ನವದೆಹಲಿ: ಸೇನೆಯಲ್ಲಿನ ನೇಮಕಾತಿ ಪ್ರಕ್ರಿಯೆಯಲ್ಲಿ ಪ್ರಮುಖ ಬದಲಾವಣೆಗಾಗಿ ಆರಂಭಗೊಳ್ಳುತ್ತಿರುವ ಅಗ್ನಿಪಥ ಯೋಜನೆಗೆ ಕೇಂದ್ರ ಸಂಪುಟ ಸಮಿತಿ ಅನುಮೋದನೆ ನೀಡಿದ್ದು, ಇದೊಂದು ಐತಿಹಾಸಿಕ ನಿರ್ಧಾರ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಅಗ್ನಿಪಥ್ ನೇಮಕಾತಿ ಯೋಜನೆಯಡಿಯಲ್ಲಿ ನಾಲ್ಕು ವರ್ಷಗಳ ಕಾಲ ಸೇನೆಯಲ್ಲಿ ಯುವಕರನ್ನು ನೇಮಿಸಿಕೊಳ್ಳಲಾಗುವುದು ಎಂದು ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ಇದರೊಂದಿಗೆ, ಅವರು ಕೆಲಸವನ್ನು ತೊರೆಯುವಾಗ ಸೇವಾ ನಿಧಿ ಪ್ಯಾಕೇಜ್ ಅನ್ನು ಪಡೆಯುತ್ತಾರೆ ನಾಲ್ಕು ವರ್ಷಗಳ ಕಾಲ ಸೇನೆಗೆ ಯುವಕರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಯಾವುದೇ ವ್ಯಕ್ತಿಯು ಜೀವನದಲ್ಲಿ ಒಮ್ಮೆಯಾದರೂ ಸೇನೆಯ ಸಮವಸ್ತ್ರ ಧರಿಸಬೇಕೆಂಬ ಹಂಬಲ ಹೊಂದಿರುತ್ತಾರೆ. ಹಾಗೆಯೇ ಈ ಸೈನಿಕರು ಹೊಸ ಹೊಸ ಟೆಕ್ನಾಲಜಿ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಹೆಲ್ತ್ ಹಾಗೂ ಫಿಟ್ನೆಸ್ ಕಡೆಗೆ ಹೆಚ್ಚು ಒತ್ತು ನೀಡಲಿದ್ದಾರೆ.
ಇದರಿಂದ ಉದ್ಯೋಗ ಸೃಷ್ಟಿಯಾಗಲಿದ್ದು, ನಿರುದ್ಯೋಗ ಸಮಸ್ಯೆ ದೂರವಾಗಲಿದೆ. ಭಾರತೀಯ ಅರ್ಥವ್ಯವಸ್ಥೆಯೂ ಸುಧಾರಿಸಲಿದೆ. ಉತ್ಪಾದನಾ ಸಾಮರ್ಥ್ಯ ಹೆಚ್ಚಲಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
ಭಾರತೀಯ ಸೇನೆಯಲ್ಲಿ ನೇಮಕಾತಿಯನ್ನು ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಯಲ್ಲಿ ಮಾಡಲಾಗುತ್ತದೆ. ಈ ಯೋಜನೆಯಲ್ಲಿ, ದೇಶದ ಎಲ್ಲಾ ಮೂರು ಸೇನೆಗಳಾದ ನೌಕಾಪಡೆ, ಭೂಸೇನೆ, ವಾಯುಸೇನೆಗಳ ಸೈನಿಕರು ಕೇವಲ ಮೂರು ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಬೇಕಾಗುತ್ತದೆ.
ನಿವೃತ್ತಿ ಮತ್ತು ಪಿಂಚಣಿ ರೂಪದಲ್ಲಿ ಸರ್ಕಾರಕ್ಕೆ ಯಾವುದೇ ಹೊರೆ ಇರುವುದಿಲ್ಲ. ಮತ್ತು ಸೇನೆಗೆ ಸೇರಲು ಬಯಸುವ ಎಲ್ಲಾ ಯುವಕರಿಗೂ ಅವಕಾಶ ನೀಡಲಾಗುವುದು. ಈಗ ಸರ್ಕಾರವು ಕೇವಲ 3 ವರ್ಷಕ್ಕೆ ಸೈನಿಕರನ್ನು ಆಯ್ಕೆ ಮಾಡುತ್ತದೆ ಮತ್ತು ಈ ಸಮಯದಲ್ಲಿ ಅವರು ವಿವಿಧ ಕ್ಷೇತ್ರಗಳಲ್ಲಿ ಅನೇಕ ತೊಂದರೆ ಮತ್ತು ಸವಾಲುಗಳನ್ನು ಎದುರಿಸಬೇಕಾಗುತ್ತದೆ.
ಸೇನೆಯಲ್ಲಿ 1.25 ಲಕ್ಷಕ್ಕೂ ಅಧಿಕ ಸೀಟುಗಳು ಖಾಲಿ: ದೇಶದಲ್ಲಿ ಕೋವಿಡ್ 19 ನಂತಹ ಸಾಂಕ್ರಾಮಿಕ ರೋಗದಿಂದಾಗಿ, ಮಿಲಿಟರಿ ನೇಮಕಾತಿ ಕಡಿಮೆಯಾಗಿದೆ, ಮತ್ತು ನಮ್ಮ ದೇಶದಲ್ಲಿ ಸೇನಾ ಸಿಬ್ಬಂದಿಗಳ ಸಂಖ್ಯೆ ಕಡಿಮೆಯಾಗಿದೆ. ಅದೇ ಸಮಯದಲ್ಲಿ, ದೇಶದ ಮೂರು ಸೇನೆಗಳಲ್ಲಿ 1.25 ಲಕ್ಷಕ್ಕೂ ಹೆಚ್ಚು ಸೀಟುಗಳು ಖಾಲಿ ಇವೆ ಎಂದು ಹೇಳಲಾಗುತ್ತಿದೆ. ಅಗ್ನಿಪಥ್ ಯೋಜನೆಯಲ್ಲಿ ಸೇನೆಗೆ ನೇಮಕಗೊಳ್ಳುವ ಅಗ್ನಿವೀರ್ ಎಂದು ಕರೆಯಲಾಗುತ್ತದೆ.
ಅಗ್ನಿಪಥ ಯೋಜನೆಯ ಪ್ರಯೋಜನ
Published On - 1:00 pm, Tue, 14 June 22