Air India: ಸ್ಯಾನ್ ಫ್ರಾನ್ಸಿಸ್ಕೋಗೆ ಬದಲು ರಷ್ಯಾದಲ್ಲಿ ಇಳಿದ ವಿಮಾನ, ಭಾರತೀಯ ಪ್ರಯಾಣಿಕರಿಗಾಗಿ ವಿಶೇಷ ವಿಮಾನ ವ್ಯವಸ್ಥೆ

|

Updated on: Jun 07, 2023 | 11:56 AM

ರಾಷ್ಟ್ರ ರಾಜಧಾನಿಯಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ಹಾರಾಟ ನಡೆಸಿದ್ದ ​​​ಏರ್ ಇಂಡಿಯಾ (Air India) ವಿಮಾನದ ಎಂಜಿನ್​​ನಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು, ವಿಮಾನ ರಷ್ಯಾದಲ್ಲಿ ಲ್ಯಾಂಡಿಂಗ್​​ ಆಗಿದೆ. ಇದೀಗ ರಷ್ಯಾದಲ್ಲಿರುವ ಭಾರತೀಯರನ್ನು ಮತ್ತೆ ಭಾರತಕ್ಕೆ ಕರೆತರಲು ವ್ಯವಸ್ಥೆ ಮಾಡಲಾಗಿದೆ ಎಂದು ಏರ್ ಇಂಡಿಯಾ ತಿಳಿಸಿದೆ.

Air India: ಸ್ಯಾನ್ ಫ್ರಾನ್ಸಿಸ್ಕೋಗೆ ಬದಲು ರಷ್ಯಾದಲ್ಲಿ ಇಳಿದ ವಿಮಾನ, ಭಾರತೀಯ ಪ್ರಯಾಣಿಕರಿಗಾಗಿ ವಿಶೇಷ ವಿಮಾನ ವ್ಯವಸ್ಥೆ
ಏರ್ ಇಂಡಿಯಾ ವಿಮಾನದೊಳಗಿನ ದೃಶ್ಯದ ಸಾಂದರ್ಭಿಕ ಚಿತ್ರ
Follow us on

ದೆಹಲಿ: ರಾಷ್ಟ್ರ ರಾಜಧಾನಿಯಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ಹಾರಾಟ ನಡೆಸಿದ್ದ ​​​ಏರ್ ಇಂಡಿಯಾ (Air India) ವಿಮಾನದ ಎಂಜಿನ್​​ನಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು, ರಷ್ಯಾದ ಮಗದನ್‌ಗೆ ತಿರುಗಿಸಲಾಗಿತ್ತು. ರಷ್ಯಾದಲ್ಲಿ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ ಎಂದು ಏರ್ ಇಂಡಿಯಾ ಅಧಿಕಾರಿಗಳು ತಿಳಿಸಿದ್ದಾರೆ. ಜತೆಗೆ ತಾಂತ್ರಿಕ ದೋಷವನ್ನು ಸರಿಪಡಿಸಲಾಗುತ್ತಿದೆ ಎಂದು ಹೇಳಿದ್ದರು. ಇದೀಗ ರಷ್ಯಾದಲ್ಲಿ ಸಿಲುಕಿಕೊಂಡಿರುವ ಭಾರತೀಯ ಪ್ರಯಾಣಿಕರನ್ನು ಬುಧವಾರ ಮುಂಬೈನಿಂದ ಮೀಸಲು ವಿಮಾನವೊಂದು ಕರೆತರಲಿದೆ ಎಂದು ಏರ್ ಇಂಡಿಯಾ ಇಂದು (ಜೂ. 7) ತಿಳಿಸಿದೆ.

ದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ಹಾರಾಟ ನಡೆಸಿದ್ದ ​​​ಏರ್ ಇಂಡಿಯಾ (Air India) ವಿಮಾನದ ಎಂಜಿನ್​​ನಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು, ರಷ್ಯಾದ ಮಗದನ್‌ಗೆ ತಿರುಗಿಸಲಾಗಿತ್ತು. ರಷ್ಯಾದಲ್ಲಿ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ ಎಂದು ಏರ್ ಇಂಡಿಯಾ ಅಧಿಕಾರಿಗಳು ತಿಳಿಸಿದ್ದರು.

ಇದನ್ನೂ ಓದಿ: Air India Flight : ಏರ್ ಇಂಡಿಯಾ ಪೈಲಟ್‌, ಕ್ಯಾಬಿನ್ ಸಿಬ್ಬಂದಿಗಳ ವೇತನ ಹೆಚ್ಚಳ

ದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ಹಾರಾಟ ನಡೆಸುತ್ತಿದ್ದ ಏರ್ ಇಂಡಿಯಾ ಫ್ಲೈಟ್ AI173 ಎಂಜಿನ್‌ನಲ್ಲಿ ತಾಂತ್ರಿಕ ದೋಷವನ್ನು ಪತ್ತೆ ಮಾಡಿ ಅಭಿವೃದ್ಧಿಪಡಿಸಲಾಗಿತ್ತು. 216 ಪ್ರಯಾಣಿಕರು ಮತ್ತು 16 ಸಿಬ್ಬಂದಿಯಿದ್ದ ವಿಮಾನವನ್ನು ರಷ್ಯಾದ ಮಗದನ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸಲಾಯಿತು. ಪ್ರಯಾಣಿಕರನ್ನು ಸುರಕ್ಷಿತವಾಗಿ ಅವರ ಗಮ್ಯಸ್ಥಾನಗಳಿಗೆ ತಲುಪಿಸಲು ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗುವುದು ಎಂದು ಹೇಳಿದರು. ವಿಮಾನದ ತಾಂತ್ರಿಕ ದೋಷದ ಬಗ್ಗೆ ತಪಾಸಣೆ ಮಾಡಲಾಗುತ್ತಿದೆ ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.

 

Published On - 11:41 am, Wed, 7 June 23