Viral Video: ತಮಿಳುನಾಡಿನಲ್ಲಿ ನಡೆದಿರುವ ಅಘೋರಿ ಪೂಜೆಯೊಂದು (Aghori Puja) ಸಂಚಲನ ಮೂಡಿಸಿದೆ. ಕೊಯಮತ್ತೂರಿನಲ್ಲಿ ಈ ಘಟನೆ ನಡೆದಿದ್ದು, ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಮಣಿಕಂಠನ್ ಮತ್ತು ಅವರ ಪತ್ನಿ ತಮಿಳುನಾಡಿನ ಕೊಯಮತ್ತೂರು (Coimbatore) ಜಿಲ್ಲೆಯ ಸುಲ್ಲೂರಿನಲ್ಲಿ (Sulur) ನೆಲೆಸಿದ್ದಾರೆ. ಪತ್ನಿಯೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ಮಣಿಕಂಠನ್ ಸಿಟ್ಟಿನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಣಿಕಂಠನ್ ಅವರ ಕುಟುಂಬಸ್ಥರು ಮೃತದೇಹವನ್ನು (dead body) ಸೂಲೂರಿಗೆ ತಂದು ಅಂತಿಮಸಂಸ್ಕಾರಕ್ಕೆ (Last rites) ವ್ಯವಸ್ಥೆ ಮಾಡಿದ್ದಾರೆ.
ಅದೇ ಸಮಯಕ್ಕೆ ಮಣಿಕಂಠನ ಗೆಳೆಯರಾಗಿದ್ದ ಕೆಲವು ಅಘೋರಿಗಳು ಸ್ಥಳಕ್ಕೆ ಬಂದಿದ್ದಾರೆ. ಮಣಿಕಂಠನ್ ಮನಃಶಾಂತಿಗಾಗಿ ಸ್ವಲ್ಪ ಕಾಲ ಪೂಜೆ ಮಾಡುವಂತೆ ಅಘೋರಿಗಳು ಹೇಳಿದರು. ಅದಕ್ಕೆ ಕುಟುಂಬಸ್ಥರು ಒಪ್ಪಿದಾಗ ಮಣಿಕಂಠನ್ ಮೃತದೇಹದ ಮೇಲೆ ಕುಳಿತು ಧ್ಯಾನ ಮಾಡುತ್ತಾ ಮಂತ್ರಗಳನ್ನು ಪಠಿಸುತ್ತಾ ಕಟ್ಟುಮಸ್ತಾದ ಒಬ್ಬ ಯುವ ಅಘೋರಿ ಓ ಅಘೋರಾ.. ಅಘೋರ ಎನ್ನುತ್ತಾ ಮಣಿಕಂಠನ ಶವದ ಮೇಲೆ ಪದ್ಮಾಸನ ಹಾಕಿಕೊಂಡು ಕುಳಿತು ಜೋರಾಗಿ ಕೂಗಿದ್ದಾನೆ. ಪೂಜೆ ಮಾಡುವಾಗ.. ಆತನ ಅನುಯಾಯಿಗಳು ಸಹ ಜೋರಾಗಿಯೇ ಮಂತ್ರಗಳನ್ನು ಪಠಿಸಿ, ಗಲಾಟೆ ಮಾಡಿದರು. ಡೋಲು ಬಾರಿಸುವುದರ ಜೊತೆಗೆ ಶಂಖಗಳನ್ನು ಸಹ ಊದಿದರು.
ಈ ಎಲ್ಲಾ ಗಲಾಟೆ ನೋಡುಗರನ್ನು ಭಯಭೀತಗೊಳಿಸಿತು. ಕೆಲವರು ಈ ಬಗ್ಗೆ ಕಳವಳ ವ್ಯಕ್ತಪಡಿಸಿದರೆ, ಇನ್ನು ಕೆಲವರು ಈ ಪೂಜೆ ಮಾಡಲು ಸತ್ತ ವ್ಯಕ್ತಿಯ ಮೇಲೆ ಕುಳಿತಿರುವುದು ವಿಚಿತ್ರವಾಗಿದೆ. ಸತ್ತ ಸ್ನೇಹಿತನ ಶವವನ್ನು ಪೂಜಿಸುವುದು ಹೀಗಾ? ಎಂದು ಆಕ್ರೋಶ, ಆತಂಕ ವ್ಯಕ್ತಪಡಿಸಿದ್ದಾರೆ. ಕೊಯಮತ್ತೂರಿನಲ್ಲಿ ನಡೆದ ಅಘೋರಿ ಪೂಜೆ ಸಂಚಲನ ಮೂಡಿಸುತ್ತಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:36 pm, Tue, 30 May 23