ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ಇಂದು ಬಿಜೆಪಿ ಸೇರ್ಪಡೆ ಸಾಧ್ಯತೆ
ಕಾಂಗ್ರೆಸ್ ಪಕ್ಷ ತೊರೆದ ಒಂದು ದಿನದ ನಂತರ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ಇಂದು ಬಿಜೆಪಿ ಸೇರಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ . ಮುಂಬೈ ಬಿಜೆಪಿ ಕಚೇರಿಯಲ್ಲಿ ಸುಮಾರು ಮಧ್ಯಾಹ್ನ 12 ಗಂಟೆಗೆ ಚವಾಣ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಕಚೇರಿ ಮೂಲಗಳು ತಿಳಿಸಿವೆ.
ಕಾಂಗ್ರೆಸ್(Congress)ಗೆ ರಾಜೀನಾಮೆ(Resignation) ನೀಡಿರುವ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್(Ashok Chavan) ಇಂದು ಬಿಜೆಪಿಗೆ ಸೇರ್ಪಡೆಗೊಳ್ಳಬಹುದು ಎಂದು ಅವರ ಕಚೇರಿ ಮೂಲಗಳು ತಿಳಿಸಿವೆ. ಅಶೋಕ್ ಚವಾಣ್ ಮುಂಬೈನಲ್ಲಿ ಮಧ್ಯಾಹ್ನ 12ಗಂಟೆಗೆ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಿಜೆಪಿಗೆ ಸೇರುವ ಊಹಾಪೋಹಗಳ ನಡುವೆಯೇ ಅಶೋಕ್ ಸೋಮವಾರ ಕಾಂಗ್ರೆಸ್ಗೆ ರಾಜೀನಾಮೆ ನೀಡಿದ್ದರು. ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಘೋಷಿಸಿದ್ದರು.
ರಾಹುಲ್ ನಾರ್ವೇಕರ್ ಅವರಿಗೆ ವಿಧಾನಸಭೆ ಸದಸ್ಯತ್ವದ ರಾಜೀನಾಮೆ ಸಲ್ಲಿಸಿದ್ದಾರೆ, ಬಿಜೆಪಿಗೆ ಸೇರುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದು ಸೋಮವಾರ ಹೇಳಿದ್ದರು. ಭೋಕರ್ ಕ್ಷೇತ್ರದ ಶಾಸಕ ಚವಾಣ್ ಅವರು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದರು. 2014ರಲ್ಲಿ ನಾಂದೇಡ್ ಲೋಕಸಭೆಯಿಂದ ಗೆದ್ದಿದ್ದರು. 10 ರಿಂದ 15 ಶಾಸಕರು ಅಶೋಕ್ ಚವಾಣ್ ಜತೆ ಸಂಪರ್ಕದಲ್ಲಿದ್ದಾರೆ ಎಂದು ಅಮರಾವತಿ ಸ್ವತಂತ್ರ ಶಾಸಕ ರವಿ ರಾಣಾ ಹೇಳಿದ್ದರು.
ಅಶೋಕ್ ಚವಾಣ್ ಅವರು ತವರು ಜಿಲ್ಲೆ ನಾಂದೇಡ್ ಮತ್ತು ಸುತ್ತಮುತ್ತಲಿನ ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಸಾಕಷ್ಟು ಪ್ರಭಾವ ಹೊಂದಿದ್ದಾರೆ.
ಮತ್ತಷ್ಟು ಓದಿ: ನಾನು ಇನ್ನೂ ಯಾವುದೇ ಪಕ್ಷಕ್ಕೆ ಸೇರಲು ನಿರ್ಧರಿಸಿಲ್ಲ: ಅಶೋಕ್ ಚವಾಣ್
ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ನ ಪ್ರಮುಖ ಮುಖವೆಂದು ಪರಿಗಣಿಸಲಾಗಿದೆ. ಅವರು ಪ್ರತಿ ಕಷ್ಟದ ಸಂದರ್ಭದಲ್ಲೂ ಪಕ್ಷದೊಂದಿಗೆ ನಿಂತಿದ್ದರು. ಮೋದಿ ಅಲೆಯ ನಡುವೆಯೂ ಅವರು 2014ರಲ್ಲಿ ನಾಂದೇಡ್ ಕ್ಷೇತ್ರದಿಂದ ಕಾಂಗ್ರೆಸ್ ಅನ್ನು ಗೆಲುವಿನತ್ತ ಮುನ್ನಡೆಸಿದರು. ಅಶೋಕ್ ಚವಾಣ್ ಮೂಲತಃ ಔರಂಗಾಬಾದ್ ಜಿಲ್ಲೆಯ ಪೈಥಾನ್ ತಹಸಿಲ್ ನಿವಾಸಿ.
ಎರಡು ಬಾರಿ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದ ತಂದೆ ಶಂಕರರಾವ್ ಚವಾಣ್ ಅವರಿಂದ ರಾಜಕೀಯವನ್ನು ಕಲಿತರು. ಅಲ್ಲಿ ಕಾಂಗ್ರೆಸ್ ಬಲವಾಗಲು ಶಂಕರರಾವ್ ಅವರೇ ಕಾರಣ ಮತ್ತು ಆಡಳಿತ ವಿರೋಧಿ ಅಲೆಯ ನಡುವೆಯೂ ಇಲ್ಲಿ ಕಾಂಗ್ರೆಸ್ ಅನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಾಗಿರಲಿಲ್ಲ.
ಅಶೋಕ್ ಚವಾಣ್ ಡಿಸೆಂಬರ್ 2008ರಿಂದ 2010ರ ನವೆಂಬರ್ವರೆಗೆ ಒಂದೂವರೆ ವರ್ಷಗಳ ಕಾಲ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದರು. ಆದರ್ಶ್ ಬಿಡ್ಡಿಂಗ್ ಹಗರಣದಲ್ಲಿ ಅವರ ಹೆಸರು ಕೇಳಿಬಂದ ಬಳಿಕ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. 2014ರ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು.ಅವರನ್ನು ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರನ್ನಾಗಿಯೂ ಮಾಡಲಾಗಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ