ಅಸ್ಸಾಂನಲ್ಲಿ ಹಳಿ ತಪ್ಪಿದ ಎಕ್ಸ್​ಪ್ರೆಸ್​​ ರೈಲಿನ 8 ಬೋಗಿಗಳು

|

Updated on: Oct 17, 2024 | 7:31 PM

ಅಸ್ಸಾಂನಲ್ಲಿ ಲೋಕಮಾನ್ಯ ತಿಲಕ್ ಎಕ್ಸ್​ಪ್ರೆಸ್ ರೈಲಿನ 8 ಬೋಗಿಗಳು ಹಳಿ ತಪ್ಪಿರುವ ಘಟನೆ ನಡೆದಿದೆ. ಅಸ್ಸಾಂನ ದಿಬಾಲಾಂಗ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಇಂದು ಬೆಳಗ್ಗೆ ಅಗರ್ತಲಾದಿಂದ ಮುಂಬೈಗೆ ಹೊರಟಿದ್ದ ರೈಲು ಹಳಿ ತಪ್ಪಿದೆ. ಆದರೆ, ಅದೃಷ್ಟವಶಾತ್​ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಅಸ್ಸಾಂನಲ್ಲಿ ಹಳಿ ತಪ್ಪಿದ ಎಕ್ಸ್​ಪ್ರೆಸ್​​ ರೈಲಿನ 8 ಬೋಗಿಗಳು
ಅಸ್ಸಾಂನಲ್ಲಿ ಹಳಿ ತಪ್ಪಿದ ಎಕ್ಸ್​ಪ್ರೆಸ್​​ ರೈಲಿನ 8 ಬೋಗಿಗಳು
Follow us on

ಅಗರ್ತಲಾ: ಅಸ್ಸಾಂನಲ್ಲಿ ಅಗರ್ತಲಾ-ಲೋಕಮಾನ್ಯ ತಿಲಕ್ ಎಕ್ಸ್‌ಪ್ರೆಸ್‌ನ 8 ಬೋಗಿಗಳು ಹಳಿ ತಪ್ಪಿವೆ. ಇದಕ್ಕಾಗಿ ಭಾರತೀಯ ರೈಲ್ವೆ ಸಹಾಯವಾಣಿ ಸಂಖ್ಯೆಗಳನ್ನು ಬಿಡುಗಡೆ ಮಾಡಿದೆ. ಅಗರ್ತಲಾ- ಲೋಕಮಾನ್ಯ ತಿಲಕ್ ಟರ್ಮಿನಸ್ ಎಕ್ಸ್‌ಪ್ರೆಸ್‌ನ 8 ಬೋಗಿಗಳು ಅಸ್ಸಾಂನ ದಿಬಾಲಾಂಗ್ ನಿಲ್ದಾಣದಲ್ಲಿ ಹಳಿತಪ್ಪಿವೆ ಎಂದು ರೈಲ್ವೆ ಇಲಾಖೆಯ ವಕ್ತಾರರು ತಿಳಿಸಿದ್ದಾರೆ.

ಗುರುವಾರ ಸಂಜೆ 4 ಗಂಟೆಗೆ ಲುಮ್ಡಿಂಗ್-ಬರ್ದಾರ್‌ಪುರ ಹಿಲ್ ವಿಭಾಗದಲ್ಲಿ ಲುಮ್ಡಿಂಗ್ ವಿಭಾಗದ ಅಡಿಯಲ್ಲಿ ಈ ಘಟನೆ ಸಂಭವಿಸಿದೆ. ಪವರ್ ಕಾರ್ ಮತ್ತು ರೈಲಿನ ಇಂಜಿನ್ ಸೇರಿದಂತೆ 8 ಕೋಚ್‌ಗಳು ಹಳಿ ತಪ್ಪಿವೆ ಎಂದು ಅವರು ಹೇಳಿದ್ದಾರೆ. ಲುಮ್ಡಿಂಗ್-ಬದರ್‌ಪುರ ಸಿಂಗಲ್ ಲೈನ್ ವಿಭಾಗದಲ್ಲಿ ರೈಲುಗಳ ಓಡಾಟವನ್ನು ಸ್ಥಗಿತಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.


ಇದನ್ನೂ ಓದಿ: ಅಸ್ಸಾಂ ಪೌರತ್ವ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವ ಎತ್ತಿಹಿಡಿದ ಸುಪ್ರೀಂಕೋರ್ಟ್​

ಅಸ್ಸಾಂನ ದಿಮಾ ಹಸಾವೊ ಜಿಲ್ಲೆಯಲ್ಲಿ ಅಗರ್ತಲಾ-ಲೋಕಮಾನ್ಯ ಟರ್ಮಿನಸ್ ಎಕ್ಸ್‌ಪ್ರೆಸ್‌ನ ಎಂಟು ಬೋಗಿಗಳು ಹಳಿತಪ್ಪಿದ್ದು, ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ರೈಲ್ವೆ ವಕ್ತಾರರು ಖಚಿತಪಡಿಸಿದ್ದಾರೆ. ಪವರ್ ಕಾರ್ ಮತ್ತು ಇಂಜಿನ್ ಸೇರಿದಂತೆ ಹಲವಾರು ಕೋಚ್‌ಗಳು ಟ್ರ್ಯಾಕ್‌ನಿಂದ ಹೊರಬಿದ್ದಿವೆ. ಆದರೆ ಯಾವುದೇ ಸಾವುನೋವುಗಳು ಅಥವಾ ಹೆಚ್ಚಿನ ಗಾಯಗಳು ವರದಿಯಾಗಿಲ್ಲ ಎಂದು ತಿಳಿದುಬಂದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ