ಏರ್ ಇಂಡಿಯಾ ಬಿಡ್ ಗೆಲುವನ್ನು ಟಾಟಾ ಸನ್ಸ್ ಕಂಪನಿಯ ಮುಖ್ಯಸ್ಥ ರತನ್ ಟಾಟಾ ಭಾವುಕ ಪತ್ರವೊಂದನ್ನು ಟ್ವೀಟ್ ಮಾಡಿ ಸ್ವಾಗತಿಸಿದ್ದಾರೆ. ‘Welcome Back, Air India’ (ಏರ್ ಇಂಡಿಯಾ ನಿನಗೆ ಮತ್ತೆ ಸ್ವಾಗತ) ಎಂಬ ಆಪ್ತ ಸಾಲುಗಳೊಂದಿಗೆ ಪತ್ರವನ್ನು ಮುಗಿಸಿದ್ದಾರೆ. ಜೆಆರ್ಡಿ ಟಾಟಾ ಅವರು ವಿಮಾನದ ಮುಂದೆ ನಿಂತಿರುವ ಐತಿಹಾಸಿಕ ಚಿತ್ರವನ್ನು ತಮ್ಮ ಪತ್ರದೊಂದಿಗೆ ಸೇರಿಸಿದ್ದಾರೆ.
ಏರ್ ಇಂಡಿಯಾ ಸಂಸ್ಥೆಯು ಮತ್ತೆ ಟಾಟಾ ಗ್ರೂಪ್ ಭಾಗವಾಗುತ್ತಿರುವುದು ದೊಡ್ಡ ಸುದ್ದಿ. ಏರ್ ಇಂಡಿಯಾ ಸಂಸ್ಥೆಯನ್ನು ಮತ್ತೆ ಕಟ್ಟಲು ಸಾಕಷ್ಟು ಪರಿಶ್ರಮ ಬೇಕು. ವಿಮಾನಯಾನ ಕ್ಷೇತ್ರದಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ಟಾಟಾ ಗ್ರೂಪ್ಗೆ ಇದು ಮತ್ತಷ್ಟು ಅವಕಾಶಗಳನ್ನು ವಿಸ್ತರಿಸಲಿದೆ ಎಂದು ರತನ್ ಟಾಟಾ ಹೇಳಿದ್ದಾರೆ.
ಶ್ರೀಯುತ ಜೆಆರ್ಡಿ ಟಾಟಾ ಅವರ ನಾಯಕತ್ವದಲ್ಲಿ ಏರ್ ಇಂಡಿಯಾ ವಿಶ್ವದ ಪ್ರತಿಷ್ಠಿತ ವಿಮಾನಯಾನ ಸಂಸ್ಥೆಗಳಲ್ಲಿ ಒಂದು ಎನಿಸಿತ್ತು. ಇದೇ ಪ್ರತಿಷ್ಠೆಯನ್ನು ಸಂಸ್ಥೆಗೆ ಮರಳಿ ತಂದುಕೊಡಲು ಟಾಟಾ ಗ್ರೂಪ್ ಪ್ರಯತ್ನಿಸಲಿದೆ. ನಮ್ಮ ನಡುವೆ ಜೆಆರ್ಡಿ ಟಾಟಾ ಇಂದು ಇದ್ದಿದ್ದರೆ ಅವರಿಗೆ ಅತ್ಯಂತ ಸಂತೋಷವಾಗುತ್ತಿತ್ತು ಎಂದು ನೆನಪಿಸಿಕೊಂಡಿದ್ದಾರೆ.
ಕೆಲ ಉದ್ಯಮಗಳನ್ನು ಖಾಸಗಿ ರಂಗಕ್ಕೆ ಮುಕ್ತಗೊಳಿಸುವ ಸರ್ಕಾರದ ಇತ್ತೀಚೆಗಿನ ತೀರ್ಮಾನವನ್ನು ನಾವು ಸ್ವಾಗತಿಸುತ್ತೇವೆ ಎಂದು ಹೇಳಿರುವ ರತನ್ ಟಾಟಾ, ‘ಏರ್ ಇಂಡಿಯಾ ನಿನಗೆ ಮತ್ತೆ ಸ್ವಾಗತ’ ಎಂದು ಪತ್ರವನ್ನು ಮುಗಿಸಿದ್ದಾರೆ.
Welcome back, Air India ?? pic.twitter.com/euIREDIzkV
— Ratan N. Tata (@RNTata2000) October 8, 2021
ಟಾಟಾ ಸನ್ಸ್ ತೆಕ್ಕೆಗೆ ಏರ್ ಇಂಡಿಯಾ
ಟಾಟಾ ಸನ್ಸ್ ಪ್ರೈವೇಟ್ ಲಿಮಿಟೆಡ್ 18,000 ಕೋಟಿಗೆ ಇವಿ ಕೋಟ್ ಸಲ್ಲಿಸಿತ್ತು. ಏರ್ ಇಂಡಿಯಾ ಕಂಪನಿಯ ಬಿಡಿಂಗ್ನಲ್ಲಿ ಟಾಟಾ ಸನ್ಸ್ ಗೆಲುವು ಸಾಧಿಸಿದೆ ಎಂದು ಅವರು ತಿಳಿಸಿದರು. ಭಾರತ ಸರ್ಕಾರವು ತನ್ನ ಅಧೀನದಲ್ಲಿರುವ ಏರ್ ಇಂಡಿಯಾದ ಶೇ 100ರಷ್ಟು ಷೇರುಗಳನ್ನೂ ಮಾರಾಟ ಮಾಡಲು ಒಪ್ಪಿಕೊಂಡಿದ್ದು, ಏರ್ ಇಂಡಿಯಾ ಖಾಸಗೀಕರಣದ ಕುರಿತು ಇಷ್ಟು ವರ್ಷ ಕೇಳಿಬರುತ್ತಿದ್ದ ಪ್ರಶ್ನೆಗಳಿಗೆ ಉತ್ತರ ದೊರೆತಿದೆ.
ಇದನ್ನೂ ಓದಿ: Air India: ಟಾಟಾ ಸನ್ಸ್ ತೆಕ್ಕೆಗೆ ಏರ್ ಇಂಡಿಯಾ: ಸರ್ಕಾರದಿಂದ ಅಧಿಕೃತ ಘೋಷಣೆ
ಇದನ್ನೂ ಓದಿ: ಏರ್ ಇಂಡಿಯಾ ಖರೀದಿಗೆ ಟಾಟಾ ಸನ್ಸ್ ಬಿಡ್: ಯಾರಿಗೆ ಸಿಗಲಿದೆ ದೈತ್ಯ ಕಂಪನಿಯ ಆಧಿಪತ್ಯ
Published On - 5:25 pm, Fri, 8 October 21