಿ ಬಂಧಿಸಿ ಅವರ ಗಡ್ಡವನ್ನು ಕತ್ತರಿಸಲಾಯಿತು ಎಂದು ಹೇಳಲಾಗಿದೆ. ಆದಾಗ್ಯೂ, ಈ ಪ್ರಕರಣದಲ್ಲಿ ಯಾವುದೇ “ಕೋಮು ದ್ವೇಷದ ವಿಚಾರ” ಇದೆ ಎಂಬುದನ್ನು ಉತ್ತರಪ್ರದೇಶ ಪೊಲೀಸರು ನಿರಾಕರಿಸಿದ್ದಾರೆ. ಅಬ್ದುಲ್ ತಾಯತ ಮಾರುತ್ತಿದ್ದರು. ಇವರು ಮಾರಿದ ತಾಯತ ವಿಚಾರವಾಗಿ ಕೆಲವರು ಅವರ ಮೇಲೆ ಹಲ್ಲೆ ನಡೆಸಿದ್ದರು ಎಂದು ಹೇಳಿದ್ದರು.
ಅಬ್ದುಲ್ ಸಮದ್ ಮೇಲೆ ಹಿಂದೂಗಳು ಮತ್ತು ಮುಸ್ಲಿಮರು ಸೇರಿದಂತೆ ಎಂಬ ಆರು ಮಂದಿ ಹಲ್ಲೆ ನಡೆಸಿದರು. ಆ ಜನರು ಸಮದ್ ಅವರಿಗೆ ಗೊತ್ತಿರುವವರೇ ಆಗಿದ್ದಾರೆ ಎಂದಿದ್ದರು ಪೊಲೀಸರು. “ತಪ್ಪುದಾರಿಗೆಳೆಯುವ” ಪೋಸ್ಟ್ ಗಳನ್ನು ಹಂಚಿಕೊಂಡಿದ್ದಾರೆ ಎಂದು ಆರೋಪಿಸಿರುವವರಲ್ಲಿ ಪತ್ರಕರ್ತರಾದ ರಾಣಾ ಅಯೂಬ್, ಸಬಾ ನಖ್ವಿ, ಮತ್ತು ಕಾಂಗ್ರೆಸ್ ಮುಖಂಡರಾದ ಸಲ್ಮಾನ್ ನಿಜಾಮಿ, ಶಮಾ ಮೊಹಮ್ಮದ್ ಮತ್ತು ಮಸ್ಕೂರ್ ಉಸ್ಮಾನಿ ಸೇರಿದ್ದಾರೆ . ಎಫ್ಐಆರ್ ಪ್ರಕಾರ ಈ ಈ ಘಟನೆ ಬಗ್ಗೆ ಸಾವಿರಾರು ಜನರು ಮರು ಟ್ವೀಟ್ ಮಾಡಿದ್ದಾರೆ. ಈ ಬಗ್ಗೆ ಟ್ವಿಟರ್ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ.
थाना लोनी बार्डर क्षेत्रान्तर्गत हुई घटना में #GhaziabadPolice द्वारा की गई कठोर कार्यवाही- 3 अभियुक्त गिरफ्तार@Uppolice pic.twitter.com/zg6lHregKD
— GHAZIABAD POLICE (@ghaziabadpolice) June 14, 2021
ಆದಾಗ್ಯೂ, ಸಮದ್ ಅವರ ಮಗ ಬಬ್ಲೂ ಸೈಫಿ ಪೊಲೀಸರ ವಾದಗಳನ್ನು ನಿರಾಕರಿಸಿದ್ದಾನೆ. “ನನ್ನ ತಂದೆ ‘ತಬೀಜ್’ (ತಾಯತ) ಗಳನ್ನು ಮಾರುತ್ತಿದ್ದರು ಎಂದು ಪೊಲೀಸರು ಹೇಳುತ್ತಿದ್ದಾರೆ. ನಮ್ಮ ಕುಟುಂಬದಲ್ಲಿ ಯಾರೂ ಈ ವ್ಯವಹಾರವನ್ನು ಮಾಡುವುದಿಲ್ಲ. ನಾವು ಬಡಗಿಗಳು. ಪೊಲೀಸರು ನಿಜ ಹೇಳುತ್ತಿಲ್ಲ. ಅವರು ತನಿಖೆ ನಡೆಸಿ ಅದನ್ನು ಸಾಬೀತುಪಡಿಸಲಿ ಎಂದಿದ್ದಾರೆ.
“ನಾವು ಜೂನ್ 6 ರಂದು ಲೋನಿ ಪೊಲೀಸ್ ಠಾಣೆಗೆ ಎಫ್ಐಆರ್ ಸಲ್ಲಿಸಿದ್ದೇವೆ. ಆಗ ಒಬ್ಬ ಪೋಲೀಸ್ ನಮಗೆ ಹೇಳಿದರು – ‘ಚಾಚಾ’ ನಿಮ್ಮ ಗಡ್ಡವನ್ನು ಕತ್ತರಿಸಿದರೆ ಏನು ದೊಡ್ಡ ವಿಷಯ ಎಂದು ಕೇಳಿದ್ದರು.ನನ್ನ ತಂದೆಯೊಂದಿಗೆ ಹೋದ ಸ್ನೇಹಿತನೊಬ್ಬ ಕೋಪಗೊಂಡು ಗಡ್ಡ ಅನೇಕ ಮುಸ್ಲಿಮರಿಗೆ ಪವಿತ್ರವಾಗಿದೆ ಎಂದು ಪೊಲೀಸರಿಗೆ ಉತ್ತರಿಸಿದ್ದಾನೆ.
ಘಟನೆಗಳ ಬಗ್ಗೆ ವಿವರಿಸಿದ ಅವರು ಈ ಹಿಂದೆ ತನ್ನ ತಂದೆ ವಿವರಿಸಿದಂತೆ, ಘಟನೆಯ ದಿನದಂದು ಅವನು ಆಟೋ ಹತ್ತಿದಾಗ ಬಲವಂತವಾಗಿ ಅವರನ್ನು ನಿರ್ಜನ ಸ್ಥಳಕ್ಕೆ ಕರೆದೊಯ್ಯಲಾಗಿದೆ. ಕೆಲವು ಜನರು ನನ್ನ ತಂದೆಯನ್ನು ನಿರ್ಜನ ಸ್ಥಳಕ್ಕೆ ಕರೆದೊಯ್ದು ಥಳಿಸಲಾಯಿತು ಮತ್ತು ಅವರ ಗಡ್ಡವನ್ನು ಕತ್ತರಿಸಲಾಯಿತು. ಆದರೆ ನನ್ನ ತಂದೆಯ ಜೀವ ಉಳಿಸಲಾಗಿದೆ. ಅಪ್ಪನಿಗೆ ನಾಲ್ಕು ಗಂಟೆಗಳ ಕಾಲ ಚಿತ್ರಹಿಂಸೆ ನೀಡಲಾಯಿತು” ಎಂದಿದ್ದಾರೆ.
ಹಲ್ಲೆ ಪ್ರಕರಣದಲ್ಲಿ ಈವರೆಗೆ ಮೂವರನ್ನು ಬಂಧಿಸಲಾಗಿದೆ. “ನಾವು ಇದನ್ನು ಮತ್ತಷ್ಟು ತನಿಖೆ ಮಾಡಿದಾಗ, ಅವರು ಜೂನ್ 5 ರಂದು ಲೋನಿ ಗಡಿ ಪ್ರದೇಶದಿಂದ ಬಂದಿರುವುದನ್ನು ನಾವು ಕಂಡುಕೊಂಡೆವು. ಅಲ್ಲಿಂದ ತಾಯತಗಳನ್ನು ತಯಾರಿಸುವ ಅಬ್ದುಲ್ ಸಮದ್ ಅವರು ಹಾಜಿಪುರ ಗ್ರಾಮಕ್ಕೆ ಹೋದರು. ಅವರಿಗೆ ಆರೋಪಿಗಳು ಯಾರೆಂದು ಗೊತ್ತಿದೆ. ಅವರೊಂದಿಗೆ ಅಸಮಾಧಾನಗೊಂಡ ಜನರೇ ಈ ಕೃತ್ಯ ಮಾಡಿದ್ದಾರೆ ಎಂದು ಗಾಜಿಯಾಬಾದ್ ಪೊಲೀಸ್ ಅಧಿಕಾರಿ ಇರಾಜ್ ರಾಜಾ ಅವರು ಅಧಿಕೃತ ವಿಡಿಯೋ ಹೇಳಿಕೆಯೊಂದನ್ನು ನೀಡಿದ್ದಾರೆ.
थाना लोनी बार्डर क्षेत्रान्तर्गत हुई घटना में #GhaziabadPolice द्वारा की गई कठोर कार्यवाही- 03 अभियुक्त गिरफ्तार ।
उक्त सम्बन्ध में पुलिस अधीक्षक, ग्रामीण की वीडियो बाईट।@Uppolice https://t.co/IIcMJIvn46 pic.twitter.com/ZGHGQIpXsh— GHAZIABAD POLICE (@ghaziabadpolice) June 15, 2021
ಟ್ವಿಟರ್ ಮತ್ತು ಇತರ ಎಂಟು ಜನರ ವಿರುದ್ಧ ಐಪಿಸಿ ಸೆಕ್ಷನ್ 153 (ಗಲಭೆಗೆ ಪ್ರಚೋದನೆ), 153 ಎ (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 295 ಎ (ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶ), 505 (ಕಿಡಿಗೇಡಿತನ), 120 ಬಿ (ಕ್ರಿಮಿನಲ್ ಪಿತೂರಿ) ಮತ್ತು 34 (ಸಾಮಾನ್ಯ ಉದ್ದೇಶ) ಮೊದಲಾದ ಸೆಕ್ಷನ್ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಪತ್ರಕರ್ತೆ ರಾಣಾ ಅಯೂಬ್ ಅವರು ಇಂದು ಮಧ್ಯಾಹ್ನ ಸತ್ಯವು ಬೇಗನೆ ಮೇಲುಗೈ ಸಾಧಿಸಲು ನಾನು ಕಾಯುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
2/2 a different narrative, I shall wait for the truth to prevail at the earliest. My endeavour remains as always to share news that highlights the truth and thereby promotes peace and harmony in our society. I hope the victim gets justice.
— Rana Ayyub (@RanaAyyub) June 16, 2021
ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ಸರಣಿ ಟ್ವೀಟ್ ಮಾಡಿದ್ದು ಉತ್ತರಪ್ರದೇಶದಲ್ಲಿ ನಡೆದದ್ದು ನಕಲಿ ಸುದ್ದಿಗಳ ವಿರುದ್ಧ ಹೋರಾಡುವಲ್ಲಿ ಟ್ವಿಟರ್‌ನ ಅನಿಯಂತ್ರಿತತೆಗೆ ವಿವರಣೆಯಾಗಿದೆ ಎಂದು ಹೇಳಿದ್ದಾರೆ. “ಟ್ವಿಟರ್ ತನ್ನ ಸತ್ಯ ಪರಿಶೀಲನಾ ಕಾರ್ಯವಿಧಾನದ ಬಗ್ಗೆ ಉತ್ಸಾಹದಿಂದ ಕೂಡಿದ್ದರೂ, ಉತ್ತರಪ್ರದೇಶದ ಘಟನೆಗಳಂಥಾ ಅನೇಕ ಸಂದರ್ಭಗಳಲ್ಲಿ ಕಾರ್ಯನಿರ್ವಹಿಸುವಲ್ಲಿ ವಿಫಲವಾಗಿದೆ. ಗೊಂದಲಕ್ಕೊಳಗಾಗಿದೆ ಮತ್ತು ತಪ್ಪು ಮಾಹಿತಿಯ ವಿರುದ್ಧ ಹೋರಾಡುವಲ್ಲಿ ಅದರ ಅಸಂಗತತೆಯನ್ನು ಸೂಚಿಸುತ್ತದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಹಸುಗಳ ಕಳ್ಳ ಸಾಗಾಣಿಕೆ ಶಂಕೆ: ರಾಜಸ್ಥಾನದಲ್ಲಿ ಗುಂಪು ಹಲ್ಲೆಗೆ ವ್ಯಕ್ತಿ ಬಲಿ
ಇದನ್ನೂ ಓದಿ: ಅಭಿವ್ಯಕ್ತಿ ಸ್ವಾತಂತ್ರ್ಯದ ವಕ್ತಾರನಂತೆ ವರ್ತಿಸುತ್ತಿರುವ ಟ್ವಿಟರ್ನಿಂದ ಸರ್ಕಾರದ ಮಾರ್ಗಸೂಚಿ ಉಲ್ಲಂಘನೆ: ರವಿಶಂಕರ್ ಪ್ರಸಾದ್
(After Police Case Over Uttar Pradeshs Ghaziabad Attack twist has emerged in the controversy)
Published On - 3:51 pm, Wed, 16 June 21