ಮತ್ತೆ ಕೊರೊನಾ ಕ್ರಿಮಿ ಆಟ ಶುರು, ಅಪಾಯದತ್ತ ಕೇರಳ!

ಮತ್ತೆ ಕೊರೊನಾ ಕ್ರಿಮಿ ಆಟ ಶುರು, ಅಪಾಯದತ್ತ ಕೇರಳ!

ತಿರುವನಂತಪುರಂ: ದೇಶದಲ್ಲೇ ಮೊದಲ ಬಾರಿಗೆ ಕೊರೊನಾ ಸೊಂಕು ಪತ್ತೆಯಾಗಿದ ಹಾಗೂ ನಿಯಂತ್ರಣಕ್ಕೆ ತಂದ ಹೆಗ್ಗಳಿಕೆಗೆ ಕೇರಳ ಮಾದರಿಯಾಗಿತ್ತು. ಎಲ್ಲೆಡೆ ಅಪಾರ ಪ್ರಶಂಸೆಗಳೂ ವ್ಯಕ್ತವಾಗಿದ್ದವು. ಆದರೆ ಈಗ ಪರಿಸ್ಥಿತಿ ವ್ಯತಿರಿಕ್ತವಾಗತೊಡಗಿದೆ. ಅಷ್ಟೇ ಅಲ್ಲ ಕೇರಳ ರಾಜ್ಯದಲ್ಲಿ ಕೊರೊನಾ ಎಫೆಕ್ಟ್ ಆತಂಕ ಸೃಷ್ಟಿಸಿದೆ. ರಾಜ್ಯ ನಿಧಾನವಾಗಿ ಅಪಾಯದ ಸ್ಥಿತಿಗೆ ಜಾರುತ್ತಿದೆ.

ಕೇರಳದ ಇಡುಕ್ಕಿ, ಕೊಟ್ಟಾಯಂ, ತಿರುವನಂತಪುರಂ, ಕೊಲ್ಲಂ ಜಿಲ್ಲೆಯಲ್ಲಿ ಹೊಸದಾಗಿ ಕೊರೊನಾ ಕೇಸ್​ಗಳು ಪತ್ತೆಯಾಗಿವೆ. ಬಹುತೇಕ ಇಡೀ ಕೇರಳ ರಾಜ್ಯವೇ ರೆಡ್ ಜೋನ್ ಆಗುತ್ತಿದೆ. ಕೇರಳ ಈ ಹಿಂದೆ ₹20 ಸಾವಿರ ಕೋಟಿ ಪ್ಯಾಕೇಜ್ ಘೋಷಿಸಿತ್ತು.

ಈ ಪ್ಯಾಕೇಜ್ ನಿಂದ ಯಾವುದೇ ಪ್ರಯೋಜನವಿಲ್ಲ. ಹೀಗಾಗಿ ಕೇರಳದಲ್ಲಿ ಸರ್ಕಾರಿ ನೌಕರರ ಸಂಬಳಕ್ಕೆ ತಡೆ ಬಿದ್ದಿದೆ. ಈ ರೀತಿ ಮಾಡುತ್ತಿರುವ ಮೊದಲ ರಾಜ್ಯವೇ ಕೇರಳವಾಗಿದೆ. ಈ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಟ್ವೀಟ್ ಮಾಡಿದ್ದಾರೆ.

Published On - 1:18 pm, Thu, 30 April 20

Click on your DTH Provider to Add TV9 Kannada