AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

“ಅಪ್ಪಾ ನಾನು ಬದುಕಿದ್ದೇನೆ”: ಮಗಳ ಆ ಒಂದು ಮಾತು ದುಃಖದಲ್ಲಿದ್ದ ತಂದೆಗೆ ಮತ್ತೆ ಜೀವ ಬಂದಂತಾಗಿದೆ

ಮಗಳು ಎಂದು ಬೇರೆ ದೇಹಕ್ಕೆ ಶವಸಂಸ್ಕಾರ ಮಾಡಿರುವ ಘಟನೆ, ಬಿಹಾರ ಪಟ್ನಾದಲ್ಲಿ ನಡೆದಿದೆ. ಶವಸಂಸ್ಕಾರ ನಡೆಸಿದ ಒಂದು ತಿಂಗಳ ನಂತರ ತನ್ನ ತಂದೆಗೆ ಕರೆ ಮಾಡಿ ಅಪ್ಪಾ ನಾನು ಬದುಕಿದ್ದೇನೆ ಎಂದು ಹೇಳಿದ್ದಾಳೆ.

ಅಪ್ಪಾ ನಾನು ಬದುಕಿದ್ದೇನೆ: ಮಗಳ ಆ ಒಂದು ಮಾತು ದುಃಖದಲ್ಲಿದ್ದ ತಂದೆಗೆ ಮತ್ತೆ ಜೀವ ಬಂದಂತಾಗಿದೆ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Aug 21, 2023 | 11:00 AM

Share

ಪಾಟ್ನಾ, ಆ.21: ಮಗಳ ಸಾವಿನಿಂದ ದುಃಖದ ಮಡುವಿನಲ್ಲಿದ್ದ ತಂದೆಗೆ ಆ ಒಂದು ವಿಡಿಯೋ ಕಾಲ್​​ನಿಂದ ಮತ್ತೆ ಜೀವ ಬಂದಂತಾಗಿದೆ. ಹೌದು ಈ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ. ಯುವತಿಯೊಬ್ಬಳು ನಾಪತ್ತೆಯಾದ ಒಂದು ತಿಂಗಳ ನಂತರ ಆಕೆಯ ಶವಸಂಸ್ಕಾರ ಮಾಡಲಾಗಿದೆ. ಆದರೆ ಶವಸಂಸ್ಕಾರ ನಡೆದ ಒಂದು ತಿಂಗಳ ನಂತರ ಆಕೆ ತನ್ನ ತಂದೆಗೆ ವಿಡಿಯೋ ಕರೆ ಮಾಡಿ “ಪಾಪಾ, ಮೇ ಅಭಿ ಜಿಂದಾ ಹೂಂ,” (ಅಪ್ಪಾ ನಾನು ಇನ್ನೂ ಬದುಕಿದ್ದೇನೆ) ಎಂದು ಕರೆ ಮಾಡಿ ಹೇಳಿದ್ದಾಳೆ. ಆದರೆ ಶವಸಂಸ್ಕಾರ ಮಾಡಿ ದೇಹ ಯಾರು ಎಂದು ಪತ್ತೆ ಮಾಡಿದಾಗ, ಅನಾಮಿಕ ವ್ಯಕ್ತಿಯ ದೇಹವನ್ನು ತನ್ನ ಮಗಳು ಎಂದು ತಪ್ಪಾಗಿ ಗುರುತಿಸಿ ಶವಸಂಸ್ಕಾರ ಮಾಡಲಾಗಿದೆ ಎಂದು ಹೇಳಿದ್ದಾರೆ.

ಇನ್ನು ಇದೀಗ ಪತ್ತೆಯಾಗಿರುವ ಯುವತಿಯನ್ನು ಅಂಶು ಎಂದು ಗುರುತಿಸಲಾಗಿದ್ದು, ಸುಮಾರು ಒಂದು ತಿಂಗಳ ಹಿಂದೆ ನಾಪತ್ತೆಯಾಗಿದ್ದು, ನಂತರ ಆಕೆಯನ್ನು ಪತ್ತೆ ಮಾಡಲು ಸತತ ಪ್ರಯತ್ನ ಮಾಡಿದ್ದಾರೆ. ಆಕೆಯ ನಾಪತ್ತೆ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲೂ ಪೋಸ್ಟ್​​ನ್ನು ಹಾಕಲಾಗಿತ್ತು. ಈ ಬಗ್ಗೆ ಪೊಲೀಸ್​​ ಠಾಣೆಗೂ ದೂರು ನೀಡಿದ್ದು, ಒಂದು ತಿಂಗಳ ನಂತರ ಕಾಲುವೆಯೊಂದರಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ. ಆದರೆ ಮನೆಯವರು ಆಕೆಯ ಮುಖವನ್ನು ಗುರುತಿಸದೆ. ಬಟ್ಟೆಯ ಆಧಾರ ಮೇಲೆ ತಮ್ಮ ಮಗಳು ಎಂದು ಶವಸಂಸ್ಕಾರ ಮಾಡಿದ್ದಾರೆ.

ಇದನ್ನೂ ಓದಿ:  ವಿದ್ಯುತ್ ಕಂಬಕ್ಕೆ ಖಾಸಗಿ ಬಸ್ ಡಿಕ್ಕಿ, 34ಕ್ಕೂ ಹೆಚ್ಚು ಪ್ರಯಾಣಿಕರಿಗೆ ಕರೆಂಟ್​ ಶಾಕ್

ಸುದ್ದಿ ಎಲ್ಲ ಕಡೆ ಹರಡುತ್ತಿದ್ದಂತೆ ಅಂಶು ತನ್ನ ತಂದೆಗೆ ಕರೆ ಮಾಡಿ ತಾನು ಬದುಕಿದ್ದು, ಮದುವೆಯಾಗಲು ಓಡಿ ಹೋಗಿರುವುದಾಗಿ ತಿಳಿಸಿದ್ದಾಳೆ. ಅಂಶು ತನ್ನ ಗೆಳೆಯನೊಂದಿಗೆ ಓಡಿಹೋಗಿದ್ದು, ಅವನನ್ನು ಮದುವೆಯಾಗಿದ್ದಾಳೆ. ಈಗ ಅವಳು ತನ್ನ ಅತ್ತೆ ಮನೆಯಲ್ಲಿ ವಾಸಿಸುತ್ತಿದ್ದಾಳೆ ಎಂದು ಅಕ್ಬರ್‌ಪುರ ಎಸ್‌ಎಚ್‌ಒ (Station House Officer) ಸೂರಜ್ ಪ್ರಸಾದ್ ಹೇಳಿದ್ದಾರೆ.

ಇನ್ನು ಶವಸಂಸ್ಕಾರ ಮಾಡಿರುವ ಮೃತದೇಹ ಯಾರದು? ಮತ್ತು ಇದರ ಬಗ್ಗೆ ತನಿಖೆ ಮಾಡಿದ್ದು, ಶವಸಂಸ್ಕಾರ ಮಾಡಿದ ಮಹಿಳೆಯ ಗುರುತು ಪತ್ತೆಯಾಗಿದ್ದು, ಇದು ಮರ್ಯಾದಾ ಹತ್ಯೆಯ ಪ್ರಕರಣ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಮಹಿಳೆಯ ಪೋಷಕರು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ